ನಕಲಿ ಆಧಾರ್ ಕಾರ್ಡ್ ಬಳಸಿ ಭಾರತಕ್ಕೆ ಎಂಟ್ರಿ: ಬೆಂಗಳೂರಲ್ಲಿ ಮೂವರು ಅಕ್ರಮ ಬಾಂಗ್ಲಾ ವಲಸಿಗರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 22, 2023 | 6:02 PM

ಬೆಂಗಳೂರು ಹೊರವಲಯ ಬನ್ನೇರುಘಟ್ಟ ಪೊಲೀಸರು ನಕಲಿ ಆಧಾರ್ ಕಾರ್ಡ್ ಬಳಸಿ ಪಶ್ಚಿಮ ಬಂಗಾಳ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಮೂರು ಬಾಂಗ್ಲಾ ವಲಸಿಗರನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಬಾಂಗ್ಲಾ ದೇಶದಿಂದ ಭಾರತಕ್ಕೆ ಅಸಾಮಿಗಳು ನುಸಿಳಿದ್ದರು.

ನಕಲಿ ಆಧಾರ್ ಕಾರ್ಡ್ ಬಳಸಿ ಭಾರತಕ್ಕೆ ಎಂಟ್ರಿ: ಬೆಂಗಳೂರಲ್ಲಿ ಮೂವರು ಅಕ್ರಮ ಬಾಂಗ್ಲಾ ವಲಸಿಗರ ಬಂಧನ
ಬಂಧಿತರು
Follow us on

ಆನೇಕಲ್, ಡಿಸೆಂಬರ್​ 22: ನಕಲಿ ಆಧಾರ್ ಕಾರ್ಡ್ ಬಳಸಿ ಪಶ್ಚಿಮ ಬಂಗಾಳ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಬಾಂಗ್ಲಾ (Bangladesh) ವಲಸಿಗರನ್ನು ಬೆಂಗಳೂರು ಹೊರವಲಯ ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ರಫೀಕ್, ಸೈಫುಲಾ ಅಕ್ತರ್ ರೂಪ, ಮೊಹಮ್ಮದ್ ಮುಫೀಜ್ ಶೇಕ್ ಬಂಧಿತರು. ಏಜೆಂಟ್​ಗಳ ಮೂಲಕ ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಭಾರತಕ್ಕೆ ಎಂಟ್ರಿ ನೀಡಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಬಾಂಗ್ಲಾ ದೇಶದಿಂದ ಭಾರತಕ್ಕೆ ಅಸಾಮಿಗಳು ನುಸಿಳಿದ್ದರು.

ಕಳೆದ 18ನೇ ದಿನಾಂಕದಂದು ತಲಾಷ್ ಅಸೊಷಿಯೇಶನ್​ಗೆ ಓರ್ವ ಯುವತಿ ಪೋನ್ ಮಾಡಿದ್ದು, ಬಾಂಗ್ಲಾ ದೇಶದಿಂದ ಅಕ್ರಮವಾಗಿ ಕರೆಸಿಕೊಂಡು ಒತ್ತೆಯಾಳಾಗಿ ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾಳೆ. ಸೈಫುಲಾ ಅಕ್ತರ್ ರೂಪ ಎಂಬಾಕೆಗೆ ಪೋನ್ ಮಾಡಿ ರಿಪಾ ಅಕ್ತರ್​ ಬಳಿ ಕೆಲಸ ಕೇಳಿದ್ದಾಳೆ. ಕೆಲಸ ಕೊಡಿಸುವ ನೆಪದಲ್ಲಿ ಕಳೆದ ಮೇ ತಿಂಗಳಿನಲ್ಲಿ ಬಾಂಗ್ಲಾದಿಂದ ಅಕ್ರಮವಾಗಿ ಕರೆಸಿಕೊಂಡಿದ್ದಾನೆ.

ಇದನ್ನೂ ಓದಿ: ಪತ್ನಿಯನ್ನ ಹತ್ಯೆಗೈದು ಠಾಣೆಗೆ ಬಂದು ಶರಣಾದ ಪತಿ! ಅನುಮಾನ ಎಂಬ ಪಿಶಾಚಿಗೆ ಬಲಿಯಾದ್ಲಾ ಹೆಂಡತಿ?

ಸಹಜಾನ್ ಎಂಬ ಏಜೆಂಟ್ ಮೂಲಕ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ರಿಪಾ ಅಕ್ತರ್, ಇಂಡಿಯಾ ಬಾರ್ಡರ್ ಪೆಟ್ರಾಪುರ್ಗೆ ಬಂದು ಅಲ್ಲಿ ಏಜೆಂಟ್ ಸಂಪರ್ಕ ಮಾಡಿದ್ದಳೆ. ವೆಸ್ಟ್ ಬೆಂಗಾಲ್ ವಿಳಾಸ ನೀಡಿ ರೂಪಾ ಸಿಕ್ದರ್ ಎಂಬ ನಕಲಿ ಆಧಾರ್ ಕಾರ್ಡ್​ನ್ನು ಏಜೆಂಟ್​ ನೀಡಿದ್ದಾನೆ.

ರಿಪಾ ಅಕ್ತರ್ ಹೌರಾ ರೈಲ್ವೆ ನಿಲ್ದಾಣದಿಂದ ನಕಲಿ ಆಧಾರ್ ಕಾರ್ಡ್ ಬಳಸಿ ಬೆಂಗಳೂರಿಗೆ ಬಂದಿದ್ದಾಳೆ. ಅಲ್ಲಿಂದ ಬನ್ನೇರುಘಟ್ಟಕ್ಕೆ ಬಂದು ಸೈಫುಲಾ ಅಕ್ತರ್ ರೂಪ ಮನೆಯಲ್ಲಿ ವಾಸ ಮಾಡಿದ್ದಾಳೆ. ಕೆಲಸ ಕೊಡಿಸುವುದಾಗಿ ಕರೆಸಿಕೊಂಡು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾನೆ. ಎರಡು ಲಕ್ಷ ರೂ. ಹಣ ನೀಡಿದರೆ ವಾಪಸ್ ಕಳುಹಿಸುವುದಾಗಿ ಬೇಡಿಕೆ ಇಟ್ಟಿದ್ದಾನೆ.

ಇದನ್ನೂ ಓದಿ: ಶಿವಮೊಗ್ಗ: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಕತ್ತು ಸೀಳಿ ಎರಡನೇ ಪತ್ನಿಯ ಕೊಲೆ

ಈ ಬಗ್ಗೆ ರಿಪಾ ಅಕ್ತರ್ ತನ್ನ ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಬಳಿಕ ತಲಾಷ್ ಅಸೊಷಿಯೇಷನ್​ಗೆ ರಿಪಾ ಅಕ್ತರ್ ಸಹೋದರ ವಿಚಾರ ತಿಳಿಸಿದ್ದಾನೆ. ನೊಂದ ಯುವತಿಯನ್ನ ರಕ್ಷಣೆ ಮಾಡಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.