ಆಟೋಚಾಲಕ ಮನೋಜ್ ಕೊಲೆ ಪ್ರಕರಣ ತೃತೀಯಲಿಂಗಿ ಸೇರಿ ಮೂವರು ಅರೆಸ್ಟ್

ಬೆಂಗಳೂರು: ಕಾಮಾಕ್ಷಿಪಾಳ್ಯದಲ್ಲಿ ಆಟೋ ಚಾಲಕ ಮನೋಜ್ ಕುಮಾರ್​ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೋಜಿ, ಶಿವು ಸೇರಿದಂತೆ 6 ಆರೋಪಿಗಳನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಶಿವು ಅಲಿಯಸ್ ಶಿವರಾಜ್, ರೋಜಿ@ ರವಿ, ಸತ್ಯ ಮಣಿಕಂಠ, ಪ್ರತಾಪ್ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟವರನ್ನ ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹತ್ಯೆಯ ವೃತ್ತಾಂತ: ಕೊಲೆಯಾದ ಆಟೋ ಚಾಲಕ ಮನೋಜ್ ತೃತೀಯ ಲಿಂಗಿ ರೋಜಿಯನ್ನ ಪ್ರೀತಿಸುತ್ತಿದ್ದ. ಆದರೆ ಕೆಲ ಕಾಲ ಮನೋಜ್ ಊರಿಗೆ ಹೋದಾಗ ಆರೋಪಿ ಶಿವು, […]

ಆಟೋಚಾಲಕ ಮನೋಜ್ ಕೊಲೆ ಪ್ರಕರಣ ತೃತೀಯಲಿಂಗಿ ಸೇರಿ ಮೂವರು ಅರೆಸ್ಟ್
ಸಾಧು ಶ್ರೀನಾಥ್​

Updated on: Oct 28, 2019 | 3:34 PM

ಬೆಂಗಳೂರು: ಕಾಮಾಕ್ಷಿಪಾಳ್ಯದಲ್ಲಿ ಆಟೋ ಚಾಲಕ ಮನೋಜ್ ಕುಮಾರ್​ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೋಜಿ, ಶಿವು ಸೇರಿದಂತೆ 6 ಆರೋಪಿಗಳನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಶಿವು ಅಲಿಯಸ್ ಶಿವರಾಜ್, ರೋಜಿ@ ರವಿ, ಸತ್ಯ ಮಣಿಕಂಠ, ಪ್ರತಾಪ್ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟವರನ್ನ ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಹತ್ಯೆಯ ವೃತ್ತಾಂತ:
ಕೊಲೆಯಾದ ಆಟೋ ಚಾಲಕ ಮನೋಜ್ ತೃತೀಯ ಲಿಂಗಿ ರೋಜಿಯನ್ನ ಪ್ರೀತಿಸುತ್ತಿದ್ದ. ಆದರೆ ಕೆಲ ಕಾಲ ಮನೋಜ್ ಊರಿಗೆ ಹೋದಾಗ ಆರೋಪಿ ಶಿವು, ರೋಜಿ ಲವ್ ನಲ್ಲಿ ಬಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ರು. ಈ ಮಧ್ಯೆ ಊರಿಂದ ವಾಪಸ್ಸು ಬಂದ ಮನೋಜ್, ರೋಜಿಯನ್ನ ಪ್ರೀತಿಸದಂತೆ ಶಿವುಗೆ ಬೆದರಿಸಿದ್ದ. ಹೀಗಾಗಿ ಶಿವು, ರೋಜಿ ಹಾಗೂ ಸಹಚರರು ಮನೋಜ್ ನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ಬಂಧಿಸಿ, ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ.

Published On - 3:31 pm, Mon, 28 October 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us