ಕೋಲ್ಕತ್ತಾದಲ್ಲಿ ಬಾಂಗ್ಲಾ ಸಂಸದನ ಕೊಲೆ; ಮೃತದೇಹ ತುಂಡರಿಸಿ ವಿವಿಧ ಸ್ಥಳಗಳಲ್ಲಿ ಎಸೆದ ಹಂತಕರು

ದೇಹದ ಭಾಗಗಳನ್ನು ಟ್ರಾಲಿ ಬ್ಯಾಗ್‌ನಲ್ಲಿ ಇರಿಸಿ ನಂತರ ಬೇರೆ ಬೇರೆ ಸ್ಥಳಗಳಲ್ಲಿ ಎಸೆಯಲಾಗಿದೆ. ಕೆಲವು ಭಾಗಗಳನ್ನು ಫ್ರಿಡ್ಜ್‌ನಲ್ಲಿಯೂ ಇರಿಸಲಾಗಿತ್ತು. ಆತನ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಶಂಕೆ ಬಾರದಂತೆ ಹಂತಕರು ಆತನ ಸಂಪರ್ಕಗಳಿಗೆ ಸಂದೇಶಗಳನ್ನು ಕಳುಹಿಸಿದ್ದು, ದೆಹಲಿಗೆ ಪ್ರಯಾಣಿಸುತ್ತಿರುವ ಕಾರಣ ಸಂಪರ್ಕಿಸದಂತೆ ಕೇಳಿಕೊಂಡಿದ್ದಾರೆ

ಕೋಲ್ಕತ್ತಾದಲ್ಲಿ ಬಾಂಗ್ಲಾ ಸಂಸದನ ಕೊಲೆ; ಮೃತದೇಹ ತುಂಡರಿಸಿ ವಿವಿಧ ಸ್ಥಳಗಳಲ್ಲಿ ಎಸೆದ ಹಂತಕರು
ಅನ್ವರುಲ್ ಅಜೀಮ್ ಅನಾರ್
Follow us
ರಶ್ಮಿ ಕಲ್ಲಕಟ್ಟ
|

Updated on: May 24, 2024 | 2:36 PM

ಕೊಲ್ಕತ್ತಾ ಮೇ 24: ಬಾಂಗ್ಲಾದೇಶದ ಸಂಸತ್ ಸದಸ್ಯ(Bangladesh MP) ಅನ್ವರುಲ್ ಅಜೀಮ್ ಅನಾರ್ (Anwarul Azim Anar) ಹತ್ಯೆಯಾಗಿದೆ. ಅನಾರ್ ಅವರನ್ನು ಮಹಿಳೆಯೊಬ್ಬರು ಕೋಲ್ಕತ್ತಾದ ನ್ಯೂ ಟೌನ್ ಫ್ಲಾಟ್‌ಗೆ ಕರೆದೊಯ್ದು ನಂತರ ಗುತ್ತಿಗೆ ಹಂತಕರು ಹತ್ಯೆಗೈದಿರಬಹುದು ಎಂದು ಪಶ್ಚಿಮ ಬಂಗಾಳ ಪೊಲೀಸರು ಶಂಕಿಸಿದ್ದಾರೆ. ಹನಿಟ್ರ್ಯಾಪ್ ( honeytrap) ಹೊರತಾಗಿ, ಕೊಲೆಯಲ್ಲಿ ಯುಎಸ್ ಪ್ರಜೆಯ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಕಾರ, ವ್ಯಕ್ತಿ ರಾಜಕಾರಣಿಯ ಆಪ್ತ ಸ್ನೇಹಿತನಾಗಿದ್ದು, ಹತ್ಯೆಗೆ ₹ 5 ಕೋಟಿ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ಫ್ಲಾಟ್ ಹೊಂದಿರುವ ಆ ವ್ಯಕ್ತಿ ಪ್ರಸ್ತುತ ಅಮೆರಿಕದಲ್ಲಿದ್ದಾನೆ. ಅನ್ವರುಲ್ ಅಜೀಮ್ ಅನಾರ್ ಕೊನೆಯದಾಗಿ ಕೋಲ್ಕತ್ತಾದ ಬಾಡಿಗೆ ಫ್ಲಾಟ್‌ಗೆ ಪ್ರವೇಶಿಸಿದ್ದರು.

ಬಾಂಗ್ಲಾದೇಶದ ಸಂಸದ ಮಹಿಳೆಯೊಬ್ಬರು ಹಾಕಿದ ಹನಿ ಟ್ರ್ಯಾಪ್‌ಗೆ ಸಿಲುಕಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. “ಅನಾರ್ ಅವರಿಗೆ ಮಹಿಳೆಯು ನ್ಯೂ ಟೌನ್ ಫ್ಲಾಟ್‌ಗೆ ಬರುವಂತೆ ಆಮಿಷವೊಡ್ಡಿದ್ದಾರೆಂದು ತೋರುತ್ತದೆ. ಅವರು ಫ್ಲಾಟ್‌ಗೆ ಹೋದ ಕೂಡಲೇ ಅವರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ” ಎಂದು ಅಧಿಕಾರಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಅನಾರ್ ಅವರು  ಒಬ್ಬ ವ್ಯಕ್ತಿ ಮತ್ತು ಮಹಿಳೆಯೊಂದಿಗೆ ಫ್ಲಾಟ್‌ಗೆ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಸಿಐಡಿ ಪತ್ತೆ ಮಾಡಿದೆ. ನಂತರ ಇಬ್ಬರೂ ಫ್ಲಾಟ್‌ನ ಹೊರಗೆ ಬಂದರು, ಆದರೆ ಸಂಸದರು ಮತ್ತೆ ಹೊರಗೆ ಬಂದಿದ್ದು ಕಾಣಿಸಲಿಲ್ಲ.

