ಮೂರು ದಶಕಗಳಲ್ಲಿ 10 ಕೊಲೆ ಮಾಡಿದ ಅಮೆರಿಕದ ಡೆನ್ನಿಸ್ ರೇಡರ್ ತನ್ನ ಅಪರಾಧಗಳಿಗೆ ಮಿಡಿಯಾ ಕವರೇಜ್ ಸಿಗದ ಕಾರಣ ಸಿಡಿಮಿಡಿಗೊಂಡಿದ್ದ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 15, 2023 | 8:04 AM

ಜನೆವರಿಯಲ್ಲಿ ನಡೆಸಿದ ಕೊಲೆಗಳ ಬಗ್ಗೆ ಅವನು ಪತ್ರವೊಂದನ್ನು ಬರೆದು ಅದರಲ್ಲಿ, ‘ನಾನು ರೂಪಿಸಿಕೊಂಡಿದ್ದ ಕೋಡ್ ವರ್ಡ್ ಗಳೆಂದರೆ ಬ್ಲೈಂಡ್ ದೆಮ್, ಟಾರ್ಚರ್ ದೆಮ್ ಕಿಲ್ ದೆಮ್-ಬಿ ಟಿ ಕೆ!’ ಅಂತ ಉಲ್ಲೇಖಿಸಿದ್ದ.

ಮೂರು ದಶಕಗಳಲ್ಲಿ 10 ಕೊಲೆ ಮಾಡಿದ ಅಮೆರಿಕದ ಡೆನ್ನಿಸ್ ರೇಡರ್ ತನ್ನ ಅಪರಾಧಗಳಿಗೆ ಮಿಡಿಯಾ ಕವರೇಜ್ ಸಿಗದ ಕಾರಣ ಸಿಡಿಮಿಡಿಗೊಂಡಿದ್ದ!
ಬಿಟಿಕೆ ಕಿಲ್ಲರ್ ಡೆನ್ನಿಸ್ ರೇಡರ್
Follow us on

ಅವನ ಹೆಸರು ಡೆನ್ನಿಸ್ ರೇಡರ್ (Dennis Rader) ಅಂತಾಗಿದ್ದರೂ ವಿಶ್ವ ಪಾತಕ ಲೋಕದಲ್ಲಿ ಅವನು ಬಿಟಿಕೆ ಅಂತಲೇ ಚಿರಪರಿಚಿತ-ಯಾಕೆಂದರೆ ಅವನು ತನ್ನ ಬೇಟೆಗಳ ಕಣ್ಣುಕಟ್ಟಿ, ಹಿಂಸಿಸಿದ ಬಳಿಕ ಕೊಲ್ಲುತ್ತಿದ್ದ. ಅಮೆರಿಕಾದ ಕ್ಯಾನ್ಸಾಸ್ ನಲ್ಲಿ (Kansas) 1945 ರಲ್ಲಿ ಹುಟ್ಟಿದ ಡೆನ್ನಿಸ್ ಸುಮಾರು ಮೂರು ದಶಕಗಳ ಅವಧಿಯಲ್ಲಿ 10 ಜನರನ್ನು ಕೊಂದು ಸರಣಿ ಹಂತಕ ಅನಿಸಿಕೊಂಡಿದ್ದನಲ್ಲದೆ ಪೊಲೀಸರಿಗೆ ತಲೆನೋವಾಗಿ ಕಾಡಿದ್ದ. ಕ್ಯಾನ್ಸಸ್ ನ ವಿಚಿಟಾ (Wichita) ಎಂಬಲ್ಲಿ ಬೆಳೆಯುವಾಗಲೇ ಅವನು ಪ್ರಾಣಿಗಳನ್ನು ಕೊಲ್ಲುತ್ತಿದ್ದನಂತೆ. ಆ ಸಮಯದಲ್ಲಿ ಅವನು ಹಿಂಸಾತ್ಮಕವಾಗಿ ಲೈಂಗಿಕ ಕ್ರೀಡೆಯಲ್ಲಿ ತೊಡಗುವ ಕಲ್ಪನೆಗಳಲ್ಲಿ ಮುಳುಗುತ್ತಿದ್ದನಂತೆ. ಮಹಿಳೆಯರ ಕೈಕಾಲುಗಳನ್ನು ಕಟ್ಟಿ ಹಾಕಿ ರತಿಕ್ರೀಡೆ ನಡೆಸುವ ಬಗ್ಗೆ ಕಲ್ಪಿಸಿಕೊಂಡು ವಿಕೃತಾನಂದವನ್ನು ಅನುಭವಿಸುತ್ತಿದ್ದನಂತೆ. 1960 ರ ದಶಕದಲ್ಲಿ ಅಮೆರಿಕದ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ 1970 ರಲ್ಲಿ ಡೆನ್ನಿಸ್ ವಿಚಿಟಾಗೆ ವಾಪಸ್ಸಾಗಿದ್ದ.

