ಗುಜರಾತ್​ನ ಆಸ್ಪತ್ರೆಯ ಕೊಠಡಿಯೊಂದರಲ್ಲಿ ತಾಯಿ-ಮಗಳ ಮೃತದೇಹ ಪತ್ತೆ, ಕೊಲೆ ಶಂಕೆ

| Updated By: ನಯನಾ ರಾಜೀವ್

Updated on: Dec 22, 2022 | 6:28 AM

ಅಹಮದಾಬಾದ್​ನ ಭೂಭಾಯ್ ಪಾರ್ಕ್​ ಬಳಿಯಿರುವ ಆಸ್ಪತ್ರೆಯ ಕೊಠಡಿಯೊಂದರಲ್ಲಿ ತಾಯಿ ಮತ್ತು ಮಗಳ ಶವ ಪತ್ತೆಯಾಗಿದೆ. ಆಪರೇಷನ್ ಥಿಯೇಟರ್​ನ ಕಬೋರ್ಡ್​ನಲ್ಲಿ ಮಗಳ ಶವ ಪತ್ತೆಯಾಗಿದ್ದು, ನಂತರ ಹಾಸಿಗೆಯ ಕೆಳಗೆ ತಾಯಿಯ ಶವ ಪತ್ತೆಯಾಗಿದೆ.

ಗುಜರಾತ್​ನ ಆಸ್ಪತ್ರೆಯ ಕೊಠಡಿಯೊಂದರಲ್ಲಿ ತಾಯಿ-ಮಗಳ ಮೃತದೇಹ ಪತ್ತೆ, ಕೊಲೆ ಶಂಕೆ
ಸಾಂದರ್ಭಿಕ ಚಿತ್ರ
Image Credit source: NDTV
Follow us on

ಅಹಮದಾಬಾದ್​ನ ಭೂಭಾಯ್ ಪಾರ್ಕ್​ ಬಳಿಯಿರುವ ಆಸ್ಪತ್ರೆಯ ಕೊಠಡಿಯೊಂದರಲ್ಲಿ ತಾಯಿ ಮತ್ತು ಮಗಳ ಶವ ಪತ್ತೆಯಾಗಿದೆ. ಆಪರೇಷನ್ ಥಿಯೇಟರ್​ನ ಕಬೋರ್ಡ್​ನಲ್ಲಿ ಮಗಳ ಶವ ಪತ್ತೆಯಾಗಿದ್ದು, ನಂತರ ಹಾಸಿಗೆಯ ಕೆಳಗೆ ತಾಯಿಯ ಶವ ಪತ್ತೆಯಾಗಿದೆ. ಚಿಕಿತ್ಸೆಗಾಗಿ ತಾಯಿ ಮತ್ತು ಮಗಳು ಆಸ್ಪತ್ರೆಗೆ ಬಂದಿದ್ದರು ಎಂದು ಎಸಿಪಿ ಮಿಲಾಪ್ ಪಟೇಲ್ ತಿಳಿಸಿದರು.
ಮಗಳ ಶವ ಪತ್ತೆಯಾದ ಬಳಿಕ ತಾಯಿಯ ಪತ್ತೆಗೆ ಪೊಲೀಸರು ತನಿಖೆ ನಡೆಸಿದ್ದರು. ಪೊಲೀಸರು ತನಿಖೆ ನಡೆಸಿದಾಗ ತಾಯಿಯ ಶವವೂ ಪತ್ತೆಯಾಗಿದೆ.

ಈ ಸಂಬಂಧ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮನ್ಸುಖ್ ಎಂಬಾತನನ್ನು ಬಂಧಿಸಲಾಗಿದೆ. ಅಹಮದಾಬಾದ್‌ನ ಕಗ್ಡಾಪಿತ್ ಪೊಲೀಸ್ ಠಾಣೆ ವ್ಯಾಪ್ತಿಯ ಭೂಲಾಭಾಯಿ ಪಾರ್ಕ್ ಬಳಿ ಇರುವ ಆಸ್ಪತ್ರೆಯೊಳಗೆ ಬಂದಿರುವ ಮಾಹಿತಿಯ ಪ್ರಕಾರ ಕೊಠಡಿಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯ ಆಪರೇಷನ್ ಥಿಯೇಟರ್ ಒಳಗಿದ್ದ ಬೀರುವಿನಿಂದ ವಾಸನೆ ಬರುತ್ತಿತ್ತು ಅದನ್ನು ತೆರೆದು ನೋಡಿದಾಗ ಶವ ಸಿಕ್ಕಿದೆ.
ಆಕೆಗೆ 6 ವರ್ಷಗಳ ಹಿಂದೆ ವಿವಾಹವಾಗಿತ್ತು. ಯುವತಿ ತನ್ನ ತಂದೆಯ ಮನೆಯಲ್ಲಿದ್ದಳು, ಅರ್ಪಿತ್ ಶಾ ಅವರ ಕ್ಲಿನಿಕ್‌ಗೆ ಬಾಲಕಿ ಕಿವಿ ಚಿಕಿತ್ಸೆಗಾಗಿ ಬರುತ್ತಿದ್ದಳು. ಮನ್ಸುಖ್ ಎಂಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ.

ಮನ್ಸುಖ್ ಈ ಕ್ಲಿನಿಕ್ ನಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದು, ಬಾಲಕಿಗೆ ಪರಿಚಯದವನಾಗಿದ್ದಾನೆ. ವೈದ್ಯರ ಚಿಕಿತ್ಸಾಲಯದಲ್ಲಿ ಮತ್ತೊಂದು ಮೃತದೇಹವೂ ಪತ್ತೆಯಾಗಿದೆ. ಇದು ಬಾಲಕಿಯ ತಾಯಿಯದ್ದಾಗಿತ್ತು. ಈ ಬಾಲಕಿಯ ಶವ ಇಲ್ಲಿಗೆ ಹೇಗೆ ಬಂತು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ.

ಮತ್ತೊಂದೆಡೆ, ಪ್ರಾಥಮಿಕವಾಗಿ ಬಾಲಕಿಯನ್ನು ಹತ್ಯೆಗೈದಿರುವ ಶಂಕೆಯ ಆಧಾರದ ಮೇಲೆ ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಆಸ್ಪತ್ರೆಯೊಳಗೆ ಪತ್ತೆಯಾಗಿರುವ ಶವ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಆದರೆ, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತ ಬಾಲಕಿಯ ಹೆಸರು ಭಾರತಿ ವಾಲಾ ಎಂದು ತಿಳಿದು ಬಂದಿದೆ.

ಮೃತ ಭಾರತಿ ಮಿತಿಮೀರಿದ ಔಷಧ ಸೇವನೆ ಅಥವಾ ಇಂಜೆಕ್ಷನ್ ನಿಂದಾಗಿ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಭಾರತಿ ಆಸ್ಪತ್ರೆಯ ಯುವಕನೊಂದಿಗೆ ಸಂಪರ್ಕದಲ್ಲಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