ಬೆಂಗಳೂರು, (ಮಾರ್ಚ್ 29): ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ (Bengaluru Rameshwaram cafe blast Case) ಸಂಬಂಧಿಸಿದಂತೆ ಎನ್ಐಎ (NIA) ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ರಾಮೇಶ್ವರಂ ಕೆಫ್ ಬ್ಲಾಸ್ಟ್ ಆದ ಬಾಂಬ್ ತಯಾರಿಕೆಯ ಪ್ರಮುಖ ಆರೋಪಿ ಮುಜಾಮುಲ್ ಶರೀಫ್ ಎನ್ನುವಾತನನ್ನು ನಿನ್ನೆ(ಮಾರ್ಚ್ 29) ಅಧಿಕಾರಿಗಳು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತಿಬ್ಬರ ಪ್ರಮುಖ ಆರೋಪಗಳ ಪತ್ತೆಗೆ ಬಲೆ ಬೀಸಿದೆ. ಆರೋಪಿಗಳಾದ ಅಬ್ದುಲ್ ಮತೀನ್ ಅಹ್ಮದ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜಿಬ್ ಫೋಟೋವನ್ನು ಬಿಡುಗಡೆ ಮಾಡಲಾಗಿದ್ದು, ಈ ಆರೋಪಿಗಳ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಎನ್ಐಎ ಘೋಷಣೆ ಮಾಡಿದೆ.
Request for Information, Identity of the Informer will be kept Secret. pic.twitter.com/PBXPRH3DtB
— NIA India (@NIA_India) March 29, 2024
ಸ್ಫೋಟ ನಡೆಸಿದ ಪ್ರಮುಖ ಆರೋಪಿಯನ್ನು ಮುಸ್ಸಾವಿರ್ ಶಾಜಿಬ್ ಹುಸೇನ್ ಎಂದು ತನಿಖಾ ಸಂಸ್ಥೆ ಗುರುತಿಸಿದ್ದು, ಆತನ ಚಲನವಲನಗಳು ರಾಮೇಶ್ವರಂ ಕೆಫೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಎನ್ಐಎ ಪ್ರಕಾರ, ಆತ ಸುಮಾರು 6 ಅಡಿ 2 ಇಂಚು ಎತ್ತರವಿರುವ 30 ವರ್ಷದ ವ್ಯಕ್ತಿ. ಬಾಲಕರ ಹಾಸ್ಟೆಲ್, ಪಿಜಿ ಅಥವಾ ಯಾವುದೇ ಕಡಿಮೆ ಬಜೆಟ್ ಹೋಟೆಲ್ಗಳಲ್ಲಿ ವಾಸಿಸುತ್ತಿದ್ದಾನೆ. ಮೊಹಮ್ಮದ್ ಜುನೇದ್ ಸಯೀದ್ ಹೆಸರಿನಲ್ಲಿ ನಕಲಿ ಚಾಲನಾ ಪರವಾನಗಿ ಬಳಸುತ್ತಿದ್ದಾನೆ ಎಂದೂ ತನಿಖಾಧಿಕಾರಿಗಳು ಹೇಳಿದ್ದಾರೆ. ಆರೋಪಿ ತನ್ನ ಮೂಲ ಗುರುತನ್ನು ಮರೆಮಾಚಲು ಮುಖಗವಸು, ನಕಲಿ ಗಡ್ಡ ಅಥವಾ ವಿಗ್ ಧರಿಸುತ್ತಾನೆ ಎಂದು ಹೇಳಿದೆ.
ಸ್ಫೋಟದ ಇನ್ನೋರ್ವ ಆರೋಪಿ ಅಬ್ದುಲ್ ಮತೀನ್ ಅಹ್ಮದ್ ತಾಹಾ, ಸ್ಫೋಟ ನಡೆಸಲು ಮುಸ್ಸಾವಿರ್ಗೆ ಸಹಾಯ ಮಾಡಿದ್ದನೆಂದು ಹೇಳಲಾಗಿದ್ದು, ಆತನಿಗೂ ಹುಡುಕಾಟ ನಡೆಯುತ್ತಿದೆ. ಈತ ತನ್ನ ಮೂಲ ಗುರುತನ್ನು ಮರೆಮಾಚಲು ವಿಘ್ನೇಶ್ ಡಿ ಮತ್ತು ಸುಮಿತ್ ಎಂಬ ಹಿಂದೂ ಹೆಸರನ್ನೂ ಬಳಸುತ್ತಿದ್ದಾನೆ ಎಂದು ಎನ್ಐಎ ಹೇಳಿದೆ. ಆತ ಬಹುಶಃ ಹುಡುಗರ ಹಾಸ್ಟೆಲ್ ಗಳು, ಪಿಜಿಗಳು ಅಥವಾ ಯಾವುದೇ ಕಡಿಮೆ ಬಜೆಟ್ ಹೋಟೆಲ್ ಗಳಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಇಬ್ಬರೂ ಆರೋಪಿಗಳು ತೀರ್ಥಹಳ್ಳಿ ಮೂಲದವರು.
Published On - 6:02 pm, Fri, 29 March 24