ಮದುವೆಯಾಗಿದ್ದ, ಎರಡು ಮಕ್ಕಳೂ ಹುಟ್ಟಿದ್ದವು

ವಿಚಿಟಾದಲ್ಲೇ ಅವನು ಮದುವೆ ಮಾಡಿಕೊಂಡು ಎರಡು ಮಕ್ಕಳ ತಂದೆ ಕೂಡ ಆದ. ಅ ಸಮಯದಲ್ಲಿ ಅವನು ಹಲವಾರು ಕಂಪನಿಗಳಲ್ಲಿ ಕೆಲಸ ಮಾಡಿದ ಮತ್ತು ಕ್ಯಾಂಪಿಗ್ ಉಪಕರಣಗಳನ್ನು ತಯಾರಿಸುವ ಕೊಲ್ಮನ್ ಕಂಪನಿ ಅವನು ಕೆಲಸ ಮಾಡಿದ ಸಂಸ್ಥೆಗಳಲ್ಲಿ ಒಂದಾಗಿತ್ತು. ನಿಮಗೆ ಆಶ್ಚರ್ಯವಾಗಬಹುದು, 1979 ರಲ್ಲಿ ಅವನು ಕ್ರಿಮಿನಲ್ ಜಸ್ಟಿಸ್ ವಿಷಯದಲ್ಲಿ ವಿಚಿಟಾ ಸ್ಟೇಟ್ ಯೂನವರ್ಸಿಟಿಯಿಂದ ಪದವಿ ಪಡೆದ. ವ್ಯಾಸಂಗ ಮಾಡುವಾಗಲೇ ಹೋಮ್-ಸೆಕ್ಯುರಿಟಿ ಕಂಪನಿ ಎಡಿಟಿಯಲ್ಲಿ ಕೆಲಸಕ್ಕೆ ಸೇರಿದ್ದ. 1991 ರಲ್ಲಿ ಡೆನ್ನಿಸ್, ಕ್ಯಾನ್ಸಾಸ್ ನ ಪಾರ್ಕ್ ಸಿಟಿಯಲ್ಲಿ ಕಂಪ್ಲೈಯನ್ಸ್ ಅಧಿಕಾರಿಯಾಗಿ ಕೆಲಸ ಮಾಡಿದ. ಚರ್ಚ್ ಚಟುವಟಿಕೆಗಳಲ್ಲೂ ಅವನ ಸಕ್ರಿಯನಾಗುರುತ್ತಿದ್ದ.

