AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯಮಿಗೆ 5.75 ಕೋಟಿ ರೂ. ವಂಚನೆ, ವಿಡಿಯೋ ಕಾಲ್​ ರೆಕಾರ್ಡ್​ ಇಟ್ಟುಕೊಂಡು ಬ್ಲ್ಯಾಕ್​ಮೇಲ್!

ಬೆಂಗಳೂರಿನಲ್ಲಿ ಐಶ್ವರ್ಯ ಗೌಡ ಮತ್ತು ಶ್ವೇತಾ ಗೌಡ ವಂಚನೆ ಪ್ರಕರಣದ ನಂತರ ಮತ್ತೊಂದು ದೊಡ್ಡ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ರೇಖಾ ಎಂಬ ಮಹಿಳೆ ಉದ್ಯಮಿಗಳಿಂದ ಮತ್ತು ಷೇರ್‌ಚಾಟ್ ಬಳಕೆದಾರರಿಂದ ಕೋಟ್ಯಂತರ ರೂಪಾಯಿ ವಂಚಿಸಿದ್ದಾಳೆ. ಕಾರ್ಲ್ಟನ್ ಟವರ್ ಬೆಂಕಿ ದುರಂತವನ್ನು ಬಳಸಿಕೊಂಡು ಹಾಗೂ ಮಾಜಿ ಶಾಸಕರ ಹೆಸರನ್ನು ಉಲ್ಲೇಖಿಸಿ ವಂಚನೆ ಮಾಡಿದ್ದಾಳೆ. ಸಿಸಿಬಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ ಮತ್ತು ತನಿಖೆ ನಡೆಸುತ್ತಿದ್ದಾರೆ.

ಉದ್ಯಮಿಗೆ 5.75 ಕೋಟಿ ರೂ. ವಂಚನೆ, ವಿಡಿಯೋ ಕಾಲ್​ ರೆಕಾರ್ಡ್​ ಇಟ್ಟುಕೊಂಡು ಬ್ಲ್ಯಾಕ್​ಮೇಲ್!
ಆರೋಪಿ ರೇಖಾ
TV9 Web
| Edited By: |

Updated on: Jan 28, 2025 | 1:52 PM

Share

ಬೆಂಗಳೂರು, ಜನವರಿ 28: ಐಶ್ವರ್ಯಾಗೌಡ, ಶ್ವೇತಾಗೌಡ ವಂಚನೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ವಂಚನೆ (Fraud) ಜಾಲ ಬೆಳಕಿಗೆ ಬಂದಿದೆ. ಸಾಲ ಕೊಡಿಸುವ ನೆಪದಲ್ಲಿ ರೇಖಾ ಎಂಬುವರು ಆನೇಕ ಜನರಿಗೆ ನೂರಾರು ಕೋಟಿ ವಂಚನೆ ಮಾಡಿರುವುದು ಬಯಲಾಗಿದೆ. ಉದ್ಯಮಿಯೊಬ್ಬರಿಗೆ 25 ಕೋಟಿ ರೂ. ಆಸೆ ತೋರಿಸಿ, ಬರೋಬ್ಬರಿ 5.75 ಕೋಟಿ ರೂ. ವಂಚಿಸಿದ್ದಾರೆ. ಸದ್ಯ ಸಿಸಿಬಿ ಪೊಲೀಸರು (CCB Police) ಆರೋಪಿ ರೇಖರನ್ನು ಬಂಧಿಸಿದ್ದಾರೆ.

ರೇಖಾ ವಂಚಿಸಿದ್ದು ಹೇಗೆ?

2023ರಲ್ಲಿ ಉದ್ಯಮಿಗೂ ಮತ್ತು ರೇಖಾಗೂ ಪರಿಚಯವಾಗುತ್ತದೆ. ಕಾರ್ಲ್​ಟನ್ ಟವರ್ ಬೆಂಕಿ ದುರಂತದ ಕತೆ ಹೇಳುವ ಮೂಲಕ ಮೋಸದ ಜಾಲ ಬೀಸಿದ ರೇಖಾ, ನಾನು ಟವರ್ ದುರಂತದ ಪ್ರತ್ಯಕ್ಷ ಸಾಕ್ಷಿ, ನಾನು ಸಾಕ್ಷಿ ಹೇಳದಂತೆ ಮಾಲೀಕರು ಆಫರ್ ಮಾಡಿದ್ದಾರೆ. 25 ಕೋಟಿ ರೂ. ಕೊಡುತ್ತೇನೆ ಅಂದಿದ್ದಾರೆ. ನನ್ನ ಖಾತೆಯಲ್ಲಿದ್ದ 6 ಕೋಟಿ ರೂ. ಇದೆ. ಹೀಗಾಗಿ, ಇಡಿ ಮತ್ತು ಐಟಿ ನನ್ನ ಖಾತೆ ಸೀಜ್ ಮಾಡಿವೆ. ಆದರೆ, ಹಣ ರಿಲೀಸ್​ ಮಾಡಿಸಲುಕೆ ನನಗೆ ಹಣ ಬೇಕಾಗಿದೆ ಅಂತ ಉದ್ಯಮಿಯನ್ನು ನಂಬಿಸಿ 5.75 ಕೋಟಿ ರೂ. ಪಡೆದಿದ್ದಾಳೆ.

