Murali Vijay: 80ರ ಮುದುಕಂತೆ ನೋಡ್ತಾರೆ: ವಿದೇಶಿ ತಂಡದತ್ತ ಮುರಳಿ ವಿಜಯ್

Murali Vijay: ಟೀಮ್ ಇಂಡಿಯಾ ಪರ 61 ಟೆಸ್ಟ್‌ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಮುರಳಿ ವಿಜಯ್ 40 ರ ಸರಾಸರಿಯಲ್ಲಿ 3880 ರನ್ ಗಳಿಸಿದ್ದರು. ಈ ವೇಳೆ 12 ಶತಕ ಹಾಗೂ 15 ಅರ್ಧಶತಕಗಳನ್ನು ಕೂಡ ಬಾರಿಸಿದ್ದರು.

Murali Vijay: 80ರ ಮುದುಕಂತೆ ನೋಡ್ತಾರೆ: ವಿದೇಶಿ ತಂಡದತ್ತ ಮುರಳಿ ವಿಜಯ್
Murali Vijay
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 14, 2023 | 4:32 PM

ಮುರಳಿ ವಿಜಯ್…ಒಂದು ಕಾಲದಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದ ಮುರಳಿ ವಿಜಯ್ (Murali Vijay) ಕೊನೆಯ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 2015 ರಲ್ಲಿ. ಅಂದರೆ 2008 ರಲ್ಲಿ ಪಾದರ್ಪಣೆ ಮಾಡಿದ್ದ ಆಟಗಾರ ಒಂದಷ್ಟು ವರ್ಷಗಳ ಕಾಲ ಧೋನಿ ಬಳಗದಲ್ಲಿ ಕಾಣಿಸಿಕೊಂಡಿದ್ದರು.  ಆದರೆ ಧೋನಿ ನಾಯಕತ್ವದ ಅಂತ್ಯದೊಂದಿಗೆ ಮುರಳಿ ವಿಜಯ್ ಯುಗಾಂತ್ಯವಾಯಿತು ಎಂದರೆ ತಪ್ಪಾಗಲಾರದು. ಏಕೆಂದರೆ 2015 ರ ಬಳಿಕ ತಮಿಳುನಾಡಿನ ಈ ಆರಂಭಿಕ ಆಟಗಾರನಿಗೆ ಟೀಮ್ ಇಂಡಿಯಾದಲ್ಲಿ ಅವಕಾಶವೇ ಸಿಕ್ಕಿರಲಿಲ್ಲ. ಇನ್ನು 2020 ರ ಐಪಿಎಲ್​ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಕೂಡ ಹೊರಬಿದ್ದಿದ್ದರು.

ಇದೀಗ ನಿವೃತ್ತಿ ಅಂಚಿನಲ್ಲಿರುವ ಮುರಳಿ ವಿಜಯ್ ಭಾರತೀಯ ಕ್ರಿಕೆಟ್​ನೊಂದಿಗೆ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಆ ಬಳಿಕ ವಿದೇಶಿ ತಂಡದ ಪರ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಮುರಳಿ ವಿಜಯ್, ಬಿಸಿಸಿಐ ಜೊತೆಗಿನ ನನ್ನೆಲ್ಲಾ ಸಂಬಂಧ ಮುಗಿದಿದೆ. ನಾನು ಇನ್ನೂ ಕೂಡ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ಬಯಸುತ್ತೇನೆ. ಹೀಗಾಗಿ ವಿದೇಶದಲ್ಲಿ ಆಡುವ ಅವಕಾಶವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟ್​ನಲ್ಲಿ 30 ವರ್ಷವಾದ ತಕ್ಷಣ ನಮ್ಮನ್ನು ದೂರ ಮಾಡಲಾಗುತ್ತದೆ. ಇಲ್ಲಿನ ಕ್ರಿಕೆಟಿಗರಿಗೆ ಮೂವತ್ತು ವರ್ಷವಾದರೆ ಬಿಸಿಸಿಐ 80 ವರ್ಷದವರಂತೆ ನೋಡುತ್ತದೆ. ನಾನು ಇನ್ನೂ ಕೂಡ ಅತ್ಯುತ್ತಮ ಪ್ರದರ್ಶನ ನೀಡಬಲ್ಲೆ. ಆದರೆ ದುರದೃಷ್ಟವಶಾತ್ ಇಲ್ಲಿ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಹೊರ ದೇಶಗಳಲ್ಲಿ ಅವಕಾಶಗಳನ್ನು ಎದುರು ನೋಡಬೇಕಿದೆ ಎಂದು  ತಿಳಿಸಿದ್ದಾರೆ.

