ಸೈಬರ್​ ಕ್ರೈಂ: 5.17 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ

| Updated By: ವಿವೇಕ ಬಿರಾದಾರ

Updated on: May 06, 2024 | 12:06 PM

ಬೆಂಗಳೂರಿನಲ್ಲಿ ಸೈಬರ್​ ಕಳ್ಳರ ಹಾವಳಿ ಹೆಚ್ಚಾಗಿದೆ. ಅನೇಕ ವಿಧವಾದ ಸೈಬರ್​ ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿವೆ. ಸೈಬರ್​ ಕಳ್ಳರ ಹಾವಳಿ ಪೊಲೀಸರ ನಿದ್ದೆಗೆಡೆಸಿದೆ. ಸೈಬರ್​ ಕ್ರೈಂ ಬಗ್ಗೆ ಪೊಲೀಸರು ಅದೆಷ್ಟು ಜಾಗೃತಿ ಮೂಡಿಸುತ್ತಿದ್ದರೂ, ಜನರು ಮಾತ್ರ ವಂಚನೆಗೆ ಒಳಗಾಗುತ್ತಿದ್ದಾರೆ. ಇದೀಗ ಉದ್ಯಮಿಯೊಬ್ಬರು ಸೈಬರ್​ ಜಾಲದಲ್ಲಿ ಸಿಲುಕಿ 5.17 ಕೋಟಿ ರೂ ಕಳೆದುಕೊಂಡಿದ್ದಾರೆ.

ಸೈಬರ್​ ಕ್ರೈಂ: 5.17 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮೇ 06: ನಗರದಲ್ಲಿ ಸೈಬರ್​ (Cyber Crime) ಕಳ್ಳರ ಹಾವಳಿ ಮುಂದುವರೆದಿದೆ. ಸೈಬರ್​ ಕಳ್ಳರ ಜಾಲಕ್ಕೆ ಸಿಲುಕಿ ಅದೆಷ್ಟೋ ಜನರು ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಇದೀಗ ಸೈಬರ್​​ ಕಳ್ಳರ ಜಾಲಕ್ಕೆ ಸಿಲುಕಿ ವ್ಯಕ್ತಿಯೊಬ್ಬ 5.17 ಕೋಟಿ ರೂ. ಕಳೆದುಕೊಂಡಿದ್ದಾರೆ. ಉದ್ಯಮಿ ಅಶೋಕ್ ತಿರುಪಲಪ್ಪ ವಂಚನೆಗೆ ಒಳಗಾದವರು. ಇದೇ ವರ್ಷ ಫೆಬ್ರವರಿ 3 ರಂದು ಅಶೋಕ್​ ಅವರ ವಾಟ್ಸಪ್​ಗೆ ಅಪರಿಚಿತ ನಂಬರ್​​ನಿಂದ https://www.bys-app.com ಬರುತ್ತದೆ. ಆದರೆ ಅಶೋಕ್​ ಈ ಲಿಂಕ್​ ಅನ್ನು ತೆರೆದಿರುವುದಿಲ್ಲ.

ಸ್ವಲ್ಪ ಸಮಯದಲ್ಲಿ ಬಳಿಕ ಅಶೋಕ್​ ಅವರನ್ನು ವೈ-5-ಎವರ್ ಕೋರ್ ಫೈನಾನ್ಸಿಯಲ್ ಲೀಡರ್ ಎಂಬ ವಾಟ್ಸಪ್​ ಗ್ರೂಪ್​ಗೆ ಆ್ಯಡ್​ ಮಾಡಲಾಗುತ್ತದೆ. ಬಳಿಕ ತೇಜಸ್ ಖೋಡೆ, ಗೋಪಾಲ್ ಕಾವಲ್ರೆಡ್ಡಿ, ಕೇರೋಲಿನ್ ಕ್ರುಕ್ಸ್ ಎಂಬ ಅಪರಿಚಿತರು ಅಶೋಕ್​ ಅವರಿಗೆ ಕರೆ ಮಾಡಿ “ಲಿಂಕ್ ಮೇಲೆ ಕ್ಲಿಕ್​ ಮಾಡಿ ಆ್ಯಪ್​ ಡೌನ್​​ಲೋಡ್​ ಮಾಡಿ. ಆ ಆ್ಯಪ್​ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ಪ್ರೇರೇಪಿಸಿದ್ದಾರೆ.

ಇದನ್ನೂ ಓದಿ: ವಿಡಿಯೋ ಕಾಲ್​​ನಲ್ಲಿ ಬೆಂಗಳೂರು ಮಹಿಳೆಯ ಬೆತ್ತಲಾಗಿಸಿ 14.57 ಲಕ್ಷ ರೂ. ಎಗರಿಸಿದ ಸೈಬರ್ ವಂಚಕರು!

ಸ್ವಲ್ಪ ದಿನಗಳ ಬಳಿಕ ಅಶೋಕ್ ಆ್ಯಪ್​ ಡೌಲೋಡ್​ ಮಾಡುತ್ತಾರೆ. ಬಳಿಕ ಅಶೋಕ್​ ತಮ್ಮ ಎಸ್​ಬಿಐ ಅಕೌಂಟ್​ನಿಂದ ಆರೋಪಿಗಳು ಸೂಚಿಸಿದ ಅಕೌಂಟ್​ಗೆ ಹಂತ ಹಂತವಾಗಿ ಹಣ ಹಾಕಲು ಆರಂಭಿಸುತ್ತಾರೆ. ಹೀಗೆ ಬರೊಬ್ಬರಿ 5.17 ಕೋಟಿ ರೂ. ಹಣವನ್ನು ಅಶೋಕ್​ ಆರೋಪಿಗಳು ಸೂಚಿಸಿದ ಅಕೌಂಟ್​ಗೆ ಹಾಕುತ್ತಾರೆ. ಇದಾದ ಬಳಿಕ ಆರೋಪಿಗಳು ಮತ್ತೆ ಅಶೋಕ್​ ಅವರನ್ನು ಸಂಪರ್ಕಿಸಿ ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಹೇಳುತ್ತಾರೆ.

ಆಗ ಅಶೋಕ್​ ಇದಕ್ಕೆ ಒಪ್ಪದೆ, ಮೊದಲು ಹೂಡಿಕೆ ಮಾಡಿದ್ದ ಹಣವನ್ನು ಮರಳಿ ಪಡೆಯಲು ಆ್ಯಪ್​​ನಲ್ಲಿ ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಆಗ ಅಶೋಕ್​ ಅವರಿಗೆ ತಾನು ಮೋಸ ಹೋಗಿದ್ದೇನೆ ಎಂದು ತಿಳಿಯುತ್ತದೆ. ಕೊನೆಗೆ ಅಶೋಕ್​ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.
ಅಶೋಕ್​ ದೂರಿನ ಅನ್ವಯ ಸೈಬರ್​ ಕ್ರೈಂ ಪೊಲೀಸರು Fyers Securities Pvt Ltd, Eercore Company ಎಂಬ ಕಂಪನಿಗಳ ಮೇಲೆ ಎಫ್​ಐಆರ್ ದಾಖಲಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