ಶಿವಮೊಗ್ಗದಲ್ಲಿ 10ನೇ ತರಗತಿ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿದ ಅನ್ಯಕೋಮಿನ ಯುವಕರು, ಮುಂದೇನಾಯ್ತು?
ಮಾ .20 ರಂದು ನಗರದ ಬೊಮ್ಮಕಟ್ಟೆ ಬಡಾವಣೆ ನಿವಾಸಿ ಎಸ್ಎಸ್ಎಲ್ಸಿ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿರುವಂತಹ ಘಟನೆ ನಡೆದಿತ್ತು. ರಾಕೇಶ್ ಕಿಡ್ನಾಪ್ ಆದ ವಿದ್ಯಾರ್ಥಿ. ರಾಜೇಂದ್ರ ನಗರ 100 ಅಡಿ ರಸ್ತೆ ಬಳಿ ಇರುವ ಖಾಸಗಿ ಶಾಲೆಯಿಂದ ಸಂಜೆ ಮನೆಗೆ ಹೋಗುವ ಸಂದರ್ಭದಲ್ಲಿ ಘಟನೆ ನಡೆದಿದೆ.
ಶಿವಮೊಗ್ಗ, ಮಾರ್ಚ್ 2: ಮಾ .20 ರಂದು ನಗರದ ಬೊಮ್ಮಕಟ್ಟೆ ಬಡಾವಣೆ ನಿವಾಸಿ ಎಸ್ಎಸ್ಎಲ್ಸಿ ವಿದ್ಯಾರ್ಥಿಯನ್ನು ಕಿಡ್ನಾಪ್ (kidnapped) ಮಾಡಿರುವಂತಹ ಘಟನೆ ನಡೆದಿತ್ತು. ರಾಕೇಶ್ ಕಿಡ್ನಾಪ್ ಆದ ವಿದ್ಯಾರ್ಥಿ. ರಾಜೇಂದ್ರ ನಗರ 100 ಅಡಿ ರಸ್ತೆ ಬಳಿ ಇರುವ ಖಾಸಗಿ ಶಾಲೆಯಿಂದ ಸಂಜೆ ಮನೆಗೆ ಹೋಗುವ ಸಂದರ್ಭದಲ್ಲಿ ಘಟನೆ ನಡೆದಿದೆ. ಡ್ರಾಪ್ ಕೊಡುವುದಾಗಿ ಹೇಳಿ ಇಬ್ಬರು ಅನ್ಯಕೋಮಿನ ಯುವಕರಿಂದ ಕಿಡ್ನಾಪ್ ಮಾಡಲಾಗಿದೆ. ಶಿವಮೊಗ್ಗ ಹೊರವಲಯದ ಕಲ್ಲುಗಂಗೂರು ಬಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಯುವಕರು ವಿದ್ಯಾರ್ಥಿಯ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕಿವಿಗೆ ಕಚ್ಚಿ ಗಾಯ ಮಾಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಯನ್ನು ಯುವಕರು ಸ್ಥಳದಲ್ಲೇ ಬಿಟ್ಟು ಪರಾರಿ ಆಗಿದ್ದಾರೆ. ಸ್ಥಳೀಯರ ಸಹಾಯದಿಂದ ವಿದ್ಯಾರ್ಥಿಯನ್ನು ಆಸ್ಪತ್ರೆ ದಾಖಲು ಮಾಡಲಾಗಿದೆ. ಬಳಿಕ ಪೋಷಕರಿಗೆ ಘಟನೆ ಕುರಿತು ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಹಾನಗಲ್ ಗ್ಯಾಂಗ್ ರೇಪ್: ನಮ್ಮ ಬಾಯಿ ಮುಚ್ಚಿಸಲು 50 ಲಕ್ಷ ರೂ. ಆಮಿಷ: ಸಂತ್ರಸ್ತೆ ಪತಿ ಗಂಭೀರ ಆರೋಪ
ಸದ್ಯ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದು, ಘಟನೆ ನಡೆದು ಒಂದು ವಾರ ಆದರೂ ಆರೋಪಿಗಳು ಪತ್ತೆ ಆಗಿಲ್ಲ. ಘಟನೆ ಕುರಿತು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಘಟನೆಯಿಂದ ವಿದ್ಯಾರ್ಥಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ತೊಂದರೆ ಉಂಟಾಗಿದೆ.
ಪ್ರೀತಿ ನಿರಾಕರಣೆ: ಯುವತಿಯನ್ನು ಕಿಡ್ನಾಪ್ ಮಾಡಿದ ಪಾಗಲ್ ಪ್ರೇಮಿ
ಹಾವೇರಿ: ಬಿ.ಎಡ್ ಕಾಲೇಜು ಯುವತಿಯೊಬ್ಬಳು ಪ್ರೀತಿ ನಿರಾಕರಣೆ ಮಾಡಿದಳು ಅಂತ ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನೇ ಕಿಡ್ನಾಪ್ ಮಾಡಿರುವಂತಹ ಘಟನೆ ಇತ್ತೀಚೆಗೆ ಹಾವೇರಿ ನಗರದ ಓಲ್ಡ್ ಪೋಸ್ಟ್ ಆಫೀಸ್ ಬಳಿ ನಡೆದಿತ್ತು. ಬೆಳಿಗ್ಗೆ 9 ಗಂಟೆಗೆ ಯುವತಿಯು ಕಾಲೇಜ್ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದ.
ಇದನ್ನೂ ಓದಿ: ತುಮಕೂರು ಸಿದ್ಧಗಂಗಾ ಮಠದ ಜಾತ್ರೆಗೆ ಬಂದಿದ್ದ ಬಾಲಕಿ ಮೇಲೆ ಗ್ಯಾಂಗ್ ರೇಪ್
ಕಿಡ್ನಾಪ್ ಮಾಡಿದ ಆರೋಪಿಯನ್ನ ವಿಷ್ಣು ತಗಡಿನಮನಿ ಎಂದು ಗುರುತಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಯುವತಿ ರಕ್ಷಣೆಗೆ ಮುಂದಾಗಿದ್ದರು. ಯುವತಿಯನ್ನ ಮೋಟೆಬೆನ್ನೂರು ಬಳಿ ಬಿಟ್ಟು ಆರೋಪಿ ವಿಷ್ಣು ಎಸ್ಕೇಪ್ ಆಗಿದ್ದ. ಫೋನ್ ಟ್ರ್ಯಾಕ್ ಮಾಡಿ ಪೊಲೀಸರು ಯುವತಿ ಪತ್ತೆ ಹಚ್ಚಿ ಕರೆತಂದಿದ್ದರು. ಪೊಲೀಸ್ ಠಾಣೆಗೆ ಯುವತಿಯನ್ನ ಕರೆತರುತ್ತಿದ್ದಂತೆ ತಾಯಿಯನ್ನ ಅಪ್ಪಿ ಯುವತಿ ಗೋಳಾಡಿದ್ದಳು. ಈ ವೇಳೆ ಮಗಳ ಜೊತೆ ಪೋಷಕರೂ ಕಣ್ಣೀರು ಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.