AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸುಗಳ ಕೆಚ್ಚಲು ಕೊಯ್ದ ಆರೋಪಿ ಸೈಯದ್ ನಸ್ರು ಮನಸ್ಥಿತಿ ಕಂಡು ಪೊಲೀಸರೇ ಶಾಕ್..!

ಬೆಂಗಳೂರು ಇತಿಹಾಸದಲ್ಲೇ ನಡೆದ ಮೊಟ್ಟ ಮೊದಲ ನೀಚ ಕೃತ್ಯ. ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಚಾಮರಾಜಪೇಟೆಯ ಕುಡಿದ ಮತ್ತಲ್ಲಿದ್ದ ಕ್ರೂರಿ ಹಸುವಿನ ಕೆಚ್ಚಲಿಗೆ ಚಾಕು ಹಾಕಿದ್ದು, ರಾತ್ರಿ ಕಳೆಯೋದರೊಳಗೆ ಆರೋಪಿ ಕೈಗೆ ಪೊಲೀಸರು ಕೋಳ ತೊಡಿಸಿದ್ದಾರೆ. ಇನ್ನು ವಿಚಾರಣೆ ವೇಳೆ ಆರೋಪಿಯ ಮನಸ್ಥಿತಿ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಹಸುಗಳ ಕೆಚ್ಚಲು ಕೊಯ್ದ ಆರೋಪಿ ಸೈಯದ್ ನಸ್ರು ಮನಸ್ಥಿತಿ ಕಂಡು ಪೊಲೀಸರೇ ಶಾಕ್..!
Syed Nasru
ರಾಚಪ್ಪಾಜಿ ನಾಯ್ಕ್
| Updated By: ರಮೇಶ್ ಬಿ. ಜವಳಗೇರಾ|

Updated on: Jan 13, 2025 | 8:15 PM

Share

ಬೆಂಗಳೂರು, (ಜನವರಿ 13): ಕೊಟ್ಟ ಮಾತಿಗೆ ತಪ್ಪದೆ ವ್ಯಾಘ್ರನೆದುರು ಬಂದು ನಿಂತ ಗೋ ಮಾತೆಯ ನಿಯತ್ತು ನೋಡಿದ. ಕಟುಕ ಪ್ರಾಣಿ ವ್ಯಾಘ್ರವೇ ಹಾರಿ ನೆಗೆದು ತನ್ನ ಪ್ರಾಣ ಬಿಟ್ಟಿತು. ಅಂತಾ ನಿಯತ್ತಿನ ಮೂರು ಹಸುವಿನ ಕೆಚ್ಚಲಿಗೆ ಆಸಾಮಿ ಚಾಕು ಹಾಕಿದ್ದಾನೆ. ಈ ಘಟನೆ ದೇಶಾದ್ಯಂತ ಸಂಚಲನವೇ ಸೃಷ್ಟಿಸಿದೆ. ಇದರಿಂದ ಅಲರ್ಟ್ ಆದ ಕಾಟನ್​ಪೇಟೆ ಪೊಲೀಸರು ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿ ಹಾಲು ಕೊಡುವ ಕೆಚ್ಚಲು ಕೊಯ್ದು ಪರಾರಿಯಾಗಿದ್ದ ವಿಚಿತ್ರ ಮನಸ್ಸಿನ ವ್ಯಾಘ್ರನನ್ನ ಬಂಧಿಸಿದ್ದಾರೆ. ಆತನೇ ಬಿಹಾರ ಮೂಲದ ಈ‌ ಸೈಯದ್ ನಸ್ರು.

ಅಕ್ಕಪಕ್ಕದವರು ನೀಡಿದ ಮಾಹಿತಿ ಹಾಗೂ ಟೆಕ್ನಿಕಲ್ ಎವಿಡೆನ್ಸ್ ನಿಂದ ಕಾಟನ್ ಪೇಟೆ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದು ರಾತ್ರಿಯೇ ನ್ಯಾಯಾಧೀಶರೆದುರು ಹಾಜರು ಪಡಿಸಿ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸೈಯದ್ ನಸ್ರು ಬಿಹಾರ ಮೂಲದವನು. ಬೆಂಗಳೂರಿನ ಹಳೆ ಪೆನ್ಷನ್ ಮೊಹಲ್ಲದಲ್ಲಿ ಅಂದ್ರೆ ಕೃತ್ಯ ನಡೆದ 50 ಮೀಟರ್ ದೂರದಲ್ಲಿರುವ ಸಣ್ಣದೊಂದಹ ಪ್ಲಾಸ್ಟಿಕ್ ಹಾಗೂ ಬಟ್ಟೆ ಬ್ಯಾಗ್ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲೇ ತಿಂದು ಅಲ್ಲೇ ಮಲಗಿಕೊಳ್ಳುತ್ತಿದ್ದ.

