Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಜಿಎಫ್​: ಅತ್ತಿಗೆಯನ್ನು ಚಾಕುವಿನಿಂದ ಇರಿದು ಸಾಯಿಸಿದ ಮೈದುನ

ಅಣ್ಣನಾದ ಮುರಳಿಯ ಮೊದಲ ಪತ್ನಿ ಬೇತಮಂಗಲದಲ್ಲಿ ವಾಸವಿದ್ರೆ, ಎರಡನೇ ಪತ್ನಿ ಕೊತ್ತೂರು ಗ್ರಾಮದಲ್ಲಿ ವಾಸವಿದ್ರು. ಆದರೆ ಇತ್ತೀಚೆಗೆ ಮುರಳಿ ತನ್ನ ತಂದೆಯ ಬಳಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿದ್ದ. ಈ ವಿಚಾರವು ಮುರಳಿಯ ತಮ್ಮ ಚಲಪತಿಯ ಕಣ್ಣು ಕೆಂಪಗಾಗಿಸಿತ್ತು, ಅಲ್ಲದೆ ಅಣ್ಣ ಮುರಳಿ ಎರಡನೇ ಮದುವೆ ಮಾಡಿಕೊಂಡದ್ದ ವಿಚಾರಕ್ಕೂ ತಮ್ಮನಾದ ಚಲಪತಿಗೆ ಕೋಪವಿತ್ತು.

ಕೆಜಿಎಫ್​: ಅತ್ತಿಗೆಯನ್ನು ಚಾಕುವಿನಿಂದ ಇರಿದು ಸಾಯಿಸಿದ ಮೈದುನ
ಅತ್ತಿಗೆಯನ್ನು ಚಾಕುವಿನಿಂದ ಇರಿದು ಸಾಯಿಸಿದ ಮೈದುನ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on: Dec 21, 2023 | 5:17 PM

ಆಕೆ ತನ್ನ ಗಂಡನಿಗೆ ಎರಡನೇ ಹೆಂಡತಿ ಆದ್ರೂ ಸಂಸಾರದಲ್ಲೇನು ಸಮಸ್ಯೆ ಇರಲಿಲ್ಲ, ಗಂಡ ಮೀನು ಹಿಡಿಯುವ ಕೆಲಸ ಮಾಡಿದ್ರೆ ಈಕೆ ಕೂಡಾ ಹೂವು ಕಟ್ಟಿಕೊಂಡು ಜೀವನ ಮಾಡುತ್ತಿದ್ದಳು, ಹೀಗಿದ್ರು ಇವರಿಬ್ಬರ ಮೇಲೆ ಅವರದ್ದೇ ಕುಟುಂಬದವರಿಗೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು, ಮೈದುನನೇ ಬಂದು ಅತ್ತಿಗೆಯನ್ನು ಕೊಂದು ಹಾಕಿದ್ದಾನೆ. ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹೂವು, ಅಲ್ಲೇ ಚೆಲ್ಲಾಡಿರುವ ರಕ್ತದ ಕಲೆಗಳು, ಇನ್ನೊಂದೆಡೆ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಕಣ್ಣೀರು (Family dispute) ಈ ಎಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಕೆಜಿಎಫ್​ ತಾಲ್ಲೂಕು ಕೊತ್ತೂರು ಗ್ರಾಮದಲ್ಲಿ (KGF taluk in Kolar dist).

ಹೌದು ಬುಧವಾರ ರಾತ್ರಿ ಈ ಗ್ರಾಮದಲ್ಲಿ ತನ್ನ ಅತ್ತಿಗೆಯನ್ನು ಮೈದುನನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದಾನೆ, ತೇಜಸ್ವಿನಿ ಕೊಲೆಯಾದ ಮಹಿಳೆ. ಅಷ್ಟಕ್ಕೂ ಆಗಿದ್ದೇನು ಅಂತ ನೋಡೋದಾದ್ರೆ, ಕೊತ್ತೂರು ಗ್ರಾಮದ ಪಕ್ಕದಲ್ಲಿರುವ ಬ್ಯಾಟರಾನಹಳ್ಳಿ ಗ್ರಾಮದಲ್ಲಿ ಮುರಳಿ ಹಾಗೂ ಚಲಪತಿ ಅಣ್ಣ ತಮ್ಮಂದಿರಿದ್ದಾರೆ. ಈ ಪೈಕಿ ಮುರಳಿ ಹಾಗೂ ಚಲಪತಿ ನಡುವೆ ಹಲವು ವರ್ಷಗಳಿಂದ ತಮ್ಮೂರಿನಲ್ಲಿರುವ ಮೂರು ಎಕರೆ ಭೂಮಿಗೆ ಸಂಬಂಧಿಸಿದಂತೆ ವಿವಾದ ಇತ್ತು.

