ಹಫ್ತಾ ಕೊಡದಿದ್ದಕ್ಕೆ ಯುವಕನ ಕೈಕತ್ತರಿಸಿದ ಪುಡಿ ರೌಡಿ ಗ್ಯಾಂಗ್​

ಹಫ್ತಾ ಕೊಡದಿದ್ದಕ್ಕೆ ಪುಡಿ ರೌಡಿ ಗ್ಯಾಂಗ್ ಯುವಕನ ಕೈಕತ್ತರಿಸಿರುವ ಘಟನೆ ಬಾಪೂಜಿನಗರದ ಶಾಮಣ್ಣ ಗಾರ್ಡನ್​ ಶೋಭಾ ಟೆಂಟ್​ ಬಳಿ ನಡೆದಿದೆ.

ಹಫ್ತಾ ಕೊಡದಿದ್ದಕ್ಕೆ ಯುವಕನ ಕೈಕತ್ತರಿಸಿದ ಪುಡಿ ರೌಡಿ ಗ್ಯಾಂಗ್​
ಸಾಂಧರ್ಬಿಕ ಚಿತ್ರ
TV9kannada Web Team

| Edited By: Vivek Biradar

Sep 27, 2022 | 10:51 PM

ಬೆಂಗಳೂರು: ಹಫ್ತಾ (Hafta) ಕೊಡದಿದ್ದಕ್ಕೆ ಪುಡಿ ರೌಡಿ ಗ್ಯಾಂಗ್ (Gang) ಯುವಕನ ಕೈಕತ್ತರಿಸಿರುವ ಘಟನೆ ಬಾಪೂಜಿನಗರದ ಶಾಮಣ್ಣ ಗಾರ್ಡನ್​ ಶೋಭಾ ಟೆಂಟ್​ ಬಳಿ ನಡೆದಿದೆ. ಶ್ವೇಬ್(20) ಹಲ್ಲೆಗೊಳಗಾದ ಯುವಕ. ಪುಡಿ ರೌಡಿಗಳಾದ ಮುಬಾರಕ್, ಸಮೀರ್​ ಸೇರಿ ಐವರಿಂದ ಕೃತ್ಯ ಎಸಗಲಾಗಿದೆ. ಆರೋಪಿಗಳು ಬೈಕ್​ನಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳು ಶ್ವೇಬ್​ನನ್ನು ಸ್ಥಳೀಯರು ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದೇ ಗ್ಯಾಂಗ್​ 10 ದಿನಗಳ ಹಿಂದೆ ಕಿಟಕಿ ಗಾಜು ಒಡೆದು ಹಫ್ತಾ ನೀಡುವಂತೆ ಶ್ವೇಬ್​ಗೆ ಧಮ್ಕಿ ಹಾಕಿತ್ತು. ಘಟನೆ ಬಗ್ಗೆ ಶ್ವೇಬ್​ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೇ ಹಿನ್ನೆಲೆಯಲ್ಲಿ ಇಂದು ಶ್ವೇಬ್​ನ ಕೈಕತ್ತರಿಸಿಲಾಗಿದೆ. ​ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಐವರು ಪೊಲೀಸ್ ಇನ್ಸ್​ಪೆಕ್ಟರ್​ಗಳ ವರ್ಗಾವಣೆ

ಬೆಂಗಳೂರು: ಐವರು ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಎಸ್.ಎನ್.ಹಾಲಪ್ಪ, ಇನ್ಸ್​ಪೆಕ್ಟರ್, ವಿಧಾನಸೌಧ ಪೊಲೀಸ್​ ಠಾಣೆ, ಜೆ.ಕೆ.ಸುಬ್ರಹ್ಮಣ್ಯ, ಇನ್ಸ್​ಪೆಕ್ಟರ್, ರಾಜ್ಯಗುಪ್ತ ವಾರ್ತೆ ವಿಭಾಗ, ಡಿ.ಮುಸ್ತಾಕ್ ಅಹ್ಮದ್, ಇನ್ಸ್​ಪೆಕ್ಟರ್, ಲೋಕಾಯುಕ್ತ, ಯಲಿಗಾರ್ ಪ್ರಮೋದ್, ಇನ್ಸ್​ಪೆಕ್ಟರ್, ಡಿಎಸ್​ಬಿ, ಧಾರವಾಡ, ಜೈಪಾಲ್ ಎ.ಪಾಟೀಲ್, ಇನ್ಸ್​ಪೆಕ್ಟರ್, ರಾಜ್ಯಗುಪ್ತ ವಾರ್ತೆ ವಿಭಾಗ ಅವರನ್ನು ವರ್ಗಾವಣೆ ಮಾಡಲಾಗಿದೆ.

