2 ಸಾವಿರ ಹಣಕ್ಕಾಗಿ ಕೊಲೆ ಮಾಡಿ ಊರಲ್ಲಿ ಜಾಲಿಯಾಗಿ ಇದ್ದ ಆರೋಪಿಗಳು ಅರೆಸ್ಟ್​ ಆಗಿದ್ದೇ ರೋಚಕ

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ 2000 ಹಣಕ್ಕಾಗಿ ಓರ್ವ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಕೊಲೆ ಆರೋಪಿಗಳಾದ ಸಂತೋಷ್ ನಾಯ್ಕ್, ಹೊಳೆಪ್ಪ ಘಸ್ತಿ ಮತ್ತು ಮಹೇಶ್ ಬೇರಡ ರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಮಗನ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಶವ ಇನ್ನೂ ಪತ್ತೆಯಾಗಿಲ್ಲ.

2 ಸಾವಿರ ಹಣಕ್ಕಾಗಿ ಕೊಲೆ ಮಾಡಿ ಊರಲ್ಲಿ ಜಾಲಿಯಾಗಿ ಇದ್ದ ಆರೋಪಿಗಳು ಅರೆಸ್ಟ್​ ಆಗಿದ್ದೇ ರೋಚಕ
ಕೊಲೆ ಆರೋಪಿಗಳು
Edited By:

Updated on: Jan 17, 2025 | 2:31 PM

ಬೆಳಗಾವಿ, ಜನವರಿ 17: ಎರಡು ಸಾವಿರ ಹಣಕ್ಕಾಗಿ ಕೊಲೆ ಮಾಡಿ, ಊರಲ್ಲಿ ಜಾಲಿಯಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ನಾಯಿಕ್, ಹೊಳೆಪ್ಪ ಘಸ್ತಿ, ಮಹೇಶ್ ಬೇರಡ ಕೊಲೆ ಮಾಡಿದ ಆರೋಪಿಗಳು. ಅಪ್ಪಾಸಾಹೇಬ್ ಭೀಮಾ ನಾಯಿಕ್ (64) ಕೊಲೆಯಾದ ದುರ್ದೈವಿ.

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ವಾಳಕಿ ಗ್ರಾಮದ ಅಪ್ಪಾಸಾಹೇಬ್ 2023ರ ಅಗಸ್ಟ್ 11ರಂದು ಸಂತೆಗೆ ಹೋಗುವುದಾಗಿ ಹೇಳಿ ಹೋಗಿದ್ದರು. ಸಂತೆಗೆ ಹೋದ ತಂದೆ ಅಪ್ಪಾಸಾಹೇಬ್​ ಮರಳಿ ಮನೆಗೆ ಬಾರದಿದ್ದಕ್ಕೆ ಮಗ ಕಾಕಾಸಾಹೇಬ್ ಖಡಕಲಾಟ್ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು.

ಅಣ್ಣಾಸಾಹೇಬ್​​ರನ್ನು ಕೊಲೆ ಮಾಡಿದ ಬಳಿಕ ಮೂವರು ಆರೋಪಿಗಳು ಊರಲ್ಲಿ ಜಾಲಿಯಾಗಿ ತಿರುಗಾಡಿಕೊಂಡಿದ್ದರು. ಒಂದು ದಿನ, ಆರೋಪಿ ಸಂತೋಷ್ ‌ನಾಯಿಕ್ ಕುಡಿದ ಮತ್ತಲ್ಲಿ ಕೆಂಪಣ್ಣ ಎಂಬುವವರ ಮುಂದೆ ಕೊಲೆ ಮಾಡಿದ್ದು ನಾವೇ ಎಂದು ಹೇಳಿದ್ದನು. ಈ ವಿಚಾರವನ್ನು ಕೆಂಪಣ್ಣ ಕೊಲೆಯಾದ ಅಪ್ಪಸಾಹೇಬ್​ರ ಪುತ್ರ ಕಾಕಾಸಹೇಬ್​ಗೆ ಹೇಳಿದ್ದನು.

ಇದನ್ನೂ ಓದಿ: 9ನೇ ಕ್ಲಾಸ್‌ ವಿದ್ಯಾರ್ಥಿನಿ ಆತ್ಮಹತ್ಯೆ, ಲವ್‌ ಜಿಹಾದ್‌ ಆರೋಪ..!

ಕೆಂಪಣ್ಣನ ಮಾತನ್ನು ಆಧರಿಸಿ ಕಾಕಾಸಾಹೇಬ್ ಪೊಲೀಸರಿಗೆ ದೂರು ನೀಡಿದ್ದರು. ಕಾಕಾಸಾಹೇಬ್ ದೂರು ಆಧರಿಸಿ ಪೊಲೀಸರು ಮೂವರನ್ನು ಬಂಧಿಸಿದರು. ಆರೋಪಿಗಳ ಮಾಹಿತಿ ಆಧರಿಸಿ ಪೊಲೀಸರು ಮಹಾರಾಷ್ಟ್ರ ರಾಜ್ಯದ ಫೋಡಾ ಘಾಟ್​ನಲ್ಲಿ ಸ್ಥಳ ಮಹಜರು ನಡೆಸದರು. ಆದರೆ, ಶವ ಈವರೆಗೂ ಪತ್ತೆಯಾಗಿಲ್ಲ.

ಮನೆ ಕಟ್ಟಲು ಆರೋಪಿ ಸಂತೋಷ್​​ ಅಪ್ಪಾಸಾಹೇಬ್​ರಿಂದ ಮುಂಗಡ ಹಣ ಪಡೆದಿದ್ದನು. ಆದರೆ, ಸಂತೋಷ್​ ಮನೆ ಕೆಲಸ ಪೂರ್ಣಗೊಳಿಸಿದೆ, ಅರ್ಧಕ್ಕೆ ಬಿಟ್ಟಿದ್ದನು. ಹೀಗಾಗಿ, ಹೆಚ್ಚುವರಿಯಾಗಿ ನೀಡಿದ್ದ ಎರಡು ಸಾವಿರ ಹಣ ನೀಡುವಂತೆ ಅಪ್ಪಸಾಹೇಬ್​ ಆರೋಪಿ ಸಂತೋಷ್​ಗೆ ಕೇಳಿದ್ದರು. ಈ ಎರಡು ಸಾವಿರ ರೂಪಾಯಿಗಾಗಿ ಕೊಲೆ ಮಾಡಿದ್ದಾಗಿ ಆರೋಪಿಗಳು ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