ಬೆಂಗಳೂರು, ಅಕ್ಟೋಬರ್ 19: ನಗರದಲ್ಲಿ ಸುಲಿಗೆ ಮಾಡುತ್ತಿದ್ದ 6 ಆರೋಪಿಗಳನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ (arrested) . ಬಂಧಿತರಿಂದ 17.5 ಲಕ್ಷ ಮೌಲ್ಯದ 1 ಕಾರು, 15 ಬೈಕ್, 11,750 ನಗದು ಜಪ್ತಿ ಮಾಡಲಾಗಿದೆ. ಅಮೃತಹಳ್ಳಿ, ಬಾಣಸವಾಡಿ, ಕೊತ್ತನೂರು, ಮಹದೇವಪುರ ಸೇರಿ ಹಲವು ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಸುಲಿಗೆ ಮಾಡುತ್ತಿದ್ದರು. ಕದ್ದ ವಾಹನಗಳಲ್ಲೇ ದುಷ್ಕರ್ಮಿಗಳು ಸುಲಿಗೆ ಮಾಡಲು ಹೋಗುತ್ತಿದ್ದರು. ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನೆಲಮಂಗಲ: ಹಸುಗಳನ್ನ ಟಿಟಿ ವಾಹನದಲ್ಲಿ ಕದ್ದು ಪರಾರಿಯಾಗುತ್ತಿದ್ದವರನ್ನ ಹಿಡಿಯಲು ಗ್ರಾಮಸ್ಥರು ಯತ್ನಿಸಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೊಟ್ಟೆಪ್ಪನಪಾಳ್ಯದಲ್ಲಿ ನಡೆದಿದೆ. ಗ್ರಾಮಸ್ಥರು ಬೆನ್ನಟ್ಟುವ ವೇಳೆ ಸ್ಥಳದಲ್ಲೇ ವಾಹನ ಬಿಟ್ಟು 4 ಜನ ದನಗಳ್ಳರು ಪರಾರಿಯಾಗಿದ್ದಾರೆ. ಗ್ರಾಮಸ್ಥರ ಕೈಗೆ ಸಿಕ್ಕ ಟಿಟಿ ವಾಹನ ಗ್ಲಾಸ್ಗಳನ್ನ ಪುಡಿಗಟ್ಟಿ ಜಖಂ ಮಾಡಿದ್ದಾರೆ.
ಇದನ್ನೂ ಓದಿ: ಮೈಸೂರು: ಸಾಕಲು ಆಗುತ್ತಿಲ್ಲವೆಂದು ಒಂದೂವರೆ ವರ್ಷದ ಮಗುವನ್ನು ಕೊಂದ ತಂದೆ!
ಗ್ರಾಮದ ರೈತ ಜಗದೀಶ್ ಅವರಿಗೆ 2 ಹಸುಗಳ ರಕ್ಷಣೆ ಮಾಡಲಾಗಿದೆ. ನಕಲಿ ನಂಬರ್ ಪ್ಲೇಟ್ ಬಳಸಿ ಕೃತ್ಯವೆಸಗಿದ್ದಾರೆ. ಸದ್ಯ ಬೈಕ್, ಟಿಟಿ ವಾಹನ ಜಪ್ತಿ ಮಾಡಲಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಯಚೂರು: ಮಾನ್ವಿ ಪಟ್ಟಣದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿ ಒಬ್ಬ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಅಮ್ಜದ್ ಖಾನ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಅಮ್ಜದ್ಖಾನ್ ಸಹೋದರ ಶೋಯಲ್ ನಡುವೆ ಗಲಾಟೆ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ವ್ಯಕ್ತಿಯನ್ನ ಮನವೊಲಿಸಿದ ಮಾನ್ವಿ ಪೊಲೀಸರು ಟವರ್ನಿಂದ ಇಳಿಸಿದ್ದಾರೆ.
ಕೊಡಗು: ದೊಣ್ಣೆಯಿಂದ ಹೊಡೆದು ಮಗ ತಂದೆಯನ್ನು ಕೊಲೆ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ನಾಂಗಲದಲ್ಲಿ ನಡೆದಿದೆ. ಚೇಂದ್ರಿಮಾಡರಾಜ (68) ಕೊಲೆಯಾದ ವ್ಯಕ್ತಿ. ಪುತ್ರ ದರ್ಶನ್ ಕೊಲೆ ಮಾಡಿದ ಆರೋಪಿ. ನಿನ್ನೆ (ಅ.18) ರಂದು ಪುತ್ರ ದರ್ಶನ್, ತಂದೆ ಚೇಂದ್ರಿಮಾಡರಾಜ ಅವರಿಗೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದನು.
ಇದನ್ನೂ ಓದಿ: ಮಂಗಳೂರು: ಕಾರು ಡಿಕ್ಕಿ, ಯುವತಿ ದುರ್ಮರಣ: ಐವರಿಗೆ ಗಂಭೀರ ಗಾಯ
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಚೇಂದ್ರಿಮಾಡರಾಜನನ್ನು ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ದರ್ಶನ್ನನ್ನು ಬಂಧಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.