ಬೆಂಗಳೂರು, ಜನವರಿ 10: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಅತ್ತೆ ಕಸ್ತೂರಿ ಶೆಟ್ಟಿ ಅವರ ಮನೆಯಲ್ಲಿದ್ದ 2.5 ಲಕ್ಷ ಕಳ್ಳತನವಾಗಿದೆ (Theft). ಕಸ್ತೂರಿ ಶೆಟ್ಟಿ ಅವರು 2023ರ ಡಿಸೆಂಬರ್ 31ರ ಮಧ್ಯಾಹ್ನ, ರೂಮ್ ಬೀರುವಿನಲ್ಲಿ 2.05 ಲಕ್ಷ ಹಣ ಇಟ್ಟಿದ್ದರು. ಆದರೆ ಈಗ ಆ ಹಣ ಕಾಣೆಯಾಗಿದೆ. ಮನೆ ಕೆಲಸದಾಕೆ ಮೇಲೆ ಅನುಮಾನಗೊಂಡು ಕಸ್ತೂರಿ ಶೆಟ್ಟಿ ಅವರು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮನೆ ಕೆಲಸದಾಕೆ ರತ್ನಮ್ಮ ಅವರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ರತ್ನಮ್ಮ ಕಳೆದ ಆರು ತಿಂಗಳಿನಿಂದ ಕಸ್ತೂರಿ ಶೆಟ್ಟಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಲಬುರಗಿ: ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಪುರಾವ್ ಸಾವಳಂಕೆ, ನಾಮದೇವ್ ಪವಾರ್ ಬಂಧಿತ ಆರೋಪಿಗಳು. ಬಂಧಿತರಿಂದ 3.68 ಲಕ್ಷದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದವು. ಸದ್ಯ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