ಕೆಲಸ ಕೊಟ್ಟ ಮಾಲೀಕನಿಂದ ಹಣ ದೋಚಲು ಕೆಲಸಗಾರನ ಮಾಸ್ಟರ್​ ಪ್ಲಾನ್​: ಆರೋಪಿ ಅರೆಸ್ಟ್​

| Updated By: ವಿವೇಕ ಬಿರಾದಾರ

Updated on: Oct 06, 2023 | 9:49 AM

ಕಿಡ್ನಾಪ್​ ನಾಟಕವಾಡಿ ಮಾಲಿಕನಿಂದ ಹಣ ಪಡೆದು ಬಿಹಾರದಲ್ಲಿ ಸೆಟಲ್​​ ಆಗಲು ಪ್ಲಾನ್​ ಮಾಡಿದ್ದ ಆರೋಪಿಗಳನ್ನು ಬೆಂಗಳೂರಿನ ಆರ್​ಟಿ ನಗರ ಪೊಲೀಸರು ಬಂಧಿಸಿದ್ದಾರೆ. ನೂರುಲ್ಲಾ ಹುಸೇನ್, ಅಬೂಬಕರ್ ಹಾಗೂ ಆಲಿ ರೇಝಾ ಬಂಧಿತ ಆರೋಪಿಗಳು.

ಕೆಲಸ ಕೊಟ್ಟ ಮಾಲೀಕನಿಂದ ಹಣ ದೋಚಲು ಕೆಲಸಗಾರನ ಮಾಸ್ಟರ್​ ಪ್ಲಾನ್​: ಆರೋಪಿ ಅರೆಸ್ಟ್​
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು/ಮಂಡ್ಯ ಅ.06: ಕಿಡ್ನಾಪ್​ (Kidnap) ನಾಟಕವಾಡಿ ಮಾಲಿಕನಿಂದ ಹಣ ಪಡೆದು ಬಿಹಾರದಲ್ಲಿ ಸೆಟಲ್​​ ಆಗಲು ಪ್ಲಾನ್​ ಮಾಡಿದ್ದ ಆರೋಪಿಗಳನ್ನು ಆರ್​ಟಿ ನಗರ ಪೊಲೀಸರು (Police) ಬಂಧಿಸಿದ್ದಾರೆ. ನೂರುಲ್ಲಾ ಹುಸೇನ್, ಅಬೂಬಕರ್ ಹಾಗೂ ಆಲಿ ರೇಝಾ ಬಂಧಿತ ಆರೋಪಿಗಳು. ನೂರುಲ್ಲಾ ಹುಸೇನ್ ಎಂಬುವ ವ್ಯಕ್ತಿ ಬೆಂಗಳೂರಿನ ಆರ್​​ಟಿ ನಗರದಲ್ಲಿರುವ ಮೊಹಮ್ಮದ್ ಆಸೀಫ್ ಹಬೀಬ್ ಎಂಬುವರ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು.

ನೂರುಲ್ಲಾ ಹುಸೇನ್​​ನನ್ನು ಮಾಲಿಕ ಮೊಹಮ್ಮದ್ ಆಸೀಫ್ ಹಬೀಬ್ ಮನೆ ಮಗನಂತೆ ನೋಡಿಕೊಂಡಿಕೊಳ್ಳುತ್ತಿದ್ದರು. ಆದರೆ ಉಂಡ ಮನೆಗೆ ಎರಡು ಬಗೆಯುವಂತೆ ನೂರುಲ್ಲಾ ಹುಸೇನ್ ಮಾಲೀಕನಿಂದ ಹಣ ಲಪಟಾಯಿಸಲು ಯೋಜನೆ ರೂಪಿಸಿದ್ದನು. ತನ್ನ ಸ್ನೇಹಿತರಾದ ಅಬೂಬಕರ್ ಹಾಗು ಆಲಿ ರೇಝಾ ಎಂಬುವರ ಜೊತೆ ಸೇರಿ ಕಿಡ್ನಾಪ್ ಪ್ಲಾನ್ ಮಾಡಿದ್ದನು.

ಪ್ಲಾನ್​​ನಂತೆ ಆರೋಪಿಗಳು ಕ್ಯಾಬ್ ಮಾಡಿಕೊಂಡು ಮಂಡ್ಯಗೆ ಹೋಗಿದ್ದರು. ನಂತರ ಮಾಲೀಕ ಹಬೀಬ್​ ಅವರಿಗೆ ಕರೆ ಮಾಡಿ ನನ್ನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಆರೋಪಿ ನೂರುಲ್ಲಾ ಹುಸೇನ್ ಹೇಳಿದ್ದನು. ಇದನ್ನು ಕೇಳಿ ಮಾಲಿಕ ಮೊಹಮ್ಮದ್ ಆಸೀಫ್ ಹಬೀಬ್ ಗಾಭರಿಯಾಗಿದ್ದರು. ಬಳಿಕ ನೂರುಲ್ಲಾ ಹುಸೇನ್ “ನನ್ನನ್ನು ಕಿಡ್ನಾಪ್​ ಮಾಡಿದವರು ಎರಡು ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ” ಎಂದು ಮಾಲಿಕ ಮೊಹಮ್ಮದ್ ಆಸೀಫ್ ಹಬೀಬ್​ಗೆ ಹೇಳಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಬಾಲ ಬಿಚ್ಚಿದ ರೌಡಿಗಳು; ಉದ್ಯಮಿ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ, ಬೆದರಿಕೆ ಆಡಿಯೋ ಇಲ್ಲಿದೆ

ಮನೆ ಮಗನಂತಿದ್ದವನಿಗೆ ತೊಂದರೆಯಾಗಿದೆ ಎಂದು ಮಾಲಿಕ ಮೊಹಮ್ಮದ್ ಆಸೀಫ್ ಹಬೀಬ್ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಅಲ್ಲದೆ ಎರಡು ಲಕ್ಷ ರೂ. ಹಣ ಕೊಡಲು ಮುಂದಾಗಿದ್ದರು. ಈ ವೇಳೆ ಆರೋಪಿ ನೂರುಲ್ಲಾ ತನ್ನ ಅಕೌಂಟ್ ನಂಬರ್​ಗೆ ಹಣ ಹಾಕಲು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ಆರೋಪಿಗಳ ಮೊಬೈಲ್ ಟ್ರ್ಯಾಕ್ ಮಾಡಿದ್ದು, ಮಂಡ್ಯದಲ್ಲಿರುವುದು ಪತ್ತೆಯಾಗಿದೆ.

ಕೂಡಲೇ ಆಕ್ಟಿವ್​ ಆದ ಆರ್​ಟಿ ನಗರ ಪೊಲೀಸರು, ಮಂಡ್ಯ ಪೊಲೀಸರ ಸಹಾಯದಿಂದ ಮೂಲಕ ಮೂವರನ್ನ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಇಲ್ಲಿ ವಿಚಾರಣೆ ನಡೆಸಿದಾಗಿ, ನೂರುಲ್ಲಾ ಹುಸೇನ್ ಖತರ್ನಾಕ್ ಪ್ಲಾನ್ ಬಯಲಾಗಿದೆ. ಆರೋಪಿಗಳು ಹಣ ಪಡೆದು ಬಿಹಾರಕ್ಕೆ ಎಸ್ಕೇಪ್ ಆಗಲು ಸಂಚು ರೂಪಿಸಿದ್ದರು. ಈ ಸಂಬಂಧ ಆರ್​ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