ಈ ಸಂಬಂಧ ಗಲಾಟೆ ಇತ್ತು. ಕಾರಣ ಮುರಳಿ ಪಿತ್ರಾರ್ಜಿತ ಅಸ್ತಿಯಲ್ಲಿ ಭಾಗ ಕೇಳಿದ್ದ ಅನ್ನೋ ಕಾರಣಕ್ಕೆ ಆಗಾಗ ಗಲಾಟೆ ನಡಯುತ್ತಲೇ ಇತ್ತು. ಮರುಳಿ ಎರಡು ಮದುವೆಯಾಗಿದ್ದ. ಈ ಪೈಕಿ ನಿನ್ನೆ ಬುಧವಾರ ಎರಡನೇ ಪತ್ನಿ ತೇಜಸ್ವಿನಿ ಮನೆಯಲ್ಲಿದ್ದಾಗ ಚಲಪತಿ ತನ್ನ ಮೂರು ಜನ ಸ್ನೇಹಿತರೊಂದಿಗೆ ಮನೆಗೆ ಬಂದು ನುಗ್ಗಿ ಮನೆಯ ಬಾಗಿಲಲ್ಲೇ ಇದ್ದ ತನ್ನ ಅತ್ತಿಗೆ ತೇಜಸ್ವಿನಿಗೆ ಚಾಕುವಿನಿಂದ ಇರಿದಿದ್ದಾನೆ. ಈವೇಳೆ ತೀವ್ರವಾಗಿ ಗಾಯಗೊಂಡ ತೇಜಸ್ವಿನಿಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಬ್ಯಾಟರಾಯನಹಳ್ಳಿ ಗ್ರಾಮದ ತಿಪ್ಪಣ್ಣ ಎಂಬುವರಿಗೆ ನಾಲ್ಕು ಜನ ಮಕ್ಕಳು ಆಪೈಕಿ ಮೂರು ಗಂಡು ಮಕ್ಕಳು ಒಂದು ಹೆಣ್ಣು ಮಗಳು. ಈ ಪೈಕಿ ಮುರಳಿ ತಿಪ್ಪಣ್ಣನ ದೊಡ್ಡ ಮಗ, ಮೀನು ಹಿಡಿಯುವ ಕೆಲಸ ಮಾಡಿಕೊಂಡಿದ್ದ ಮುರಳಿಗೆ ಎರಡು ಮದುವೆಯಾಗಿದ್ದ,ಇಬ್ಬರು ಪತ್ನಿಯರನ್ನು ನೋಡಿಕೊಂಡಿದ್ದ ಅವನ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ.

ಮೊದಲ ಪತ್ನಿ ಬೇತಮಂಗಲದಲ್ಲಿ ವಾಸವಿದ್ರೆ, ಎರಡನೇ ಪತ್ನಿ ಕೊತ್ತೂರು ಗ್ರಾಮದಲ್ಲಿ ವಾಸವಿದ್ರು. ಆದರೆ ಇತ್ತೀಚೆಗೆ ಮುರಳಿ ತನ್ನ ತಂದೆಯ ಬಳಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿದ್ದ. ಈ ವಿಚಾರ ಮುರಳಿ ತಮ್ಮ ಚಲಪತಿಯ ಕಣ್ಣು ಕೆಂಪಗಾಗಿಸಿತ್ತು, ಅಲ್ಲದೆ ಇವನು ಎರಡನೇ ಮದುವೆ ಮಾಡಿಕೊಂಡದ್ದ ವಿಚಾರಕ್ಕೂ ಚಲಪತಿಗೆ ಕೋಪವಿತ್ತು.