ಇದನ್ನೂ ಓದಿ: Murali Vijay: 80ರ ಮುದುಕಂತೆ ನೋಡ್ತಾರೆ: ವಿದೇಶಿ ತಂಡದತ್ತ ಮುರಳಿ ವಿಜಯ್

ಅವನು ತನ್ನ ಮೊದಲ ಕೊಲೆ ಮಾಡಿದ್ದು ಜನೆವರಿ 15, 1974 ರಂದು. ವಿಚಿಟಾದಲ್ಲಿ ನೆಲೆಸಿದ್ದ ಕುಟುಂಬವೊಂದರ ಎರಡು ಮಕ್ಕಳೂ ಸೇರಿದಂತೆ ನಾಲ್ವರನ್ನು ಅವನು ಉಸಿರುಗಟ್ಟಿಸಿ ಸಾಯಿಸಿದ್ದ. ಆ ಮಕ್ಕಳ ತಾಯಿ ಅವನೊಂದಿಗೆ ಕೋಲ್ಮನ್ ಕಂಪನಿಯಲ್ಲಿ ಕೆಲಸ ಮಾಡಿದ್ದಳು. ಹತ್ಯೆಗೈದ ನಾಲ್ವರ ಪೈಕಿ ಯಾರ ಮೇಲೂ ಅವನು ಲೈಂಗಿಕ ದೌರ್ಜನ್ಯ ನಡೆಸಿರಲಿಲ್ಲವಾದರೂ ಘಟನಾ ಸ್ಥಳದಲ್ಲಿ ವೀರ್ಯದ ಕಲೆಗಳು ಪತ್ತೆಯಾಗಿದ್ದವು. ಆ ಮನೆಯಿಂದ ವಾಚೊಂದನ್ನು ಕದ್ದು ಅದನ್ನು ನೆನಪಿಗಾಗಿ ಇಟ್ಟುಕೊಂಡಿದ್ದ. ಅದಾದ ಮೇಲೆ ತಾನು ಕೊಲೆಮಾಡಿದ ಮಹಿಳೆಯರ ಒಳ ಉಡುಪುಗಳನ್ನು ಅವನು ಜ್ಞಾಪಕಾರ್ಥವಾಗಿ ಇಟ್ಟುಕೊಂಡಿದ್ದ.

ಸಹೋದ್ಯೋಗಿಯನ್ನುಟಾರ್ಗೆಟ್ ಮಾಡಿದ

ಏಪ್ರಿಲ್ 1974ರಲ್ಲಿ ಕೋಲ್ಮನ್ ಕಂಪನಿಯಲ್ಲಿ ತನ್ನ ಸಹೋದ್ಯೋಗಿಯಾಗಿದ್ದ 21-ವರ್ಷ ವಯಸ್ಸಿನ ಇನ್ನೊಬ್ಬ ಮಹಿಳೆಯನ್ನು ಟಾರ್ಗೆಟ್ ಮಾಡಿದ್ದ. ಅವಳ ಮನೆ ಹೊಕ್ಕ ಬಳಿಕ ಡೆನ್ನಿಸ್ ಅವಳ ಸಹೋದರನನ್ನು ಎದುರಿಸಬೇಕಾಯಿತು. ಆದರೆ ಅವನು ಗುಂಡೇಟು ತಿಂದರೂ ಅವನಿಂದ ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದ. ಆಮೇಲೆ ಡೆನ್ನಿಸ್ ಆ ಮಹಿಳೆಯನ್ನು ಮಾರಣಾಂತಕವಾಗಿ ಚಾಕುವಿನಿಂದ ತಿವಿದು ಅಲ್ಲಿಂದ ಪರಾರಿಯಾಗಿದ್ದ.

ಮಗಳೊಂದಿಗೆ ಬಿಟಿಕೆ ಹಂತಕ

ಜನೆವರಿಯಲ್ಲಿ ನಡೆಸಿದ ಕೊಲೆಗಳ ಬಗ್ಗೆ ಅವನು ಪತ್ರವೊಂದನ್ನು ಬರೆದು ಅದರಲ್ಲಿ, ‘ನಾನು ರೂಪಿಸಿಕೊಂಡಿದ್ದ ಕೋಡ್ ವರ್ಡ್ ಗಳೆಂದರೆ ಬ್ಲೈಂಡ್ ದೆಮ್, ಟಾರ್ಚರ್ ದೆಮ್ ಕಿಲ್ ದೆಮ್-ಬಿ ಟಿ ಕೆ!’ ಅಂತ ಉಲ್ಲೇಖಿಸಿದ್ದ.

