77 ಕೆಜಿ ಚಿನ್ನ ಕಳವು ಕೇಸ್​: ನೇಪಾಳದಲ್ಲಿ ಇಬ್ಬರು ಅರೆಸ್ಟ್​

77 ಕೆಜಿ ಚಿನ್ನ ಕಳವು ಕೇಸ್​: ನೇಪಾಳದಲ್ಲಿ ಇಬ್ಬರು ಅರೆಸ್ಟ್​

ಬೆಂಗಳೂರು: ಮುತ್ತೂಟ್ ಫೈನಾನ್ಸ್​ನಲ್ಲಿ 77 ಕೆಜಿ ಚಿನ್ನ ಕಳ್ಳತನ ಪ್ರಕರಣ ಸಂಬಂಧ ಆರೋಪಿಗಳಿಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ನೇಪಾಳಕ್ಕೆ ತೆರಳಿದ್ದ ವಿಶೇಷ ತಂಡ ಡಿಸೆಂಬರ್ 31ರಂದು ನೇಪಾಳ ಮೂಲದ ಇಬ್ಬರು ಸೆಕ್ಯುರಿಟಿ ಗಾರ್ಡ್​ಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ಸುಮಾರು 8 ಕೆಜಿ ಬಂಗಾರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಮುತ್ತೂಟ್ ಫೈನಾನ್ಸ್​ನಲ್ಲಿ ಕಳ್ಳತನ ಮಾಡಲು 12 ಜನ ಪ್ಲಾನ್ ಮಾಡಿದ್ರು. ಅಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್​ಗಳೇ ಮೊದಲು ಐಡಿಯಾ ಕೊಟ್ಟಿದ್ದಾರೆ. ಅದ್ರೆ ಅದನ್ನು ಬಿಹಾರದ ಪೊಫೆಷನಲ್ ಗ್ಯಾಂಗ್ ಇಂಪ್ಲಿಮೆಂಟ್ ಮಾಡಿದೆ. ವಯಸ್ಸಾದ ವ್ಯಕ್ತಿಯೊಬ್ಬ ಬಿಹಾರದ ಗ್ಯಾಂಗ್ ಕಟ್ಟಿಕೊಂಡು ಬಂದಿದ್ದ. ಆತನನ್ನು ಗ್ಯಾಂಗ್ ಲೀಡರ್ ಎಂದೇ ಅವರು ಕರೆಯುತ್ತಿದ್ದರು.

ಡಿ.21ರಂದು ಫ್ರೇಜರ್ ಟೌನ್​ನಲ್ಲಿರುವ ಮುತ್ತೂಟ್ ಫೈನಾನ್ಸ್​ನಲ್ಲಿ ಗೋಡೆ ಕೊರೆದು ಚಿನ್ನ ಕಳ್ಳತನ ಮಾಡಿದ್ದಾರೆ. ಬಳಿಕ ತಮ್ಮ ಪಿಜಿ ರೂಮ್​ನಲ್ಲಿ ಚಿನ್ನವನ್ನ ಎಲ್ಲರೂ ಹಂಚಿಕೊಂಡಿದ್ದರು. ಇಬ್ಬರು ಸೆಕ್ಯುರಿಟಿ ಗಾರ್ಡ್​ಗೆ ಕೇವಲ 8 ಕೆಜಿ ಅಷ್ಟೇ ಚಿನ್ನವನ್ನು ಆ ಲೀಡರ್ ಕೊಟ್ಟಿದ್ದಾನೆ. ನಿಮಗೆ ಚಿನ್ನ ಸಾಗಿಸೋದು ಕಷ್ಟ ಅಗುತ್ತೆ. ದೆಹಲಿಯಲ್ಲಿ ಭೇಟಿಯಾಗೋಣ ಎಂದಿದ್ದ ಲೀಡರ್, ಸೆಕ್ಯುರಿಟಿಗಳಿಗೂ ಮೋಸ ಮಾಡಿದ್ದಾನೆ. ಸದ್ಯ ಲೀಡರ್ & ಗ್ಯಾಂಗ್ ಅನ್ನು ಪತ್ತೆಮಾಡಲು ಮತ್ತೊಂದು ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ.

Click on your DTH Provider to Add TV9 Kannada