AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಚಾಕು ಇರಿತ, ಬೆಂಗಳೂರಿನಲ್ಲಿ ರಕ್ತದ ಮಡುವಿ‌ಲ್ಲಿದ್ದ ಮಹಿಳೆಯ ಪ್ರಾಣ ಉಳಿಸಿದ ಪೊಲೀಸರು

ಬಾಣಸವಾಡಿ ಪೊಲೀಸರು ರಸ್ತೆಯಲ್ಲಿ ರಕ್ತದ ಮಡುವಿ‌ಲ್ಲಿ ಬಿದ್ದಿದ್ದ ಮಹಿಳೆಯ ಪ್ರಾಣ ಉಳಿಸಿದ್ದಾರೆ.

Crime News: ಚಾಕು ಇರಿತ, ಬೆಂಗಳೂರಿನಲ್ಲಿ ರಕ್ತದ ಮಡುವಿ‌ಲ್ಲಿದ್ದ ಮಹಿಳೆಯ ಪ್ರಾಣ ಉಳಿಸಿದ ಪೊಲೀಸರು
ಪತಿ ದಿವಾಕರ್​ (ಎಡಚಿತ್ರ) ಕೊಲೆಗೆ ಯತ್ನ (ಬಲಚಿತ್ರ)
ವಿವೇಕ ಬಿರಾದಾರ
|

Updated on: Jun 24, 2023 | 8:54 AM

Share

ಬೆಂಗಳೂರು: ಬಾಣಸವಾಡಿ ಪೊಲೀಸರು (Police) ರಸ್ತೆಯಲ್ಲಿ ರಕ್ತದ ಮಡುವಿ‌ಲ್ಲಿ ಬಿದ್ದಿದ್ದ ಮಹಿಳೆಯ (Woman) ಪ್ರಾಣ ಉಳಿಸಿದ್ದಾರೆ. ನಿಖಿತಾ (28) ಗಾಯಗೊಳಗಾದ ಮಹಿಳೆ. ತ್ರೀವ್ರ ರಕ್ತ ಸ್ರಾವವಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹಿಳೆಯನ್ನು ಬಾಣಸವಾಡಿ ಪೊಲೀಸರು (Banasavadi Police) ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ನಂತರ ನಾಲ್ಕು ಬಾಟಲಿ ರಕ್ತ ವ್ಯವಸ್ಥೆ ಮಾಡಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ನಿಖಿತಾರನ್ನು ಮಹಿಳಾ ಪೊಲೀಸ್ ಸಿಬ್ಬಂದಿಗಳೇ ಆರೈಕೆ ಮಾಡುತ್ತಿದ್ದಾರೆ.

ಅಷ್ಟಕ್ಕೂ ನಿಖಿತಾ ರಕ್ತದ ಮಡುವಿನಲ್ಲಿ ಬಿದ್ದಿದ್ದು ಏಕೆ ?

ನಿಖಿತಾ (28) ದಿವಾಕರ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಪ್ರೀತಿಸಿ ಮದುವೆಯಾದ ಕಾರಣ ನಿಖಿತಾ ಪೋಷಕರಿಂದ ದೂರವಾಗಿದ್ದಳು. ದಂಪತಿ ಜೂನ್ 21 ರಂದು ಬೆಳಗಿನ ಜಾವ ಬೈಕ್​​ನಲ್ಲಿ ಹೋಗುತ್ತಿದ್ದರು. ಈ ವೇಳೆ ದಿವಾಕರ್ ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಪತ್ನಿ ನಿಖಿತಾಳನ್ನು ಕೆಳಗೆ ಬೀಳಿಸಿ ಐದು ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಇದನ್ನೂ ಓದಿ: 11 ತಿಂಗಳ ಕಂದಮ್ಮನನ್ನು ರೇಪ್ ಮಾಡಿದ 12 ವರ್ಷದ ಅಪ್ರಾಪ್ತ ಬಾಲಕ

ಈ ಹಿನ್ನೆಲೆ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಿಖಿತಾಳನ್ನು ಬಾಣಸವಾಡಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ್ದಾರೆ. ಇನ್ನು ಕೌಟುಂಬಿಕ ಕಲಹ ಹಿನ್ನಲೆ ಪತಿ ದಿವಾಕರ್​​ ಚಾಕುವಿನಿಂದ ಇರಿದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬಾಣಸವಾಡಿ ಪೊಲೀಸರಿಂದ ಆರೋಪಿ ದಿವಾಕರ್​​ನನ್ನು ಬಂಧಸಿದ್ದಾರೆ. ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದಂಪತಿ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ, ನಗದು ದೋಚಿ ಪರಾರಿ

ತುಮಕೂರು: ತೋಟದ ಒಂಟಿ ಮನೆಯಲ್ಲಿದ್ದ ವಸ್ತುಗಳನ್ನು ಕದ್ದು, ಕಳ್ಳರು ದಂಪತಿ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಬಾಣಸಂದ್ರ ಬಳಿಯ ಕಳ್ಳನಗಿಡ ಪ್ರದೇಶದಲ್ಲಿ ನಡೆದಿದೆ. ಕೃಷ್ಣೇಗೌಡ ಎಂಬುವರ ಮನೆ ಮೇಲೆ 9ಕ್ಕೂ ಹೆಚ್ಚು ಕಳ್ಳರ ಗ್ಯಾಂಗ್ ದಾಳಿ ಮಾಡಿದೆ. ಈ ವೇಳೆ ಕೃಷ್ಣೇಗೌಡ ಪತ್ನಿ ಇಂದ್ರಮ್ಮರ ಬಾಯಿಗೆ ಬಟ್ಟೆ ತುರುಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಇಂದ್ರಮ್ಮ ಕೊರಳಲ್ಲಿದ್ದ ಮಾಂಗಲ್ಯ ಸರ, ಓಲೆ ಹಾಗೂ ಮನೆಯಲ್ಲಿದ್ದ 20,000 ನಗದನ್ನು ದೋಚಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾಗಿರೊ ದಂಪತಿ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್