ಸೈಟ್ ಮಾರಾಟ ಮಾಡಿಕೊಡುವುದಾಗಿ ನಿವೃತ್ತ ಎಸಿಪಿಗೇ ವಂಚನೆ; ದೂರು ದಾಖಲು

| Updated By: ganapathi bhat

Updated on: Sep 17, 2021 | 10:36 PM

Bengaluru Crime: ನಿವೃತ್ತ ಎಸಿಪಿ ಲವಕುಮಾರ್ ಬೆಂಗಳೂರಿನ ಅಶೋಕನಗರ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಲಕ್ಷ್ಮೀನಾರಾಯಣ, ಶಶಿ, ನಿರ್ಮಲ್ ಶೆಲ್ಟರ್ಸ್ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಸೈಟ್ ಮಾರಾಟ ಮಾಡಿಕೊಡುವುದಾಗಿ ನಿವೃತ್ತ ಎಸಿಪಿಗೇ ವಂಚನೆ; ದೂರು ದಾಖಲು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಸೈಟ್ ಮಾರಾಟ ಮಾಡಿಕೊಡುವುದಾಗಿ ನಿವೃತ್ತ ಎಸಿಪಿಗೆ ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. 90 ಲಕ್ಷ ರೂಪಾಯಿ ಮೌಲ್ಯದ 3 ಸೈಟ್​ಗೆ 30 ಲಕ್ಷ ನೀಡಿರುವ ಆರೋಪ ದಾಖಲು ಮಾಡಲಾಗಿದೆ. ನಿವೃತ್ತ ಎಸಿಪಿ ಲವಕುಮಾರ್ ಬೆಂಗಳೂರಿನ ಅಶೋಕನಗರ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಲಕ್ಷ್ಮೀನಾರಾಯಣ, ಶಶಿ, ನಿರ್ಮಲ್ ಶೆಲ್ಟರ್ಸ್ ವಿರುದ್ಧ ದೂರು ದಾಖಲು ಮಾಡಲಾಗಿದೆ.

ಜಿಗಣಿಯ ನವ್ಯ ಲೇಔಟ್​ನಲ್ಲಿ 3 ಸೈಟ್ ಹೊಂದಿದ್ದ ನಿವೃತ್ತ ಎಸಿಪಿ ಲವಕುಮಾರ್, ಸೈಟು ಮಾರಾಟ ಮಾಡಿಕೊಡಲು ಲಕ್ಷ್ಮೀನಾರಾಯಣ ಮೊರೆ ಹೋಗಿದ್ದರು. ಆರೋಪಿ ಲಕ್ಷ್ಮೀನಾರಾಯಣ ನಿರ್ಮಲ್ ಶೆಲ್ಟರ್ಸ್​​ನ ಮಾಲೀಕ ಆಗಿದ್ದಾರೆ. ಆರೋಪಿ ಲಕ್ಷ್ಮೀನಾರಾಯಣ ಲವಕುಮಾರ್​ಗೆ ಪರಿಚಿತರಾಗಿದ್ದರು. ಅವರು ಪವರ್ ಆಫ್ ಅಟಾರ್ನಿ, ಸೈಟಿನ ದಾಖಲೆಗಳನ್ನ ಪಡೆದಿದ್ದರು. ಆದರೆ ಈಗ ಕೇವಲ 30 ಲಕ್ಷ ನೀಡಿ ಕೈತೊಳೆದುಕೊಂಡ ಆರೋಪ ಕೇಳಿಬಂದಿದೆ. ಈ ಸಂಬಂಧ ಲಕ್ಷ್ಮೀನಾರಾಯಣ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಬಿಜೆಪಿ ಕಾರ್ಯಕರ್ತನ ಜೇಬಿನಿಂದ ಹಣ ಎಗರಿಸುತ್ತಿದ್ದ ಕಳ್ಳನಿಗೆ ಧರ್ಮದೇಟು
ಬಿ.ಎಸ್​​. ಯಡಿಯೂರಪ್ಪ ಸ್ವಾಗತಕ್ಕೆ ನಿಂತಿದ್ದ ಕಾರ್ಯಕರ್ತರ ಜೇಬಿಗೆ ಕತ್ತರಿ ಹಾಕಲು ಯತ್ನಿಸಿ ಕಳ್ಳನೊಬ್ಬ ಏಟು ಪಡೆದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆಯಲ್ಲಿ ನಡೆದಿದೆ. ಪ್ರಕಾಶ್ ಎಂಬವರ ಜೇಬಿನಲ್ಲಿದ್ದ 75 ಸಾವಿರ ರೂಪಾಯಿ ಎಗರಿಸುತ್ತಿದ್ದಾಗ ಧರ್ಮದೇಟು ಸಿಕ್ಕಿದೆ. ಮೈಸೂರು ಪ್ರವಾಸ ಮುಗಿಸಿ ಶಿವಮೊಗ್ಗಕ್ಕೆ ಬಿ.ಎಸ್. ಯಡಿಯೂರಪ್ಪ ತೆರಳುತ್ತಿದ್ದರು. ಕೆ.ಆರ್. ಪೇಟೆ ಮೂಲಕ ಶಿವಮೊಗ್ಗಕ್ಕೆ ತೆರಳುವವರಿದ್ದರು. ಈ ವೇಳೆ, ಕೆ.ಆರ್. ಪೇಟೆ ಮಂಡ್ಯ ಸರ್ಕಲ್​ನಲ್ಲಿ ನಿಂತಿದ್ದ ಕಾರ್ಯಕರ್ತರ ಜೇಬಿಗೆ ಕತ್ತರಿ ಹಾಕುವಾಗ ಧರ್ಮದೇಟು ಸಿಕ್ಕಿಬಿದ್ದು, ಧರ್ಮದೇಟು ಸಿಕ್ಕಿದೆ. ಕಳ್ಳನನ್ನ ಥಳಿಸಿದ ಬಿಜೆಪಿ ಕಾರ್ಯಕರ್ತರು, ಆತನನ್ನು ಪೊಲೀಸರಿಗೊಪ್ಪಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಆರ್​ಜೆ ಮೇಘಾ ಹಾಗೂ ಸ್ನೇಹಿತರ ಮಧ್ಯೆ ಪಬ್​ನಲ್ಲಿ ಗಲಾಟೆ; ದೂರು ದಾಖಲು

ಇದನ್ನೂ ಓದಿ: ಖ್ಯಾತ ಕಿರುತೆರೆ ನಟಿ ವಿರುದ್ಧ ಅಭಿಮಾನಿಯಿಂದಲೇ ಕಿರುಕುಳ ಆರೋಪ

Published On - 6:25 pm, Fri, 17 September 21