ಬೆಂಗಳೂರಿನಲ್ಲಿ 7 ಕೋಟಿ 80 ಲಕ್ಷ ಮೌಲ್ಯದ ಡ್ರಗ್ಸ್​​ ಜಪ್ತಿ, ಮಹಿಳೆಯರು ಸೇರಿ ಓರ್ವ ವಿದೇಶಿ ಪ್ರಜೆ ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ 7 ಕೋಟಿ 80 ಲಕ್ಷ ಮೌಲ್ಯದ ಡ್ರಗ್ಸ್​​ ಜಪ್ತಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿ ನಾಲ್ವರು ಮಹಿಳೆಯರು ಸೇರಿ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಸಿಸಿಬಿ ಪೊಲೀಸರು 1 ಕೆ.ಜಿ 4 ಗ್ರಾಂ MDMA, 8 ಕೆ.ಜಿ ಹ್ಯಾಶಿಸ್ ಆಯಿಲ್, 10 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ. ವಿವೇಕನಗರ ಪೊಲೀಸರು ಜೂನ್​ 24ರಂದು ಡಿಜೆಯೊಬ್ಬನನ್ನು ಬಂಧಿಸಿದ್ದರು. ಬಳಿಕ ಡ್ರಗ್ಸ್​​ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಆಂಧ್ರದ ಚಿಂತಪಲ್ಲಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದು ಪೆಡ್ಲರ್ಸ್​​ಗೆ ಆರೋಪಿಗಳು ಗಾಂಜಾ ನೀಡ್ತಿದ್ದರು. ಡ್ರಗ್ಸ್​ ನೀಡಿ ನಾಲ್ವರು ಮಹಿಳೆಯರು ವಾಪಾಸಾಗುತ್ತಿದ್ದರು. ಈ ವೇಳೆ ಸಿಸಿಬಿ ಪೊಲೀಸರು ನಾಲ್ವರು ಮಹಿಳೆಯರು ಸೇರಿ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ.

ಕಿಡ್ನ್ಯಾಪ್ ಮಾಡಿ ಹಣ ಪಡೆದ ಗ್ಯಾಂಗ್ ಅರೆಸ್ಟ್

ಬೆಂಗಳೂರು: ಸಂಪಿಗೇಹಳ್ಳಿಯಲ್ಲಿ ಉದ್ಯಮಿ ಪುತ್ರನನ್ನು ಅಪಹರಿಸಿ ಹಣ ಪಡೆದಿದ್ದ ಗ್ಯಾಂಗ್ ಅರೆಸ್ಟ್ ಮಾಡಲಾಗಿದೆ. ಸೆ.2ರಂದು ಬೆಳಗಿನ ಜಾವ ಉದ್ಯಮಿ ಮನೆಗೆ ನುಗ್ಗಿ 14 ವರ್ಷದ ಬಾಲಕನನ್ನು ಸುನಿಲ್ ಕುಮಾರ್ ಮತ್ತು ನಾಗೇಶ್ ಎಂಬುವವರು ಕಿಡ್ನ್ಯಾಪ್​ ಮಾಡಿ ಉದ್ಯಮಿಯ ಕಾರನ್ನೇ ಬಳಸಿ ಮಗು ಸಮೇತ ಎಸ್ಕೇಪ್ ಆಗಿದ್ದರು. ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪಿದ ತಂದೆ ಅಪಹರಣಕಾರರಿಗೆ ₹15 ಲಕ್ಷ ನೀಡಿ ಸ್ಥಳದಲ್ಲೇ ಕಾರು ನಿಲ್ಲಿಸಿ ಮಗುವನ್ನು ಮನೆಗೆ ಕರೆ ತಂದಿದ್ದರು. ಬಳಿಕ ಟೆಕ್ನಿಕಲ್ ಮಾಹಿತಿ ಆಧರಿಸಿ ಪೊಲೀಸರು ಕಾರು ಪತ್ತೆ ಹಚ್ಚಿ ಖದೀಮರನ್ನು ಬಂಧಿಸಿದ್ದಾರೆ. ಬಂಧಿತರಿಂದ 9.69 ಲಕ್ಷ ನಗದು, ಕೆಟಿಎಂ ಬೈಕ್, ಕ್ಯಾಮರಾ ಜಪ್ತಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada