AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ: ಪ್ರಾಂಶುಪಾಲ, ಡೀನ್ ನಿರೀಕ್ಷಣಾ‌ ಜಾಮೀನು ಅರ್ಜಿ ವಜಾ

ಬೆಂಗಳೂರಿನ ಬನ್ನೇರುಘಟ್ಟದ ಎಎಮ್‌ಸಿ ಕಾಲೇಜಿನಲ್ಲಿ ಹೋಟೇಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡುತ್ತಿದ್ದ ವಿದ್ಯಾರ್ಥಿ ನಿಖಿಲ್ ಸುರೇಶ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹಿನ್ನಲೆ ಎಎಂಸಿ ಕಾಲೇಜ್​ ಪ್ರಾಂಶುಪಾಲ ಡಾ.ಜಿ.ಎಂ.ಸುದರ್ಶನ್ ಮತ್ತು ಡೀನ್ ದೀಪಕ್ ಟಂಡನ್​ರ ನಿರೀಕ್ಷಣಾ‌ ಜಾಮೀನು ಅರ್ಜಿಯನ್ನು ವಜಾ ಮಾಡಿ ಸಿಸಿಹೆಚ್ 70ರ ನ್ಯಾಯಾಧೀಶ ಬಾಲಗೋಪಾಲ ಕೃಷ್ಣ ಅವರು ಆದೇಶ ಹೊರಡಿಸಿದ್ದಾರೆ.

ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ: ಪ್ರಾಂಶುಪಾಲ, ಡೀನ್ ನಿರೀಕ್ಷಣಾ‌ ಜಾಮೀನು ಅರ್ಜಿ ವಜಾ
ಮೃತ ವಿದ್ಯಾರ್ಥಿ ನಿಖಿಲ್‌
Follow us
Ramesha M
| Updated By: ಗಂಗಾಧರ​ ಬ. ಸಾಬೋಜಿ

Updated on: Feb 07, 2024 | 7:20 PM

ಬೆಂಗಳೂರು, ಫೆಬ್ರವರಿ 7: ವಿದ್ಯಾರ್ಥಿಯ (student) ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹಿನ್ನಲೆ ಎಎಂಸಿ ಕಾಲೇಜ್​ ಪ್ರಾಂಶುಪಾಲ ಡಾ.ಜಿ.ಎಂ.ಸುದರ್ಶನ್ ಮತ್ತು ಡೀನ್ ದೀಪಕ್ ಟಂಡನ್​ರ ನಿರೀಕ್ಷಣಾ‌ ಜಾಮೀನು ಅರ್ಜಿಯನ್ನು ವಜಾ ಮಾಡಿ ಸಿಸಿಹೆಚ್ 70ರ ನ್ಯಾಯಾಧೀಶ ಬಾಲಗೋಪಾಲ ಕೃಷ್ಣ ಅವರು ಬುಧವಾರ  ಆದೇಶ ಹೊರಡಿಸಿದ್ದಾರೆ. ಮಧ್ಯಂತರ ಜಾಮೀನು ನೀಡಿದಾಗಲೂ ತನಿಖೆಗೆ ಸಹಕರಿಸಿಲ್ಲ. ತನಿಖಾಧಿಕಾರಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿಲ್ಲ ಎಂದು ಪಿಪಿ ಎ.ಆರ್.ಸತೀಶ್ ಗೌಡ ವಾದಮಂಡನೆ ಮಾಡಿದ್ದು, ಪ್ರಾಂಶುಪಾಲ, ಡೀನ್‌ ನಿರೀಕ್ಷಣಾ ಜಾಮೀನು ಅರ್ಜಿವನ್ನು ಕೋರ್ಟ್ ವಜಾ ಮಾಡಿದೆ.

ಮೃತ ನಿಖಿಲ್ ಸುರೇಶ್ ಬನ್ನೇರುಘಟ್ಟದ ಎಎಮ್‌ಸಿ ಕಾಲೇಜಿನಲ್ಲಿ ಹೋಟೇಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ನಿಖಿಲ್ ವಿದ್ಯಾರ್ಥಿನಿಯೊಬ್ಬಳ ಜೊತೆ ಜಗಳ ಮಾಡಿಕೊಂಡಿದ್ದನಂತೆ. ತನ್ನ ತಪ್ಪಿಲ್ಲದಿದ್ದರೂ ಕಾಲೇಜು ಆಡಳಿತ ಮಂಡಳಿ ನಿಖಿಲ್‌ನನ್ನು ಸಸ್ಪೆಂಡ್ ಮಾಡಿತ್ತು. ವಿದ್ಯಾರ್ಥಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟರೂ ಪ್ರವೇಶ ಪತ್ರ ನೀಡಿರಲಿಲ್ಲ. ಇದಕ್ಕೆ ಮನನೊಂದು ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದ.