ನಂತರದ ಎರಡು ದಶಕಗಳಲ್ಲಿ ಡೆನ್ನಿಸ್ ಮತ್ತೂ ಐವರು ಮಹಿಳೆಯರ ಕೊಲೆ ಮಾಡಿದ. ಮಾರ್ಚ್ 1977 ತನ್ನ 6 ನೇ ಆಹುತಿಯಾಗಿದ್ದ ಮಹಿಳೆಯ ಮೂರು ಮಕ್ಕಳನ್ನು ಬಾತ್ ರೂಮಲ್ಲಿ ಕೂಡಿಹಾಕಿದ ನಂತರ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದ. 1977 ರ ಸೆಂಬರ್ ನಲ್ಲಿ ಡೆನಿಸ್ ತನ್ನ 7 ನೇ ಕೊಲೆ ಮಾಡಿದ ಬಳಿಕ ಅಅದಕ್ಕೆ ಮಿಡಿಯಾ ಕವರೇಜ್ ಸಿಗದೆ ಹೋದ ಕಾರಣಕ್ಕೆ ವ್ಯಗ್ರನಾಗಿದ್ದ.

ಇನ್ನೂ ಎಷ್ಟು ಕೊಲೆ ಮಾಡಿದರೆ ನನ್ನ ಸುದ್ದಿ ಕವರ್ ಮಾಡುತ್ತೀರಿ?

ಸ್ಥಳೀಯ ಟಿವಿ ಸ್ಟೇಶನೊಂದಕ್ಕೆ ಅವನು ಪತ್ರ ಬರೆದು, ‘ ನಿಮ್ಮ ಟಿವಿಯಲ್ಲಿ ಸುದ್ದಿ ಬಿತ್ತರವಾಗಬೇಕಾದರೆ ಮತ್ತು ಪತ್ರಿಕೆಗಳಲ್ಲಿ ಅದಕ್ಕೆ ಕವರೇಜ್ ಸಿಗಬೇಕಾದರೆ ನಾನು ಇನ್ನೂ ಎಷ್ಟು ಜನರನ್ನು ಕೊಲ್ಲಬೇಕು? ಅಂತ ಕೇಳಿದ್ದ!’ ಆದರೆ ಕವರೇಜ್ ಶುರುವಾದ ಬಳಿಕ ಅವನು ಅತಂಕಕ್ಕೀಡಾಗಿದ್ದ. ಹಾಗಾಗೇ ಅವನು ತನ್ನ ಎಂಟನೇ ಕೊಲೆ ಎಂಟು ವರ್ಷಗಳ ಬಳಿಕ ಮಾಡಿದ್ದ. ಅವನ ನೆರೆಮನೆಯಾಕೆ 1985 ರಲ್ಲಿ ಅವನಿಗೆ ಬಲಿಯಾಗಿದ್ದಳು. ಕೈಕಾಲುಗಳು ಬಿಗಿದಿದ್ದ ಆ ಮಹಿಳೆಯ ದೇಹವನ್ನು ಅವನು ಚರ್ಚ್ ಗೂ ತೆಗೆದುಕೊಂಡು ಹೋಗಿದ್ದನಂತೆ. ಅದಾದ ಬಳಿಕ 1986ರಲ್ಲಿ ಅವನು ಎರಡು ಮಕ್ಕಳ ತಾಯಿಯಾಗಿದ್ದ 28-ವರ್ಷ-ವಯಸ್ಸಿನ ಮಹಿಳೆಯನ್ನು ಮರಣಕೂಪಕ್ಕೆ ತಳ್ಳಿದ. ಅಂತಿಮವಾಗಿ 1991ರಲ್ಲಿ ಡೆನಿಸ್ 62-ವರ್ಷ-ವಯಸ್ಸಿನ ಮಹಿಳೆಯನ್ನು ನಿರ್ಜನ ಪ್ರದೇಶದಲ್ಲಿದ್ದ ಆಕೆಯ ಮನೆಯಲ್ಲಿ ಕೊಲ್ಲುವ ಮೂಲಕ ತನ್ನ ಹತ್ತನೇ ಬಲಿ ಪಡೆದ. ಸೋಜಿಗದ ಸಂಗತಿಯೆಂದರೆ ಡೆನ್ನಿಸ್ ನಡೆಸಿದ ಕೊಲೆಗಳ್ಯಾವೂ ಬೆಳಕಿಗೆ ಬಾರದೆ ಕೋಲ್ಡ್ ಸ್ಟೋರೇಜ್ ಸೇರಿದ್ದವು.

