Kalaburagi News: ಮಾರಕಾಸ್ತ್ರದಿಂದ ಇರಿದು ಯುವಕನ ಬರ್ಬರ ಕೊಲೆ
ಮಾರಕಾಸ್ತ್ರದಿಂದ ಇರಿದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಆಜಾದಪುರ್ ರಸ್ತೆಯಲ್ಲಿ ನಡೆದಿದೆ.
ಕಲಬುರಗಿ: ಮಾರಕಾಸ್ತ್ರದಿಂದ ಇರಿದು ಯುವಕನನ್ನು (Teen Boy) ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ನಗರದ ಆಜಾದಪುರ್ ರಸ್ತೆಯಲ್ಲಿ ನಡೆದಿದೆ. ಉಮೇರ್ (23) ಕೊಲೆಯಾದ ಯುವಕ. ಉಮೇರ್, ಕಲಬುರಗಿ (Kalaburagi) ನಗರದ ಬಿಲಾಲಾಬಾದ್ ಕಾಲೋನಿ ನಿವಾಸಿಯಾಗಿದ್ದಾನೆ. ನಿನ್ನೆ (ಜೂ.05) ರಾತ್ರಿ ಹನ್ನೊಂದು ಮೂವತ್ತರ ಸುಮಾರಿಗೆ ದುಷ್ಕರ್ಮಿಗಳು ಚಾಕುವಿನಿಂದ ದೇಹದ ವಿವಿಧೆಡೆ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಉಮೇರ್ನನ್ನು ಸ್ಥಳೀಯರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಾಸೀಟ್ ಭದ್ರತಾ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ
ಮಡಿಕೇರಿ: ರಾಜಾಸೀಟ್ ಭದ್ರತಾ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಗರದ ರಾಜಾಸೀಟಿ ಉದ್ಯಾನವನ ಬಳಿ ನಡೆದಿದೆ. ರಾಜಾಸೀಟ್ ಭದ್ರತಾ ಸಿಬ್ಬಂದಿ ಜಯಣ್ಣ (45) ಅವರ ಮೇಲೆ ಖಲೀಲ್ ಎಂಬಾತ ಹಲ್ಲೆ ಮಾಡಿದ್ದಾನೆ. ಆರೋಪಿ ಖಲೀಲ್ ರಾಜಾಸೀಟ್ನಲ್ಲಿ ಚಿಪ್ಸ್ ವ್ಯಾಪಾರ ಮಾಡುತ್ತಿದ್ದನು.
ಈತನ ಬಳಿ ಕಡಿಮೆ ಬೆಲೆಗೆ ಚಿಪ್ಸ್ ಕೇಳಿದ್ದಕ್ಕೆ ಜಯಣ್ಣ ಅವರಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ಜಯಣ್ಣ ಅವರ ತಲೆಗೆ ತೀವ್ರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಜಯಣ್ಣ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಫೈರಿಂಗ್ ಮಾಡಿ ಆರೋಪಿಯ ಬಂಧನ
ಶಿವಮೊಗ್ಗ: ಬಾರ್ ಕ್ಯಾಷಿಯರ್ ಸಚಿನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆರೋಪಿ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆರೋಪಿ ಕಾಲಿಗೆ ಫೈರಿಂಗ್ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಪಿಎಸ್‌ಐ ಎಸ್. ರಾಜು ರೆಡ್ಡಿ ಅವರು ಸ್ವಯಂ ರಕ್ಷಣೆಗೆ ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದರು.
ಗಾಯಾಳು ಆರೋಪಿ ಸತೀಶ್ನನ್ನು ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಪ್ರವೀಣ್ ಮತ್ತು ಶಿವರಾಜ್ಗೆ ಗಾಯಗಳಾಗಿದ್ದು, ಅವರನ್ನೂ ಕೂಡ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ: ಆಗಂತುಕನಿಗೆ ಮೊಬೈಲ್ ರಿಮೋಟ್ ಕೊಟ್ಟು ನಿದ್ದೆಗೆ ಜಾರಿದ ಮಹಿಳೆ; ಕಣ್ಮರೆಯಾಯಿತು ಲಕ್ಷಗಟ್ಟಲೆ ಹಣ
ಬಾರ್ ಕ್ಯಾಶಿಯರ್ನ ಕೊಲೆ
ನಿನ್ನೆ (ಜೂ.05) ರಂದು ಬಾರ್ಗೆ ಗಾಂಜಾ ಅಮಲಿನಲ್ಲಿ ಬಂದ ಮೂವರು ಮದ್ಯ ಕೇಳಿದ್ದರು. ಅದಕ್ಕೆ ಕ್ಯಾಶಿಯರ್ ಸಚಿನ್ ಸಮಯ ಮುಗದಿದೆ ಮದ್ಯ ನೀಡಲು ಆಗುವುದಿಲ್ಲ ಎಂದಿದ್ದರು. ಇದರಿಂದ ಸಿಟ್ಟಿಗೆದ್ದ ಮೂವರು ಗಲಾಟೆ ಮಾಡಿದ್ದರು.
ನಂತರ ಡ್ರ್ಯಾಗನ್ನಿಂದ ದುಷ್ಕರ್ಮಿಗಳು ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಅಲ್ಲದೇ ಆರೋಪಿಗಳು ಬಾರ್ ಸನಿಹ ಗಸ್ತಿಗೆ ನೀಯೋಜಿಸಿದ್ದ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಶಿಯರ್ ಸಚಿನ್ ಅವರನ್ನು ಸ್ಥಳೀಯರು ಕೂಡಲೇ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಕುಂಸಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿತ್ತು.
ಕತ್ತು ಕುಯ್ದ ಸ್ಥಿತಿಯಲ್ಲಿ ಬಿಹಾರ ಮೂಲದ ವ್ಯಕ್ತಿಯ ಶವ ಪತ್ತೆ
ತುಮಕೂರು: ಕತ್ತು ಕುಯ್ದ ಸ್ಥಿತಿಯಲ್ಲಿ ಬಿಹಾರ ಮೂಲದ ವ್ಯಕ್ತಿಯ ಶವ ಪತ್ತೆಯಾಗಿರುವಂತಹ ಘಟನೆ ಅಂತಸರನಹಳ್ಳಿ ತರಕಾರಿ ಮಾರ್ಕೆಟ್‌ನಲ್ಲಿ ನಡೆದಿತ್ತು. ಸಾರ್ವಜನಿಕ ಶೌಚಾಲಯದಲ್ಲಿ ಲಖನ್ ಮಾಂಜಿ(36) ಶವ ಪತ್ತೆಯಾಗಿತ್ತು. ಮಾಂಜಿ 6 ತಿಂಗಳಿಂದ ಮಾರ್ಕೆಟ್‌ನ ಶೌಚಾಲಯ ಕೀಪರ್ ಆಗಿದ್ದನು. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:26 am, Tue, 6 June 23