ಇದನ್ನೂ ಓದಿ: ಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ, ಓರ್ವನ ಬಂಧನ

ಈತ ಸ್ನಾನ ಮಾಡುತ್ತಿದ್ದದ್ದು ಮಾತ್ರ ವಾರಕ್ಕೊಮ್ಮೆ. ಅಲ್ಲದೇ ಈತನಿಗೆ ಹಿಂದಿ ಭಾಷೆ ಕೂಡ ಬರುವುದಿಲ್ಲ. ತಾನೆಲ್ಲಿದ್ದಿನಿ, ಇದು ಯಾವ ಊರು ಎನ್ನುವುದು ಕೂಡ ಗೊತ್ತಿಲ್ಲವಂತೆ. ಕೇವಲ ಲುಂಗಿ ಉಟ್ಕೊಳ್ತಿದ್ದ ಈ ವಿಚಿತ್ರ ಪ್ರಾಣಿ ಒಳ ಉಡುಪು ಕೂಡ ಧರಿಸೋದಿಲ್ಲವಂತೆ. ಅಲ್ಲದೇ ತನ್ನ ತಲೆ ಕೂದಲನ್ನ ತಾನೆ ಬೋಳಿಸಿಕೊಳ್ಳುತ್ತಿದ್ದ. ಜೊತೆಗೆ ಅತಿಹೆಚ್ಚಾಗಿ ನೀಲಿ ಚಿತ್ರಗಳನ್ನ ನೋಡುತ್ತಿದ್ದನಂತೆ. ಇನ್ನು ಒಂದು ವರ್ಷದ ಹಿಂದೆ ಕೂಡ ಹಸುಗಳ ಜೊತೆಗೆ ವಿಚಿತ್ರವಾಗಿ ನಡೆದುಕೊಂಡಿದ್ದ ಎನ್ನುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಹಸುವಿನ ಮಾಲೀಕ ಕರ್ಣ ಹೇಳಿದ್ದೇನು?

ಇನ್ನು ಆರೋಪಿ ಬಂಧನ ವಿಚಾರ ತಿಳಿದು ಪ್ರತಿಕ್ರಿಯಿಸಿರುವ ಹಸುವಿನ ಮಾಲೀಕ ಕರ್ಣ, ಆರೋಪಿಯನ್ನ ಈಗ ಮೆಂಟಲ್ ಎಂದು ಹೇಳುತ್ತಿದ್ದಾರೆ. ಮೆಂಟಲ್ ಆಗಿದ್ರೆ ಹೇಗೆ ಈ ಕೃತ್ಯ ಎಸಗುತ್ತಿದ್ದ. ಮೊದಲು ಅಂಗಡಿ ಮಾಲೀಕನನ್ನ ಅರೆಸ್ಟ್ ಮಾಡಬೇಕು. ಮೆಂಟಲ್ ಈ ರೀತಿ ಮಾಡೋದಕ್ಕೆ ಸಾಧ್ಯ ನಾ? ಅಲ್ಲದೇ ಕೃತ್ಯ ಮುಂಜಾನೆ ನಡೆದಿದೆ. ಆಗ ಯಾವ ಬಾರ್ ಓಪನ್ ಇರುತ್ತೆ. ಬ್ಯಾಗ್ ಅಂಗಡಿಯವನಿಗೆ ಹಸುವಿನಿಂದ ತೊಂದರೆ ಆಗ್ತಿತ್ತು ಅನಿಸುತ್ತೆ. ಅದಕ್ಕೆ ಈ ಕೃತ್ಯ ಮಾಡಿಸಿರಬೇಕು ಎಂದು ಆರೋಪಿಸಿದ್ದಾರೆ.

ಅಲ್ಲದೇ ಈ ಕೃತ್ಯ ಒಬ್ಬನೇ ಮಾಡೋದಕ್ಕೆ ಸಾಧ್ಯ ಇಲ್ಲ. ಇದರ ಹಿಂದೆ ಯಾರೋ ಇದ್ದಾರೆ. ಆರೋಪಿಯನ್ನ ತನಿಖೆಗೆ ಒಳಪಡಿಸದೇ ಒಂದೇ ದಿನಕ್ಕೆ ತರಾತುರಿಯಲ್ಲಿ ಜೈಲಿಗೆ ಹಾಕಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಹೆತ್ತ ತಾಯಿಯ ಎದೆ ಹಾಲು ಕುಡಿದಿವನು ಹಸುವಿನ ಎದೆ ಬಗೆದಿದ್ದಾನಲ್ಲ ಎಂದು ಮರುಗಿದ್ದಾರೆ.

ಇತ್ತ ಕೆಚ್ಚಲು ಕೊಯ್ದ ಮೂರು ಹಸುಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ..ಆದ್ರೆ ಮೂಕ ಪ್ರಾಣಿ ನೋವಿನಲ್ಲಿಯೇ ರಾತ್ರಿಯೆಲ್ಲ ಒದ್ದಾಡಿದೆ. ಅದರ ಆರ್ತನಾದ ನಿಜಕ್ಕೂ ಕರಳು ಹಿಂಡುವಂತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