ಶವದ ಪೋಟೋಗಳನ್ನು ಪತ್ರಿಕೆಯ ವರದಿಗಾರನಿಗೆ ಕಳಿಸಿದ್ದ

2004 ರಲ್ಲಿ ಅಂದರೆ ಅವನ ಮೊದಲ ಕೊಲೆಯ 30 ನೇ ವಾರ್ಷಿಕೋತ್ಸವದಲ್ಲಿ ಸ್ಥಳೀಯ ಪತ್ರಿಕೆಯೊಂದು ಅವನಿಂದ ಕೊಲೆಯಾದವರ ಬಗ್ಗೆ ಲೇಖನವೊಂದನ್ನು ಪ್ರಕಟಿಸಿ ಅವರೆಲ್ಲ ಹಂತಕ ಈಗ ಸತ್ತಿರುತ್ತಾನೆ ಇಲ್ಲವೇ ಜೈಲಿನಲ್ಲಿ ಕೊಳೆಯುತ್ತಿರುತ್ತಾನೆ ಅಂತ ಹೇಳಿತ್ತು. ಆ ವರದಿಗೆ ಕೂಡಲೇ ಪ್ರತಿಕ್ರಿಯಿಸಿದ ಡೆನ್ನಿಸ್ ತನ್ನ 9ನೇ ಕೊಲೆಯ ಸಾಕ್ಷ್ಯಗಳನ್ನು-ಅವುಗಳಲ್ಲಿ ಪ್ರಮುಖವಾಗಿ ಅವನ ಆಹುತಿಯ ಡ್ರೈವಿಂಗ್ ಲೈಸೆನ್ಸ್ ಮತ್ತು ಅವಳ ಶವದ ಪೋಟೋಗಳನ್ನು ಪತ್ರಿಕೆಯ ವರದಿಗಾರನಿಗೆ ಕಳಿಸಿದ್ದ. ನಂತರದ ತಿಂಗಳುಗಳಲ್ಲಿ ಅವನು ಬೇರೆ ಬೇರೆ ಮಿಡಿಯಾ ಹೌಸ್ ಗಳಿಗೆ ಸ್ಮರಣಾರ್ಥವಾಗಿ ಇಟ್ಟುಕೊಂಡಿದ್ದ ತನ್ನಿಂದ ಕೊಲೆಯಾದವರ ವಸ್ತುಗಳ ಪೋಟೋಗಳ ಜೊತೆ ತಾನು ಹೇಗೆ ಕೊಲೆ ಮಾಡಿದೆ ಎಂಬ ವಿವರಣೆಯನ್ನೂ ಕಳಿಸಿದ್ದ.

ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ಮೂರನೇ ಪತಿಯಿಂದ ಸಿಗುವ ಆಸ್ತಿ ಎರಡನೇ ಪತಿಯ ಮಗಳಿಗೆ ಆಸ್ತಿ ಸಿಗುವಂತಾಗಲು ಆಕೆ ಮೊದಲ ಪತಿಯಿಂದ ಪಡೆದ ಮಗಳನ್ನು ಕೊಂದುಬಿಟ್ಟಳು!

