ಬೆಂಗಳೂರು, ಜನವರಿ 14: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿರುವ ಪೈಶಾಚಿಕ ಕೃತ್ಯ ಬೆಂಗಳೂರಿನ (Bengaluru) ರಾಮಮೂರ್ತಿ ನಗರದ ಹೊಯ್ಸಳ ನಗರದಲ್ಲಿ ನಡೆದಿದೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೇಪಾಳ ಮೂಲದ ಅಭಿಷೇಕ್ ಕುಮಾರ್ (25) ಅತ್ಯಾಚಾರ ಎಸಗಿದ ಆರೋಪಿ. ಸೋಮವಾರ ರಾತ್ರಿ 7.30ರ ಸುಮಾರಿಗೆ ಸುಮಾರಿಗೆ ಘಟನೆ ನಡೆದಿದೆ.
ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರವೆಸಗುವ ವೇಳೆ ಬಾಲಕಿ ನರಳಿ ನರಳಿ ಪ್ರಾಣ ಬಿಟ್ಟಿದ್ದಾಳೆ. ಸದ್ಯ, ರಾಮಮೂರ್ತಿ ನಗರ ಠಾಣೆ ಪೊಲೀಸರು ಆರೋಪಿ ಅಭಿಷೇಕ್ನನ್ನು ಬಂಧಿಸಿದ್ದಾರೆ. ಇನ್ನು, ಅಭಿಷೇಕ್ ಕುಮಾರ್ ಕೂಡ ಗಾರೆ ಕೆಲಸ ಮಾಡಿಕೊಂಡಿದ್ದನು ಎಂದು ತಿಳಿದು ಬಂದಿದೆ.
ಆರೋಪಿ ಅಭಿಷೇಕ್ ಕುಮಾರ್ ಇದೇ ಕಟ್ಟಡದಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿಕೊಂಡು ಇದ್ದನು. ಮೃತ ಬಾಲಕಿ ಮತ್ತು ದಂಪತಿ ಕೂಡಾ ಇಲ್ಲೇ ವಾಸವಾಗಿದ್ದರು. ಸಂಕ್ರಾಂತಿ ಹಬ್ಬ ಸಹಿ ತಿಂಡಿ ಮಾಡುವಂತೆ ಬಾಲಕಿ ಅಮ್ಮನನ್ನು ಕೇಳಿದ್ದಾಳೆ. ಹೀಗಾಗಿ ತಾಯಿ ಮಗುವನ್ನು ಕರೆದುಕೊಂಡು ಸಂಜೆ 5 ಗಂಟೆ ಹೊತ್ತಿಗೆ, ನಾಲ್ಕನೇ ಮಹಡಿಗೆ ಹೋಗಿದ್ದಾರೆ. ಅಲ್ಲಿ ಬಿದ್ದಿದ್ದ ಸೆಂಟ್ರಿಂಗ್ ಕಟ್ಟಿಗೆ ತರಲು ಹೋಗಿದ್ದರು.
ಅಮ್ಮನ ಹಿಂದೆಯೇ ಹೋದ ಬಾಲಕಿ ಒಂದನೇ ಮಹಡಿಯಲ್ಲಿ ಆಟ ಆಡುತ್ತಾ ನಿಂತು ಬಿಟ್ಟಿತ್ತು. ಅಮ್ಮ ಕೂಡ ಅಲ್ಲಿಯೇ ಬಿಟ್ಟು ಹೋಗಿದ್ದರು. ಆದರೆ, ತಾಯಿ ವಾಪಸ್ ಬರುತ್ತಿದ್ದಂತೆ ಶಾಕ್ ಎದುರಾಗಿತ್ತು. ಅಭಿಷೇಕ್ ಬಾಲಕಿಯ ಮೇಲೆ ಮಲಗಿದ್ದನು. ಜೋರಾಗಿ ಕಿರುಚಿಕೊಂಡ ತಾಯಿ, ಈ ಅಭಿಷೇಕ್ ಕುಮಾರ್ಗೆ ಕಟ್ಟಿಗೆಯಿಂದಲೇ ಹೊಡೆದರು ಬಳಿಕ ಮಗುವನ್ನ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಬಾಲಕಿ ಪ್ರಾಣ ಬಿಟ್ಟಿದ್ದಳು.
ಇನ್ನು ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆಯಿಂದ ಕೆರಳಿದ ನೇಪಾಳ ಮೂಲದವರು ಆಕ್ರೋಶ ಹೊರಹಾಕಿದರು. ರಾಮಮೂರ್ತಿನಗರ ಠಾಣೆ ಮುಂದೆ ಧರಣಿ ನಡೆಸಿ, ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸಿ ಪ್ರತಿಭಟಿಸಿದರು. ನೂರಾರು ಸಂಖ್ಯೆಯಲ್ಲಿ ಆಕ್ರೋಶಿತರು ಜಮಾಯಿಸುತ್ತಿದ್ದಂತೆ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದರು.
ಆರೋಪಿ ಅಭಿಷೇಕ್ ಕೈಗೆ ಕೋಳ ತೊಡಿಸಿರೋ ರಾಮಮೂರ್ತಿ ನಗರ ಪೊಲೀಸರು, ಪೋಕ್ಸೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:24 am, Tue, 14 January 25