ಆಟೋಗಳ ಪರಸ್ಪರ ಡಿಕ್ಕಿ: ಇಬ್ಬರನ್ನು ಚಾಕುವಿನಿಂದ ಇರಿದು ಕೊಂದ ಚಾಲಕ

| Updated By:

Updated on: May 25, 2020 | 9:46 AM

ಮೈಸೂರು: ಲಗೇಜ್ ಆಟೋ ಹಾಗೂ ಪ್ಯಾಸೆಂಜರ್ ಆಟೋ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಕೋಟೆ ಹುಂಡಿಯಲ್ಲಿ ನಡೆದಿದೆ. ಟಿ.ಮಂಜುನಾಥ್(33), ಆರ್.ಮಂಜುನಾಥ್(35) ಕೊಲೆಯಾದವರು. ಪ್ಯಾಸೆಂಜರ್ ಆಟೋಗೆ ಲಗೇಜ್ ಆಟೋ ಟಚ್ ಆದ ಕಾರಣ ಗಲಾಟೆ ಶುರುವಾಗಿದೆ. ಲಗೇಜ್ ಆಟೋದಲ್ಲಿ ಟಿ.ಮಂಜುನಾಥ್, ಆರ್.ಮಂಜುನಾಥ್ ಮತ್ತು ಮೂರ್ತಿ ಎಂಬುವವರಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಪ್ಯಾಸೆಂಜರ್ ಆಟೋ ಚಾಲಕ ಯೋಗೇಶ್(23) ಇರಿದು ಇಬ್ಬರನ್ನು ಕೊಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆರ್.ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದು, […]

ಆಟೋಗಳ ಪರಸ್ಪರ ಡಿಕ್ಕಿ: ಇಬ್ಬರನ್ನು ಚಾಕುವಿನಿಂದ ಇರಿದು ಕೊಂದ ಚಾಲಕ
ಪ್ರಾತಿನಿಧಿಕ ಚಿತ್ರ
Follow us on

ಮೈಸೂರು: ಲಗೇಜ್ ಆಟೋ ಹಾಗೂ ಪ್ಯಾಸೆಂಜರ್ ಆಟೋ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಕೋಟೆ ಹುಂಡಿಯಲ್ಲಿ ನಡೆದಿದೆ. ಟಿ.ಮಂಜುನಾಥ್(33), ಆರ್.ಮಂಜುನಾಥ್(35) ಕೊಲೆಯಾದವರು.

ಪ್ಯಾಸೆಂಜರ್ ಆಟೋಗೆ ಲಗೇಜ್ ಆಟೋ ಟಚ್ ಆದ ಕಾರಣ ಗಲಾಟೆ ಶುರುವಾಗಿದೆ. ಲಗೇಜ್ ಆಟೋದಲ್ಲಿ ಟಿ.ಮಂಜುನಾಥ್, ಆರ್.ಮಂಜುನಾಥ್ ಮತ್ತು ಮೂರ್ತಿ ಎಂಬುವವರಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಪ್ಯಾಸೆಂಜರ್ ಆಟೋ ಚಾಲಕ ಯೋಗೇಶ್(23) ಇರಿದು ಇಬ್ಬರನ್ನು ಕೊಲೆ ಮಾಡಿದ್ದಾನೆ.

ಗಂಭೀರವಾಗಿ ಗಾಯಗೊಂಡಿದ್ದ ಆರ್.ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದು, ಟಿ.ಮಂಜುನಾಥ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಮೂರ್ತಿ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಯೋಗೇಶ್​ನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಸಹ ಕೆಲ ಅಪರಾಧ ಪ್ರಕರಣಗಳಲ್ಲಿ ಯೋಗೇಶ್ ಭಾಗಿಯಾಗಿದ್ದ.