AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ: ಮದುವೆ ಬಳಿಕ ಮತಾಂತರಕ್ಕೆ ಒತ್ತಾಯ, ಪತಿ ವಿರುದ್ಧ ಪತ್ನಿ ದೂರು

ಹುಬ್ಬಳ್ಳಿಯ ಮಂಟೂರು ರಸ್ತೆಯ ನಿವಾಸಿ ಲಕ್ಷ್ಮೀ ವಯ್ಯಾಪುರಿ ಅವರು ತಮ್ಮ ಪತಿ ಶಫಿ ಅಹ್ಮದ್ ಕರ್ನೂಲ್ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಫಿ ತನ್ನ ನಿಜವಾದ ಹೆಸರನ್ನು ಮರೆಮಾಚಿ ಮದುವೆಯಾಗಿ, ನಂತರ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಲಕ್ಷ್ಮೀ ಪತಿಯಿಂದ ಮುಕ್ತಿ ಹಾಗೂ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಹುಬ್ಬಳ್ಳಿ: ಮದುವೆ ಬಳಿಕ ಮತಾಂತರಕ್ಕೆ ಒತ್ತಾಯ, ಪತಿ ವಿರುದ್ಧ ಪತ್ನಿ ದೂರು
ಹುಬ್ಬಳ್ಳಿ: ಮದುವೆ ಬಳಿಕ ಮತಾಂತರಕ್ಕೆ ಒತ್ತಾಯ, ಪತಿ ವಿರುದ್ಧ ಪತ್ನಿ ದೂರು
ಶಿವಕುಮಾರ್ ಪತ್ತಾರ್
| Edited By: |

Updated on: Jan 13, 2025 | 9:23 PM

Share

ಹುಬ್ಬಳ್ಳಿ, ಜನವರಿ 13: ಮತಾಂತರ (Religious conversion) ಆಗುವಂತೆ ಪತಿಯಿಂದ ಪತ್ನಿಗೆ ಕಿರುಕುಳ ಆರೋಪ ಕೇಳಿಬಂದಿದ್ದು, ಪತಿ‌ ವಿರುದ್ಧ ಪತ್ನಿ‌ ಪೊಲೀಸ್ ಠಾಣೆ ಮೆಟ್ಟಿಲೇರಿರುವಂತಹ ಘಟನೆ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನಡೆದಿದೆ. ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಪತಿ ಶಫಿ‌ ಅಹ್ಮದ್ ಕರ್ನೂಲ್ ವಿರುದ್ಧ ಪತ್ನಿ ಲಕ್ಷ್ಮೀ ಕಿರುಕುಳ ಆರೋಪ ಮಾಡಿದ್ದಾರೆ.

ಶಫಿ, ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಜನತಾ ಕಾಲೋನಿ ನಿವಾಸಿಯಾಗಿದ್ದು, ಲಕ್ಷ್ಮೀ ವಯ್ಯಾಪುರಿ, ಮಂಟೂರು ರಸ್ತೆಯ ಶೀಲಾ ಕಾಲೋನಿ ನಿವಾಸಿಯಾಗಿದ್ದರು. 2014-15ರಲ್ಲಿ ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದರು. 2017ರಲ್ಲಿ ಅಧಿಕೃತವಾಗಿ ಮದುವೆಯಾಗಿದ್ದರು. ಬಳಿಕ ಶಫಿ ಮತ್ತು ಲಕ್ಷ್ಮೀ ದಂಪತಿ ಹುಬ್ಬಳ್ಳಿಯ ಮಂಟೂರು ರಸ್ತೆ ವಾಸವಾಗಿದ್ದರು.

ಇದನ್ನು ಓದಿ: ಹಸುಗಳ ಕೆಚ್ಚಲು ಕೊಯ್ದ ಆರೋಪಿ ಸೈಯದ್ ನಸ್ರು ಮನಸ್ಥಿತಿ ಕಂಡು ಪೊಲೀಸರೇ ಶಾಕ್..!

ಅನಿಲ್ ಎಂಬ ಹೆಸರು ಹೇಳಿ ಶಫಿ ಅಹ್ಮದ್ ಮದುವೆಯಾಗಿದ್ದ. ಶಫಿ ಸುಳ್ಳು ಹೇಳಿ ಮದುವೆಯಾಗಿದ್ದಾನೆಂದು, ಮದುವೆ ಬಳಿಕ‌ ಇಸ್ಲಾಂಗೆ ಮತಾಂತರವಾಗುವಂತೆ ಕಿರುಕುಳ ನೀಡುತ್ತಿರುವುದಾಗಿ ಲಕ್ಷ್ಮೀ ಆರೋಪಿಸಿದ್ದಾರೆ. ಸದ್ಯ ಈ ವಿಚಾರವಾಗಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗೆ ಲಕ್ಷ್ಮೀ ದೂರು ನೀಡಿದ್ದು, ಸುಳ್ಳು ಹೇಳಿ ವಿವಾಹವಾಗಿರುವುದರಿಂದ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಫಿ ಅಹ್ಮದ್​ನಿಂದ ಮುಕ್ತಿ ಕೊಡಿಸಬೇಕು ಎಂದು ಲಕ್ಷ್ಮೀ ಮನವಿ ಮಾಡಿದ್ದಾರೆ.

ಮಾನಸಿಕ ಕಿರುಕುಳಕ್ಕೆ ಬೇಸತ್ತು ಚರ್ಚ್​​ನ​ ನಿವೃತ್ತ ಫಾದರ್ ಆತ್ಮಹತ್ಯೆಗೆ ಶರಣು

ಮಾನಸಿಕ ಕಿರುಕುಳಕ್ಕೆ ಬೇಸತ್ತು ಚರ್ಚ್​​ನ​ ನಿವೃತ್ತ ಫಾದರ್ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಧಾರವಾಡದ ಪ್ರತಿಭಾ ಕಾಲೋನಿ ನಿವಾಸದಲ್ಲಿ ನಡೆದಿದೆ. ಡೇವಿಡ್ ಆತ್ಮಹತ್ಯೆ ಮಾಡಿಕೊಂಡ ಫಾದರ್​. ಬಾಸೆಲ್ ಮಿಷನ್ ಶಿಕ್ಷಣ ಸಂಸ್ಥೆಯ ಧರ್ಮದರ್ಶಿ ಜಾನ್ ಕುರಿ ನಿರಂತರ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ರೀತಿ ಗಣರಾಜ್ಯೋತ್ಸವದಂದು 6 ಗಣ್ಯರ ಮನೆ ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಕರೆ

ಮೃತ ಡೇವಿಡ್ ಶಿರೂರ್ ವಿರುದ್ಧ 2019ರಲ್ಲಿ ಆಪಾದನೆ ಬಂದಿತ್ತು. ಉಪನ್ಯಾಸಕ ಹುದ್ದೆಗೆ ಸಂಬಂಧಿಸಿದಂತೆ ಸಂಸ್ಥೆಯ ಅಧ್ಯಕ್ಷರ ಸಹಿ ಡೇವಿಡ್ ದುರ್ಬಳಕೆ ಮಾಡಿಕೊಂಡ ಆರೋಪ ಮಾಡಲಾಗಿತ್ತು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸ್​ ಠಾಣೆಯಲ್ಲಿ ಡೇವಿಡ್ ಶಿರೂರ್​ ವಿರುದ್ಧ ದೂರು ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.