ಇದನ್ನೂ ಓದಿ: ಬಿಬಿಎಂಪಿ ಕಸದ ಟೆಂಡರ್ ಕೊಡಿಸುವುದಾಗಿ ಮಹಿಳೆಗೆ ಲಕ್ಷಾಂತರ ರೂ ವಂಚನೆ: ಕೇಸ್ ಬುಕ್

ಶೇರ್​ಚಾಟ್​ನಲ್ಲಿ ಇಂಜಿನಿಯರ್​ಗೆ ಮಕ್ಮಲ್ ಟೋಪಿ!

ರೇಖಾ ವಂಚನೆಯ ಜಾಲ ಇಷ್ಟಕ್ಕೆ ನಿಲ್ಲುವುದಿಲ್ಲ. ವಿಚಾರಣೆ ವೇಳೆ ಮತ್ತಷ್ಟು ಬಯಲಾಗಿದೆ. ಶೇರ್​ಚಾಟ್​ಮೂಲಕ ಇಂಜಿನಿಯರ್​ಗೆ ರೇಖಾ ವಂಚಿಸಿದ್ದಾಳೆ. ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ, ಇಂಜಿನಿಯರ್ ಬಳಿಯಿಂದ 31.10 ಲಕ್ಷ ಹಣ ವಸೂಲಿ ಮಾಡಿದ್ದಾಳೆ. ಈ ಸಂಬಂಧ ಬೆಂಗಳೂರಿನ ಬಸವನಗುಡಿ ಠಾಣೆಯಲ್ಲಿ ಇಂಜಿನಿಯರ್ ದೂರು ನೀಡಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿರುವಾಗಲೇ, ರೇಖಾ ಮುಂಬೈನಲ್ಲೇ ಕೂತು ನಿರೀಕ್ಷಣಾ ಜಾಮೀನು ಪಡೆದಿದ್ದಳು.

ರಾಜಕಾರಣಿಗಳ ಹೆಸರಲ್ಲೂ ವಂಚನೆ ಮಾಡಿರುವ ರೇಖಾ!

ಮಾಜಿ ಶಾಸಕ ರಾಜೂಗೌಡ ಹೆಸರಿನಲ್ಲೂ ವಂಚನೆ ಮಾಡಿರುವುದು ಪತ್ತೆಯಾಗಿದೆ. 2018ರಲ್ಲಿ ಶಾಸಕರಾಗಿದ್ದ ರಾಜುಗೌಡ ಹೆಸರೇಳಿ ಯಾದಗಿರಿಯಲ್ಲಿ ವಂಚನೆ ಮಾಡಿದ್ದಾಳೆ. ಕೆಲಸ ಕೊಡಿಸುವ ನೆಪದಲ್ಲಿ ಬೆಂಗಳೂರಿನಲ್ಲಿದ್ದ ಸುರಪುರದ ವ್ಯಕ್ತಿಯೊಬ್ಬರಿಗೆ ಪಂಗನಾಮ ಹಾಕಿದ್ದಳು. ಅಂದು ರಾಜುಗೌಡ ದೂರಿನ ಮೇರೆಗೆ ರೇಖಾಳನ್ನ ಅರೆಸ್ಟ್ ಮಾಡಲಾಗಿತ್ತು.

ಇನ್ನು ಪ್ರಕರಣ ಸಂಬಂಧ ಪೊಲೀಸ್ ಕಮಿಷನರ್ ಬಿ.ದಯಾನಂದ್​ ಮಾತನಾಡಿ, 6 ಕೋಟಿ ಹಣ ಪಡೆದು ವಂಚಿಸಿದ್ದ ಮೂವರನ್ನು ಸಿಸಿಬಿ ಬಂಧಿಸಿದೆ. ಕಾರ್ಲಟನ್​​ ಟೌನ್​​​ ಹೆಸರಲ್ಲಿ ಕಥೆ ಸೃಷ್ಟಿಸಿ 7 ಲಕ್ಷ ರೂ. ಕೇಳಿದ್ದಳು. ಬಳಿಕ ಹಂತಹಂತವಾಗಿ 5.75 ಕೋಟಿ ರೂ. ಪಡೆದುಕೊಂಡಿದ್ದಳು. ಪ್ರಕರಣ ಸಂಬಂಧ ಮಹಿಳೆ ಸೇರಿ ಮೂವರ ಆರೋಪಿಗಳ ಬಂಧನವಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.

ಬಸವನಗುಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೂ ಬಯಲಾಗಿದೆ. ಆರೋಪಿತೆಯ ಬ್ಯಾಂಕ್ ಖಾತೆಯಿಂದ 24 ಕೋಟಿ ರೂ. ವ್ಯವಹಾರ ಆಗಿದೆ. ಆರೋಪಿ ಮಹಿಳೆಯ ಬ್ಯಾಂಕ್​ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ಆಕೆ ವಿರುದ್ಧ 5 ವಂಚನೆ ಕೇಸ್, ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ. ಆಕೆಯ ಪತಿ ಮತ್ತು ಮತ್ತೊಬ್ಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?