Bengaluru Crime: ತಮಿಳುನಾಡು ಮೂಲದ ಕಳ್ಳರ ಗ್ಯಾಂಗ್ ಸೆರೆ
ಮನೆ ಕಳ್ಳತನಕ್ಕೆ ಮುಂದಾಗಿದ್ದ ತಮಿಳು ನಾಡು ಮೂಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ನಗರದಲ್ಲಿ ತಮಿಳುನಾಡು ಮೂಲದ ಕಳ್ಳರ ಗ್ಯಾಂಗ್ ಒಂದನ್ನು ಸೆರೆ ಹಿಡಿಯಲಾಗಿದೆ. ಇವರು ಹಣ್ಣು ವ್ಯಾಪಾರ ನೆಪದಲ್ಲಿ ಮನೆ ನೋಡಿಕೊಂಡು ರಾತ್ರಿ ಕಳ್ಳತನಕ್ಕೆ ಮುಂದಾಗಿದ್ದರು. ಮಣಿ ಅಲಿಯಾಸ್ ನಾಗಮಣಿ, ಅರುಮುಗಂ, ಪಾಂಡಿಯನ್ರನ್ನು ಸೆರೆಹಿಡಿಯಲಾಗಿದೆ. ಬಂಧಿತರಿಂದ 16 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ಧ 79ಕ್ಕೂ ಹೆಚ್ಚು ಪ್ರಕರಣಗಳು ಇವೆ ಎಂಬುದು ತನಿಖೆಯ ಮೂಲಕ ತಿಳಿದು ಬಂದಿದೆ. ಸಂಜಯನಗರ ಪೊಲೀಸರು ಆರೋಪಿಗಳನ್ನು ಬಂಧಿಸಲಾಗಿದೆ.
ಮನೆಗಳ್ಳತನದ ಆರೋಪಿ ಪ್ರೇಮ್‌ಕುಮಾರ್ ಬಂಧನ ನಂದಿನಿ ಲೇಔಟ್ ಪೊಲೀಸರ ಕಾರ್ಯಾಚರಣೆ ವೇಳೆ ಮನೆಗಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಪ್ರೇಮ್‌ಕುಮಾರ್ ಎಂಬಾತ ಎಂಬುದು ತಿಳಿದು ಬಂದಿದೆ. ಪುಟ್ಟೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ದುರ್ಘಟನೆ ನಡೆದಿದೆ. ಬಂಧಿತನಿಂದ 14.5 ಲಕ್ಷ ಮೌಲ್ಯದ 320 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪ ಪ್ರೇಮ್ ವಿರುದ್ಧ ಮಾರಿ ಕುಪ್ಪಂ, ರಾಮಮೂರ್ತಿ ನಗರ, ವಿದ್ಯಾರಣ್ಯಪುರ ಸೇರಿದಂತೆ 8 ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ ಹೊಸತೋಟ ಬಳಿ ಹೊಳೆಯಲ್ಲಿ ಮುಳುಗಿ ಯುವಕ ಸಾವು
ಹೊಳೆಯಲ್ಲಿ ಮುಳುಗಿ ಯುವಕ ಸಾವಿಗೀಡಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹೊಸತೋಟ ಗ್ರಾಮದಲ್ಲಿ ನಡೆದಿದೆ. ಮುಬಾಶಿರ್ (18) ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಸ್ನಾನ ಮಾಡಲೆಂದು ಮುಬಾಶಿರ್ ಹಾರಂಗಿ ನದಿಗೆ ಇಳಿದಿದ್ದರು. ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಕುರಿತಾಗಿ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Bengaluru Crime: ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳ ಸೆರೆ
Bengaluru Crime |ಅಡುಗೆ ತಯಾರಿಸುವ ವಿಚಾರಕ್ಕೆ ಶೆಫ್ಗಳ ನಡುವೆ ಜಗಳ.. ಚಾಕು ಇರಿದು ಯುವಕನ ಕೊಲೆ, ಆರೋಪಿ ಎಸ್ಕೇಪ್
Published On - 5:09 pm, Fri, 9 April 21