ಇದನ್ನೂ ಓದಿ
Image
IPL 2023: ಐಪಿಎಲ್​ನಿಂದ ಹೊರಬಿದ್ದ ರಿಷಭ್ ಪಂತ್​ಗೆ ಸಿಗಲಿದೆ 21 ಕೋಟಿ ರೂ.
Image
Suryakumar Yadav: ರಾಹುಲ್ ದಾಖಲೆ ಉಡೀಸ್: ಹೊಸ ವಿಶ್ವ ದಾಖಲೆ ನಿರ್ಮಿಸಿದ ಸೂರ್ಯ
Image
Suryakumar Yadav: ತೂಫಾನ್ ಸೆಂಚುರಿ ಸಿಡಿಸಿ ಹೊಸ ದಾಖಲೆ ಬರೆದ ಸೂರ್ಯಕುಮಾರ್ ಯಾದವ್
Image
Virat Kohli – Rohit Sharma: ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ಕೊಹ್ಲಿ-ರೋಹಿತ್​ಗಿಲ್ಲ ಚಾನ್ಸ್​?

ಇದೇ ವೇಳೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿರುವ ಬಗ್ಗೆ ಮಾತನಾಡಿರುವ ಮುರಳಿ ವಿಜಯ್, ಭಾರತ ತಂಡದಲ್ಲಿ ನನಗೆ ಅವಕಾಶ ಲಭಿಸಿದೆ ನಿಜ. ಆದರೆ ವೀರೇಂದ್ರ ಸೆಹ್ವಾಗ್ ಅವರಂತೆ ನನಗೆ ಬೆಂಬಲ ಸಿಕ್ಕಿದ್ದರೆ, ಬಹುಶಃ ನನ್ನ ಪ್ರದರ್ಶನ ಕೂಡ ವಿಭಿನ್ನವಾಗಿರುತ್ತಿತ್ತು. ಈಗ ಅದರ ಬಗ್ಗೆ ಯೋಚಿಸುವುದರಲ್ಲಿ ಅರ್ಥವಿಲ್ಲ.  ನಾನು ಸದ್ಯ ವಿದೇಶದಲ್ಲಿ ಕ್ರಿಕೆಟ್ ಆಡುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದರು. ಈ ಮೂಲಕ ಭಾರತೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿ ವಿದೇಶದತ್ತ ಮುಖ ಮಾಡಲಿರುವುದಾಗಿ ಮುರಳಿ ವಿಜಯ್ ತಿಳಿಸಿದ್ದಾರೆ.

ಟೀಮ್ ಇಂಡಿಯಾ ಪರ 61 ಟೆಸ್ಟ್‌ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಮುರಳಿ ವಿಜಯ್ 40 ರ ಸರಾಸರಿಯಲ್ಲಿ 3880 ರನ್ ಗಳಿಸಿದ್ದರು. ಈ ವೇಳೆ 12 ಶತಕ ಹಾಗೂ 15 ಅರ್ಧಶತಕಗಳನ್ನು ಕೂಡ ಬಾರಿಸಿದ್ದರು. ಅಷ್ಟೇ ಅಲ್ಲದೆ ಭಾರತದ ಪರ 17 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿರುವ ಮುರಳಿ ವಿಜಯ್ ಕ್ರಮವಾಗಿ 339 ರನ್ ಹಾಗೂ 169 ರನ್ ಕಲೆಹಾಕಿದ್ದರು.

ಇನ್ನು 2015 ರಲ್ಲಿ ಕೊನೆಯ ಬಾರಿಗೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ ಮುರಳಿ ವಿಜಯ್​ಗೆ ಮತ್ತೆ ಅವಕಾಶ ಸಿಕ್ಕಿರಲಿಲ್ಲ. ಇದಾಗ್ಯೂ 2020 ರ ಸೈಯ್ಯರ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತಮಿಳುನಾಡು ಪರ ಕಣಕ್ಕಿಳಿದಿದ್ದರು. ಕಳೆದ ವರ್ಷದ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲೂ ಅವಕಾಶ ಪಡೆದಿದ್ದರು.

ಇದನ್ನೂ ಓದಿ: ICC T20 Rankings: ಐಸಿಸಿ ರ‍್ಯಾಂಕಿಂಗ್​ನಲ್ಲೂ ಸರ್ವಶ್ರೇಷ್ಠ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

ಸದ್ಯ 38ನೇ ವಯಸ್ಸಿನಲ್ಲಿ ಭಾರತೀಯ ಕ್ರಿಕೆಟ್​ಗೆ ಗುಡ್ ಬೈ ಹೇಳುವ ಮೂಲಕ ಮುರಳಿ ವಿಜಯ್ ವಿದೇಶದತ್ತ ಮುಖ ಮಾಡಲು ಮುಂದಾಗಿದ್ದಾರೆ. ಆದರೆ ಅವರು ಬೇರೊಂದು ದೇಶವನ್ನು ಪ್ರತಿನಿಧಿಸಲಿದ್ದಾರಾ ಅಥವಾ ವಿದೇಶಿ ಲೀಗ್​ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಶ್ರೀಘ್ರದಲ್ಲೇ ಬಹಿರಂಗವಾಗಲಿದೆ.

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್