ನಟೋರಿಯಸ್ ರೌಡಿಶೀಟರ್ ಹರೀಶ್ ಮೇಲೆ ಪೊಲೀಸ್ ಫೈರಿಂಗ್
ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಹರೀಶ್ ಅಲಿಯಾಸ್ ರಾಬರಿ ಹರೀಶ್ ಕಾಲಿಗೆ ಪೊಲೀಸರರು ಫೈರಿಂಗ್ ನಡೆಸಿದ್ದಾರೆ. ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯ ಅಬ್ಬಿಗೆರೆ ಕೆರೆ ಬಳಿ ಘಟನೆ ಸಂಭವಿಸಿದೆ. ರೌಡಿಶೀಟರ್ ಹರೀಶ್ ಯುವರಾಜ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ. ರಾಬರಿ, ಡಕಾಯಿತಿ, ಕೊಲೆಯತ್ನ ಸೇರಿದಂತೆ ವಿವಿಧ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಕೇಸ್ ಗಳು ಇವನ ಮೇಲಿದ್ದವು. ಪೀಣ್ಯಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ರಾಬರಿ ಪ್ರಕರಣದಲ್ಲಿಯೂ ಕೂಡ ಈತ ಭಾಗಿಯಾಗಿದ್ದ. ಪ್ರಕರಣ ಸಂಬಂಧ ಖಚಿತ ಮಾಹಿತಿ ಮೇರೆಗೆ ರೌಡಿಶೀಟರ್ ನನ್ನು ಬಂಧಿಸಲು ಪೀಣ್ಯಠಾಣೆ […]
ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಹರೀಶ್ ಅಲಿಯಾಸ್ ರಾಬರಿ ಹರೀಶ್ ಕಾಲಿಗೆ ಪೊಲೀಸರರು ಫೈರಿಂಗ್ ನಡೆಸಿದ್ದಾರೆ. ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯ ಅಬ್ಬಿಗೆರೆ ಕೆರೆ ಬಳಿ ಘಟನೆ ಸಂಭವಿಸಿದೆ.
ರೌಡಿಶೀಟರ್ ಹರೀಶ್ ಯುವರಾಜ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ. ರಾಬರಿ, ಡಕಾಯಿತಿ, ಕೊಲೆಯತ್ನ ಸೇರಿದಂತೆ ವಿವಿಧ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಕೇಸ್ ಗಳು ಇವನ ಮೇಲಿದ್ದವು. ಪೀಣ್ಯಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ರಾಬರಿ ಪ್ರಕರಣದಲ್ಲಿಯೂ ಕೂಡ ಈತ ಭಾಗಿಯಾಗಿದ್ದ. ಪ್ರಕರಣ ಸಂಬಂಧ ಖಚಿತ ಮಾಹಿತಿ ಮೇರೆಗೆ ರೌಡಿಶೀಟರ್ ನನ್ನು ಬಂಧಿಸಲು ಪೀಣ್ಯಠಾಣೆ ಇನ್ಸ್ ಪೆಕ್ಟರ್ ಮುದ್ದುರಾಜ್ ತಂಡ ತೆರಳಿತ್ತು.
ಅಬ್ಬಿಗೆರೆ ಕೆರೆ ಸಮೀಪ ಆರೋಪಿಯನ್ನು ಬಂಧಿಸುವ ವೇಳೆ ಠಾಣೆ ಸಿಬ್ಬಂದಿ ಲಕ್ಷ್ಮೀನಾರಾಯಣ ಮತ್ತು ರವಿಕುಮಾರ್ ಎಂಬ ಇಬ್ಬರು ಪೇದೆಗಳ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ರೌಡಿಶೀಟರ್ ಹರೀಶ್ ಕಾಲಿಗೆ ಇನ್ಸ್ ಪೆಕ್ಟರ್ ಮುದ್ದುರಾಜ್ ಗುಂಡು ಹಾರಿಸಿದ್ದಾರೆ. ಸದ್ಯ ಗಾಯಳಾಗಿರುವ ರೌಡಿಶೀಟರ್ ಹರೀಶ್ ಹಾಗೂ ಇಬ್ಬರು ಪೇದೆಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Published On - 9:03 am, Sat, 26 October 19