ಬೀದರ: ಪೊಲೀಸ್ ವೇಷ ಧರಿಸಿ ವಿದೇಶಿ ಹಣ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

| Updated By: ವಿವೇಕ ಬಿರಾದಾರ

Updated on: Apr 02, 2024 | 12:49 PM

ಚಿನ್ನ ತರಲು ಮುಂಬೈಗೆ ಹೊರಟಿದ್ದ ವ್ಯಕ್ತಿಯ ಮೇಲೆ ಪೊಲೀಸ್​ ವೇಷಧಾರಿಗಳು ದಾಳಿ ಮಾಡಿ ಆತನ ಬಳಿ ಇದ್ದ 80 ಸಾವಿರ ವಿದೇಶಿ ಕರೆನ್ಸಿಯನ್ನು ಕದ್ದು ಪರಾರಿಯಾಗಿರುವ ಘಟನೆ ಬೀದರ್​​​ನಲ್ಲಿ ನಡೆದಿದೆ. ಇನ್ನು ಬೀದರನ 16 ​ಠಾಣೆಗಳಿಗೆ ಬೇಕಾಗಿದ್ದ 32 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೀದರ: ಪೊಲೀಸ್ ವೇಷ ಧರಿಸಿ ವಿದೇಶಿ ಹಣ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ
ಬೀದರ​ ಪೊಲೀಸ್​
Follow us on

ಬೀದರ್​, ಏಪ್ರಿಲ್​ 02: ಪೊಲೀಸ್ (Police) ವೇಷ ಧರಿಸಿ ಕಳ್ಳತನ ‌ಮಾಡಿದ್ದ ಮೂವರುನ್ನು ಬಸವಕಲ್ಯಾಣ (Basavakalyan) ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿನ್ನದ ವ್ಯಾಪಾರಿ ತನ್ನ ಸಿಬ್ಬಂದಿ ಬಳಿ 21 ಲಕ್ಷ ರೂಪಾಯಿ ‌ಮೌಲ್ಯದ 80 ಸಾವಿರ ವಿದೇಶಿ ಕರೆನ್ಸಿ ಕೊಟ್ಟು ಚಿನ್ನ ತರಲು ಕಳುಹಿಸಿದ್ದರು. ಸಿಬ್ಬಂದಿ ವಿದೇಶಿ ಕರೆನ್ಸಿಯನ್ನು ತೆಗೆದುಕೊಂಡು ಜಾಗ್ವಾರ ಬಸ್​ನಲ್ಲಿ ಹೈದ್ರಾಬಾದ್​ನಿಂದ ಬಸವಕಲ್ಯಾಣ ಮೂಲಕ ಮುಂಬೈಗೆ ಹೋಗುತ್ತಿದ್ದರು.

ಈ ಮಾಹಿತಿಯನ್ನು ತಿಳಿದಿದ್ದ ಕಳ್ಳರು, ಪೊಲೀಸ್ ವೇಷ ಧರಿಸಿಕೊಂಡು, ಬಸ್ ಮೇಲೆ ದಾಳಿ ಮಾಡಿದ್ದಾರೆ. ಬಳಿಕ ಅಗತ್ಯಕಿಂತ ಹೆಚ್ಚಿನ‌ ಹಣ ತೆಗೆದುಕೊಂಡು ಹೋಗುತ್ತಿದ್ದೀಯಾ ಎಂದು ಸಿಬ್ಬಂದಿ ಬಳಿ ಇದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾದ ಮೂರೇ ದಿನಗಳಲ್ಲಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ಪತ್ನಿಯನ್ನು ಕೊಂದು ರಾತ್ರಿಯಿಡೀ ಶವದ ಜತೆ ಮಲಗಿದ ಪತಿ

16 ಪೊಲೀಸ್ ‌ಠಾಣೆಯ 31 ಕಳ್ಳತನ ಪ್ರಕರಣ ಭೇದಿಸಿದ ಪೊಲೀಸ್

16 ಪೊಲೀಸ್ ‌ಠಾಣೆಗಳಿಗೆ ಬೇಕಾಗಿದ್ದ 32 ಆರೋಪಿಗಳನ್ನು ಬೀದರ್​ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು 31 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳ ಬಳಿ ಇದ್ದ 65 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಕಳೆದ ಒಂದು ತಿಂಗಳಿನಿಂದ ವಿದೇಶಿ ಕರೆನ್ಸಿ, ಬಂಗಾರ, ಜಾನುವಾರ, ಬೈಕ್, ಮೊಬೈಲ್, ಜೀಪ್, ಆಟೋ ಕದ್ದು ಗ್ಯಾಂಗ್​ ಪರಾರಿಯಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