Also Read:  ಮೈಸೂರು ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕೈ ಕೈ ಮಿಲಾಯಿಸಿ, ದಾಯಾದಿಗಳಂತೆ ಬಡಿದಾಡಿಕೊಂಡ ಅಣ್ಣ ತಮ್ಮಂದಿರು -ಕಾರಣ ಏನು?

ಆ ಕಾರಣಕ್ಕೆ ಇವರಿಬ್ಬರ ನಡುವೆ ಹಲವು ಬಾರಿ ಗಲಾಟೆಗಳು ನಡೆದಿದ್ದವು, ಆದರೆ ಕಳೆದ ರಾತ್ರಿ ಅದೇನಾಯ್ತೋ ಏನೋ ಏಕಾಏಕಿ ಚಲಪತಿ ತನ್ನ ಸ್ನೇಹಿತರಾದ ಶ್ರೀನಿವಾಸ್​, ರಂಜಿತ್, ದಿನೇಶ್​ ರೊಂದಿಗೆ ಮುರಳಿಯ ಕೊತ್ತೂರು ಮನೆಗೆ ಬಂದಿದ್ದಾರೆ. ಈ ವೇಳೆ ಅಲ್ಲಿದ್ದ ಮುರಳಿಯನ್ನು ಮನೆಗೆ ಬಾ ಎಂದು ಕರೆದಿದ್ದಾರೆ, ನಾನು ಬರೋದಿಲ್ಲ ಎಂದು ಹೇಳಿ ಮುರಳಿ ಬಾಗಿಲು ಹಾಕಿಕೊಂಡು ಹೊಗಿದ್ದಾರೆ. ಈ ವೇಳೆ ಮತ್ತೆ ಬಂದು ಬಾಗಿಲು ತಟ್ಟಿದ್ದಾರೆ, ಆಗ ಮುರಳಿ ಎರಡನೇ ಪತ್ನಿ ತೇಜಸ್ವಿನಿ ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಚಲಪತಿ ಹಾಗೂ ಜೊತೆಯಲ್ಲಿದ್ದವರು ಹಿಂದೆ ಮುಂದೆ ನೋಡದೆ ಚಾಕುವಿನಿಂದ ಇರಿದಿದ್ದಾರೆ.

ಒಳಗೆ ಇದ್ದ ಮುರಳಿ ಏನಾಯ್ತು ಎಂದು ಬಂದು ನೋಡುವಷ್ಟರಲ್ಲಿ ಅಲ್ಲಿದ್ದವರು ಪರಾರಿಯಾಗಿದ್ದಾರೆ. ಕೂಡಲೇ ತೇಜಸ್ವಿನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರಾದ್ರು ಅಷ್ಟರಲ್ಲಿ ತೇಜಸ್ವಿನಿ ಮೃತಪಟ್ಟಿದ್ದಾಳೆ. ಸದ್ಯ ಬೇತಮಂಗಲ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ, ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಮೇಲ್ನೋಟಕ್ಕೆ ಇದೊಂದು ಜಮೀನು ಗಲಾಟೆಯ ಹಿನ್ನೆಲೆ ನಡೆದಿರುವ ಕೊಲೆ ಎನ್ನಲಾಗಿದೆ.

ಒಟ್ಟಾರೆ ಹುಟ್ಟು ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆ ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತು ಸರ್ವಕಾಲಿಕ ಸತ್ಯ. ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದರೂ, ಒಂದೇ ತಟ್ಟೆಯಲ್ಲಿ ತಿಂದು ಬೆಳೆದಿದ್ರೂ, ಹಣ ಆಸ್ತಿ ಅನ್ನೋ ವಿಷಯ ಬಂದಾಗ ಎಲ್ಲವನ್ನು ಮರೆತು ಹೀಗೆ ಕೊಲ್ಲೋದಕ್ಕೂ ಹಿಂದೆ ಸರಿಯದೆ ಮನುಷ್ಯತ್ವವನ್ನೇ ಮರೆತಿದ್ದು ಮಾತ್ರ ದುರಂತ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