ಪ್ರತಿಷ್ಠಿತ ಕಾಲೇಜ್​ನಲ್ಲಿ ವಿದ್ಯಾರ್ಥಿನಿ ಸಾವು: ಸಾವಿನ ಹಿಂದೆ ನೂರೆಂಟು ಅನುಮಾನ

ಶಿವಮೊಗ್ಗ: ನಗರದ ಪ್ರತಿಷ್ಠಿತ ಖಾಸಗಿ ಕಾಲೇಜ್​ನ ವಿದ್ಯಾರ್ಥಿನಿ ಮೇಘಶ್ರೀ ಅನುಮಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಳು. ಮಗಳ ಸಾವಿನ ಸುದ್ದಿ ಕೇಳುತ್ತಿದ್ದಂತೆ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿತ್ತು. ದ್ವಿತೀಯ ಪಿಯುಸಿ ವಿಜ್ಷಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಮೇಘಶ್ರೀಗೆ ವಾರದ ಪರೀಕ್ಷೆಗಳಿದ್ದವು. ಬಯಾಲಾಜಿ ವಿಷಯದ ಪರೀಕ್ಷೆ ನಡುವೆ ವಾಶ್ ರೂಂಗೆಂದು ಹೋಗುವುದಾಗಿ ಹೇಳಿದ ವಿದ್ಯಾರ್ಥಿನಿಯು ತಲೆಗೆ ಬಲವಾಗಿ ಪೆಟ್ಟು ಬಿದ್ದು ಮೃತಪಟ್ಟಿದ್ದಳು.

ಇದನ್ನೂ ಓದಿ: ಬೆಂಗಳೂರಿನ ಪಿಇಎಸ್ ಕಾಲೇಜ್​ ಕಟ್ಟಡದಿಂದ ಜಿಗಿದು ಬಿಬಿಎ ವಿದ್ಯಾರ್ಥಿ ಆತ್ಮಹತ್ಯೆ

ಈ ಘಟನೆಯಿಂದ ಕಾಲೇಜ್​ನಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿನಿಯ ಸಾವಿನ ಹಿಂದೆ ನೂರೆಂಟು ಅನುಮಾನಗಳಿದ್ದವು. ಈ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಮತ್ತು ಎಫ್ ಎಸ್ ಎಲ್ ತಂಡವು ಎಂಟ್ರಿಕೊಟ್ಟು ಪರಿಶೀಲನೆ ನಡೆಸಿತ್ತು. ಈ ನಡುವೆ ಕಾಲೇಜ್​ನಲ್ಲಿ ಇದ್ದ ವಿದ್ಯಾರ್ಥಿಗಳಿಗೆ ಏನಾಯಿತು ಎನ್ನುವುದೇ ಗೊತ್ತಾಗಿಲ್ಲ. ಎಲ್ಲರ ಬಾಯಿಯಲ್ಲಿ ಮೇಘಶ್ರೀ ಮೃತಪಟ್ಟಿದ್ದಾಳೆ ಎನ್ನುವ ಚರ್ಚೆ ನಡೆದಿತ್ತು.

ಈ ನಡುವೆ ಮೇಘಶ್ರೀ ಮೃತಪಟ್ಟಿದ್ದು ಹೇಗೆ, ಯಾಕೆ ಎನ್ನುವ ಪ್ರಶ್ನೆಗೆ ಕಾಲೇಜ್​ ಪ್ರಾಂಶುಪಾಲ ಗುರುರಾಜ್ ಚುಟುಕಾಗಿ ಸ್ಪಷ್ಟೀಕರಣ ನೀಡಿದರು. ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದು ಗಾಯವಾಗಿತ್ತು. ಬಳಿಕ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಿಸುವ ಮೊದಲೇ ವಿದ್ಯಾರ್ಥಿನಿಯು ಮೃತಪಟ್ಟಿದ್ದಳು.

ಇದನ್ನೂ ಓದಿ: ಬೆಂಗಳೂರು: ಹೋಟೆಲ್​ನಲ್ಲಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದ ವ್ಯಕ್ತಿಯ ಬಂಧನ

ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ವಿದ್ಯಾರ್ಥಿನಿಯು ಸಾವು ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಾಲೇಜ್ ನಲ್ಲಿ ಈ ಘಟನೆ ಬಳಿಕ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಡಿವೈಎಸ್ಪಿ ಸುರೇಶ್ ಮತ್ತು ಮೀಸಲು ಪೊಲೀಸ್ ಪಡೆಯ ವಾಹನ ಹಾಗೂ ದೊಡ್ಡ ಪೇಟೆ ಪೊಲೀಸರು ಎಂಟ್ರಿಕೊಟ್ಟಿದ್ದರು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸ ಅಧಿಕಾರಿಗಳು ಹರಸಾಹಸ ಪಟ್ಟಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು