ಚಿಕ್ಕಬಳ್ಳಾಪುರ: ಗ್ರಾಮಸ್ಥರೊಂದಿಗಿನ ವಾಗ್ವಾದದ ನಂತರ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಅಬಕಾರಿ ಪೊಲೀಸರ ವಾಹನ

ಬಳ್ಳಾರಿಯಲ್ಲಿ ರಕ್ಷಣಾ ಸಿಬ್ಬಂದಿಗಾಗಿ ಮಾರಾಟಕ್ಕಿರುವ ಮದ್ಯದ ಬಾಟಲ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಸ್ಥಳಕ್ಕೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಆರೋಪಿ ಸಹಿತ ದುಬಾರಿ ಬೆಲೆಯ ಮದ್ಯದ ಬಾಟಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ: ಗ್ರಾಮಸ್ಥರೊಂದಿಗಿನ ವಾಗ್ವಾದದ ನಂತರ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಅಬಕಾರಿ ಪೊಲೀಸರ ವಾಹನ
ಚಿಕ್ಕಬಳ್ಳಾಪುರದಲ್ಲಿ ಮೂರು ಬೈಕ್​ಗಳಿಗೆ ಡಿಕ್ಕಿ ಹೊಡೆದ ಅಬಕಾರಿ ಪೊಲೀಸರ ವಾಹನ
Follow us
Rakesh Nayak Manchi
|

Updated on:Mar 28, 2023 | 9:58 PM

ಚಿಕ್ಕಬಳ್ಳಾಪುರ: ಅಕ್ರಮ ಮದ್ಯ (Liquor ) ಸರಬರಾಜು ಪತ್ತೆಗೆ ಹೋದಾಗ ಗ್ರಾಮಸ್ಥರು ಹಾಗೂ ಅಬಕಾರಿ ಅಧಿಕಾರಿಗಳ ಮದ್ಯೆ ಮಾತಿನ ಚಕಾಮಕಿ ನಡೆದ ಘಟನೆ ಗೌರಿಬಿದನೂರು ತಾಲೂಕಿನ ಹಾಲಗಾನಹಳ್ಳಿ ಗ್ರಾಮದಲ್ಲಿ  ನಡೆದಿದೆ. ಗಲಾಟೆ ನಂತರ ಅಬಕಾರಿ ಸಿಬ್ಬಂದಿ ಅತಿ ವೇಗವಾಗಿ ಜೀಪು ಚಾಲಯಿಸಿಕೊಂಡು ಹೋಗಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮೂರು ಬೈಕ್​ಗಳಿಗೆ ಜೀಪು ಡಿಕ್ಕಿಯಾಗಿದ್ದು, ಬೈಕ್ ಸವಾರ ಮಂಜುನಾಥ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯಲ್ಲಿ ಇನ್ನಿಬ್ಬರು ಬೈಕ್ ಸವಾರರಿಗೆ ಗಾಯಗಳಾಗಿದ್ದು, ಗೌರಿಬಿದನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರ ಜೊತೆಯೂ ಗ್ರಾಮಸ್ಥರ ವಾಗ್ವಾದ ನಡೆದಿದೆ.

ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ: ಬಿಆರ್‌ಎಸ್ ನಾಯಕಿ ಕೆ ಕವಿತಾಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್

ಬಳ್ಳಾರಿ: ರಕ್ಷಣಾ ಸಿಬ್ಬಂದಿಗಾಗಿ ಮಾರಾಟಕ್ಕಿದ್ದ ಮದ್ಯ ಅಕ್ರಮವಾಗಿ ಸಂಗ್ರಹ, 4 ಲಕ್ಷ ಮೌಲ್ಯದ ಮದ್ಯ ಜಪ್ತಿ!

ಬಳ್ಳಾರಿ: ರಕ್ಷಣಾ ಸಿಬ್ಬಂದಿಗಾಗಿ ಮಾರಾಟಕ್ಕಿರುವ ಮದ್ಯದ ಬಾಟಲ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ವ್ಯಕ್ತಿಯ ಮೇಲೆ ಜಿಲ್ಲಾ ಅಬಕಾರಿ ಅಧಿಕಾರಿಗಳ ತಂಡ ದಾಳಿ ನಡೆಸಿ ದುಬಾರಿ ಬೆಲೆಯ ಮದ್ಯದ ಬಾಟಲ್‌ಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ನಗರದ ವಿಮ್ಸ್‌ ಹಿಂಭಾಗದಲ್ಲಿನ ವಿದ್ಯಾನಗರದ ನಿವಾಸಿ ಈಶ್ವರ ರವಿಚಂದ್ರ ಮನೆ ಮೇಲೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ರಕ್ಷಣಾ ಸಿಬ್ಬಂದಿಗಾಗಿ ಮಾರಾಟಕ್ಕಿದ್ದ ದುಬಾರಿ ಬೆಲೆಯ ಒಟ್ಟು 4.01 ಲಕ್ಷ ರೂಪಾಯಿ ಮೌಲ್ಯದ 142 ಮದ್ಯದ ಬಾಟಲ್‌ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ಅಬಕಾರಿ ನಿರೀಕ್ಷ ಕರಾದ ಜ್ಯೋತಿಬಾಯಿ, ಉಪನಿರೀಕ್ಷ ಕ ರುದ್ರೇಗೌಡ, ಗೌಡಪ್ಪ, ಪೇದೆಗಳಾದ ಖಾಜಾ ಹುಸೇನ್‌ ಪೀರನ್‌, ಸದ್ದಾಂ ಹುಸೇನ್‌, ವಾಹನ ಚಾಲಕಿ ಗಾಯತ್ರಿ ಇದ್ದರು.

ರಾಜ್ಯಸ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 pm, Tue, 28 March 23