ಜನವೆರಿ 2005 ರಲ್ಲಿ ಪೊಲೀಸರಿಗೆ ಒಂದು ಸಿರಿಯಲ್ ಬಾಕ್ಸ್ ಸಿಕ್ಕಿತ್ತು ಮತ್ತು ಅದರಲ್ಲಿ ಡೆನ್ನಿಸ್ ಬರೆದ ಒಂದು ನೋಟ್ ಇತ್ತು. ನೋಟ್ ನಲ್ಲಿ ಅವನು ತಾನು ಪೊಲೀಸರಿಗೆ ಕಳಿಸಬೇಕೆಂದಿದ್ದ ಫ್ಲಾಪಿ ಡಿಸ್ಕ್ ಹುಡುಕುವುದು ಸಾಧ್ಯವೇ ಎಂದು ಕೇಳಿದ್ದ.
ಪೊಲೀಸರು ಡೆನ್ನಿಸ್ ಕಳಿಸಿದ ನೋಟ್ ಗೆ ವರ್ಗೀಕೃತ ಜಾಹೀರಾತೊಂದರ ಮೂಲಕ ಪ್ರತಿಕ್ರಿಯಿಸಿ ಅದು ಸುರಕ್ಷಿತವಾಗಿರಬಹುದು ಅಂತ ಹೇಳಿದರು. ನಂತರ ಡೆನ್ನಿಸ್ ಪೊಲೀಸರಿಗೆ ಡಿಸ್ಕ್ ಕಳಿಸಿದ. ಅದು ಚರ್ಚೊಂದರಿಂದ ಬಂದಿದ್ದು ಅಂತ ಅರ್ಥಮಾಡಿಕೊಳ್ಳಲು ಪೊಲೀಸರಿಗೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ಡೆನ್ನಿಸ್ ಆ ಚರ್ಚ್ ನ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ!

ವೀರ್ಯ ಡಿ ಎನ್ ಎ ಜೊತೆ ಮ್ಯಾಚ್ ಆಗಿತ್ತು

ಅವನ ಮೊದಲ ಕೊಲೆ ಪ್ರಕರಣದಲ್ಲಿ ಪತ್ತೆಯಾಗಿದ್ದ ವೀರ್ಯದ ಕಲೆಗಳೊಂದಿಗೆ ಡೆನ್ನಿಸ್ ಡಿಎನ್ ಎ ಮ್ಯಾಚ್ ಅಗಿತ್ತು. ಫೆಬ್ರುವರಿ 2005 ರಲ್ಲಿ ಪೊಲೀಸರು ಅವನನ್ನು ಬಂಧಿಸಿದರು. ಕೋರ್ಟ್ ನಲ್ಲಿ ಅವನು ತಾನು ನಡೆಸಿದ ಎಲ್ಲ ಅಪರಾಧಗಳನ್ನು ಒಪ್ಪಿಕೊಳ್ಳುವಾಗ ಪೊಲೀಸರು ತನಗೆ ಹೇಳಿದ ಸುಳ್ಳುಗಳ ಬಗ್ಗೆ ಆಘಾತ ವ್ಯಕ್ತಪಡಿಸಿದ. ಅದೇ ವರ್ಷ ಜೂನ್ ನಲ್ಲಿ ತಾನು ದೋಷಿ ಅಂತ ಅವನು ಅಂಗೀಕರಿಸಿದ ಬಳಿಕ 10 ಕೊಲೆಗಳಿಗೆ-ಒಂದಾದ ನಂತರ ಒಂದರಂತೆ 10 ಜೀವಾವಧಿ ಶಿಕ್ಷೆಗಳನ್ನು ವಿಧಿಸಲಾಯಿತು-ಅಂದರೆ 160 ವರ್ಷಗಳ ಸೆರೆವಾಸ!

ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