ಸಿಸಿಟಿವಿ ದೃಶ್ಯಗಳಲ್ಲಿ, ರಾಜಕಾರಣಿ ಇಬ್ಬರು ವ್ಯಕ್ತಿಗಳೊಂದಿಗೆ ಫ್ಲಾಟ್‌ಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಇಬ್ಬರೂ ನಂತರ ಹೊರಗೆ ಬಂದು ಮರುದಿನ ಫ್ಲಾಟ್‌ಗೆ ಮತ್ತೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ ಆದರೆ ಸಂಸದರು ಮತ್ತೆ ಕಾಣಿಸಲಿಲ್ಲ ಎಂದು ಅಧಿಕಾರಿ ಏಜೆನ್ಸಿಗೆ ತಿಳಿಸಿದರು.

ನಂತರ ಇಬ್ಬರೂ ದೊಡ್ಡ ಸೂಟ್‌ಕೇಸ್‌ನೊಂದಿಗೆ ಫ್ಲಾಟ್‌ನಿಂದ ಹೊರಬಂದಿದ್ದಾರೆ. ಪೊಲೀಸರು ಫ್ಲಾಟ್‌ನಲ್ಲಿ ರಕ್ತದ ಕಲೆಗಳನ್ನು ಕಂಡುಕೊಂಡಿದ್ದಾರೆ. ದೇಹದ ಭಾಗಗಳನ್ನು ಎಸೆಯಲು ಹಲವಾರು ಪ್ಲಾಸ್ಟಿಕ್ ಚೀಲಗಳನ್ನು ಸಹ ಬಳಸಲಾಗಿದೆ. ಸಂಸದರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ಮಾಡಿದ ನಂತರ, ಅವರ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಲಾಯಿತು. ಮೂಳೆಗಳಿಂದ ಮಾಂಸವನ್ನು ಬೇರ್ಪಡಿಸಿ ಮತ್ತು ಕೊಳೆಯುವಿಕೆ ನಿಧಾನವಾಗಲು ಅರಿಶಿನ ಪುಡಿ ಹಚ್ಚಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ ಸಂಸದನ ಕೊಲೆಗೂ ಮುನ್ನ ನಡೆದಿತ್ತು ಹನಿಟ್ರ್ಯಾಪ್​

ದೇಹದ ಭಾಗಗಳನ್ನು ಟ್ರಾಲಿ ಬ್ಯಾಗ್‌ನಲ್ಲಿ ಇರಿಸಿ ನಂತರ ಬೇರೆ ಬೇರೆ ಸ್ಥಳಗಳಲ್ಲಿ ಎಸೆಯಲಾಗಿದೆ. ಕೆಲವು ಭಾಗಗಳನ್ನು ಫ್ರಿಡ್ಜ್‌ನಲ್ಲಿಯೂ ಇರಿಸಲಾಗಿತ್ತು. ಆತನ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಶಂಕೆ ಬಾರದಂತೆ ಹಂತಕರು ಆತನ ಸಂಪರ್ಕಗಳಿಗೆ ಸಂದೇಶಗಳನ್ನು ಕಳುಹಿಸಿದ್ದು, ದೆಹಲಿಗೆ ಪ್ರಯಾಣಿಸುತ್ತಿರುವ ಕಾರಣ ಸಂಪರ್ಕಿಸದಂತೆ ಕೇಳಿಕೊಂಡಿದ್ದಾರೆ. ಇದೇ ವೇಳೆ ಸಂಸದರ ದೇಹದ ಚರ್ಮ ಸುಲಿದು ಕತ್ತರಿಸಿದ ಮುಂಬೈ ಮೂಲದ ಕಟುಕನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. “ಒಬ್ಬ ಜಿಹಾದ್ ಹವಾಲ್ದಾರ್(24) ಅನ್ನು ಬಂಧಿಸಲಾಗಿದೆ. ಬಾಂಗ್ಲಾದೇಶದ ಖುಲ್ನಾ ಮೂಲದ ಹವಾಲ್ದಾರ್ ಮುಂಬೈನಲ್ಲಿ ಅಕ್ರಮವಾಗಿ ನೆಲೆಸಿದ್ದರು. ಆತ ನೇರವಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ. ತನಿಖೆ ನಡೆಯುತ್ತಿದೆ’ ಎಂದು ಐಪಿಎಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