ಬೆಳಗಾವಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕಲ್ಲುಎತ್ತಿ ಹಾಕಿ ಬರ್ಬರ ಹತ್ಯೆ
ಬೆಳಗಾವಿ ತಾಲೂಕಿನ ಬಸರಿಕಟ್ಟಿ ಹೊರವಲಯದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಕನ್ನೀಕರ್(32) ಎಂಬಾತನ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
ಬೆಳಗಾವಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಬಸರಿಕಟ್ಟಿ ಹೊರವಲಯದಲ್ಲಿ ನಡೆದಿದೆ. ಮಾರುತಿ ಕನ್ನೀಕರ್(32) ಎಂಬಾತ ಮೃತ ವ್ಯಕ್ತಿ. ಜಮೀನಿಗೆ ಕೆಲಸಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಶವವನ್ನ ರವಾನೆ ಮಾಡಲಾಗಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ.
ಬಿಸಿಎ ವಿದ್ಯಾರ್ಥಿಗೆ ಚಾಕು ಇರಿತ; ಆರೋಪಿಗಳನ್ನು ಬಂಧಿಸಿದ ಪೊಲೀಸರು
ಬಾಗಲಕೋಟೆ: ಬಿಸಿಎ ಓದುತ್ತಿದ್ದ ಕೃಷ್ಣಾ ಹೆಳವರ(21) ವಿದ್ಯಾರ್ಥಿಗೆ ಚಾಕು, ತಲವಾರ್ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಹಾಗೂ ಪ್ರದೀಪ್ ಎಂಬ ಆರೋಪಿಗಳನ್ನು ಬಾಗಲಕೋಟೆ ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಐಪೋನ್ ಹಾಗೂ 25 ಸಾವಿರ ಹಣ ವ್ಯವಹಾರದಲ್ಲಿ ಸ್ನೇಹಿತರ ಮಧ್ಯೆ ಜಗಳ ಸೇರಿದಂತೆ ಹಳೇ ಧ್ವೇಷದಿಂದ ಹಿನ್ನಲೆಯಿಂದ ಚಾಕು ಇರಿಯಲಾಗಿದೆ.
ಇನ್ನು ಬಿಸಿಎ ಓದುತ್ತಿದ್ದ ಕೃಷ್ಣಾ ಹೆಳವರ ಎಂಬಾತನಿಗೆ ಶಿವರಾತ್ರಿ ದಿನ ರಾತ್ರಿ ಬಾಗಲಕೋಟೆಯ ವಿದ್ಯಾಗಿರಿ 14-15 ನೇ ಕ್ರಾಸ್ ಮಧ್ಯೆ ಘಟನೆ ನಡೆದಿತ್ತು, ಐಪೋನ್ಗಾಗಿ ತರುಣ್ ಎಂಬಾತನಿಗೆ 25 ಸಾವಿರ ಕೊಟ್ಟಿದ್ದ ಕೃಷ್ಣಾ ಹೆಳವರ, ಆಗ ಆ ಪೋನ್ ಸರಿಯಿಲ್ಲ ತಗೊಬೇಡ ಅಂದಿದ್ದ ಪ್ರಶಾಂತ ಮತ್ತು ಪ್ರದೀಪ ಅವರ ಆಡಿಯೋ ರೆಕಾರ್ಡ್ ಮಾಡಿ ತರುಣಗೆ ತೋರಿಸಿ ಮೊಬೈಲ್ ಸರಿಯಿಲ್ಲವಂತೆ ಹಣ ವಾಪಸ್ ಕೊಡು ಅಂದಿದ್ದ ಕೃಷ್ಣಾ ಹೆಳವರ, ಅಡಿಯೊ ರಿಕಾರ್ಡ್ ಮಾಡಿ ನಮ್ಮ ನಮ್ಮಲ್ಲೇ ಜಗಳ ಹಚ್ತಿಯಾ ಎಂದು ರೊಚ್ಚಿಗೆದ್ದಿದ್ದ ಪ್ರಶಾಂತ, ಪ್ರದೀಪ ಚಾಕು ಇರಿದು ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದರು. ಇದೀಗ ಪೊಲೀಸರು ಬಂಧಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Tue, 21 February 23