IND vs AUS: ಪೃಥ್ವಿ ಶಾಗೆ ಸಿಕ್ಕ ಅವಕಾಶ ದೇಶಿ ಕ್ರಿಕೆಟ್​ನ ರನ್​ ಮಷಿನ್ ಸರ್ಫರಾಜ್ ಖಾನ್​ಗೆ ಯಾಕಿಲ್ಲ?

IND vs AUS: ಇದುವರೆಗೆ ಸರ್ಫರಾಜ್ ಅವರ ಪ್ರಥಮ ದರ್ಜೆ ಸರಾಸರಿ ನೋಡಿದರೆ 80.47 ಆಗಿದೆ. ಇಡೀ ಕ್ರಿಕೆಟ್ ಜಗತ್ತಿನಲ್ಲೇ ಅತ್ಯುತ್ತಮ ಪ್ರಥಮ ದರ್ಜೆ ಸರಾಸರಿಯಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ.

IND vs AUS: ಪೃಥ್ವಿ ಶಾಗೆ ಸಿಕ್ಕ ಅವಕಾಶ ದೇಶಿ ಕ್ರಿಕೆಟ್​ನ ರನ್​ ಮಷಿನ್ ಸರ್ಫರಾಜ್ ಖಾನ್​ಗೆ ಯಾಕಿಲ್ಲ?
ಸರ್ಫರಾಜ್ ಖಾನ್
Follow us
TV9 Web
| Updated By: ಪೃಥ್ವಿಶಂಕರ

Updated on:Jan 14, 2023 | 1:42 PM

ಆಸ್ಟ್ರೇಲಿಯಾ ವಿರುದ್ಧ (India Vs Australia) ನಡೆಯಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಹಿರಿಯ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಕೆಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಟಿ20 ಸ್ಪೆಷಲಿಸ್ಟ್​ಗಳಾದ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಇಶಾನ್ ಕಿಶನ್ (Ishan Kishan) ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ದೇಶೀ ಕ್ರಿಕೆಟ್​ನಲ್ಲಿ ನಿರಂತರವಾಗಿ ರನ್ ಗಳಿಸಿದ ನಂತರವೂ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ಆಟಗಾರರಲ್ಲಿ ಸರ್ಫರಾಜ್ ಖಾನ್ (Sarfaraz Khan) ಹೆಸರು ಮೊದಲನೆಯದಾಗಿ ಕಂಡುಬರುತ್ತಿದೆ. ವಾಸ್ತವವಾಗಿ ಎರಡು-ಮೂರು ವರ್ಷಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ರನ್ ಗುಡ್ಡೆ ಹಾಕುವುದರೊಂದಿಗೆ ಸರ್ಫರಾಜ್ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಟೀಂ ಇಂಡಿಯಾದ ಬಾಗಿಲು ತಟ್ಟುತ್ತಿದ್ದಾರೆ. ಆದರೆ ಇನ್ನೂ ಆಯ್ಕೆಗಾರರ ಗಮನ ಅವರ ಮೇಲೆ ಹೋಗಿಲ್ಲ.

3 ವರ್ಷಗಳಿಂದ ಅದ್ಭುತ ಪ್ರದರ್ಶನ

ಸರ್ಫರಾಜ್ ಒಂದು ಅಥವಾ ಎರಡು ವರ್ಷಗಳಿಂದ ರನ್ ಗಳಿಸುತ್ತಿಲ್ಲ. ಬದಲಿಗೆ ಅವರು ಸತತ ಮೂರು ವರ್ಷಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ. 2019-20 ರ ರಣಜಿ ಟ್ರೋಫಿ ಸೀಸನ್​ನಲ್ಲಿ ಈ ಬ್ಯಾಟ್ಸ್‌ಮನ್ ಆರು ಪಂದ್ಯಗಳಲ್ಲಿ 154.66 ಸರಾಸರಿಯಲ್ಲಿ 928 ರನ್ ಗಳಿಸಿದರು. ಮೂರು ಶತಕಗಳು ಮತ್ತು ಎರಡು ಅರ್ಧ ಶತಕಗಳು ಅವರ ಬ್ಯಾಟ್‌ನಿಂದ ಹೊರಬಂದವು. ಬಳಿಕ  ನಡೆದ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಎನಿಸಿಕೊಂಡಿದ್ದ ಸರ್ಫರಾಜ್, 2021-22ರ ಸೀಸನ್​ನ ಆರು ಪಂದ್ಯಗಳಲ್ಲಿ 122.75 ಸರಾಸರಿಯಲ್ಲಿ 982 ರನ್ ಗಳಿಸಿದರು. ಇದರಲ್ಲಿ ನಾಲ್ಕು ಶತಕಗಳು ಮತ್ತು ಎರಡು ಅರ್ಧ ಶತಕಗಳು ಸೇರಿದ್ದವು. ಅವರ ಪ್ರದರ್ಶನದ ಆಧಾರದ ಮೇಲೆ ಮುಂಬೈ ಫೈನಲ್‌ಗೆ ಪ್ರವೇಶಿಸಿತ್ತಾದರೂ ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ.

IND vs AUS: ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ತಂಡದಲ್ಲಿ ಸೂರ್ಯ- ಕಿಶನ್​ಗೆ ಸ್ಥಾನ

ಈ ಬಾರಿಯ ರಣಜಿಯಲ್ಲಿಯೂ ಅದ್ಭುತ ಬ್ಯಾಟಿಂಗ್ ಮಾಡಿರುವ ಸರ್ಫರಾಜ್, ಹೈದರಾಬಾದ್ ವಿರುದ್ಧ ಅಜೇಯ 126 ರನ್‌ ಬಾರಿಸಿದ್ದರು. ಅಲ್ಲದೆ ಸೌರಾಷ್ಟ್ರ ವಿರುದ್ಧ 75 ರನ್‌ಗಳ ಇನ್ನಿಂಗ್ಸ್ ಕುಡ ಆಡಿದರು. ನಂತರ ತಮಿಳುನಾಡು ವಿರುದ್ಧದ ಪಂದ್ಯದಲ್ಲೂ ಮತ್ತೊಮ್ಮೆ ತಮ್ಮ ಬ್ಯಾಟ್‌ನ ಶಕ್ತಿ ಪ್ರದರ್ಶಿಸಿ 162 ರನ್ ಚಚ್ಚಿದರು.

ಡಾನ್ ಬ್ರಾಡ್ಮನ್​ಗೆ ಹೋಲಿಕೆ

ಆಸ್ಟ್ರೇಲಿಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಸರ್ ಡಾನ್ ಬ್ರಾಡ್‌ಮನ್ ಜೊತೆಗೆ ಸರ್ಫರಾಜ್ ಖಾನ್ ಅವರ ಆಟವನ್ನು ಹೋಲಿಸಲಾಗುತ್ತಿದೆ. ಇದುವರೆಗೆ ಸರ್ಫರಾಜ್ ಅವರ ಪ್ರಥಮ ದರ್ಜೆ ಸರಾಸರಿ ನೋಡಿದರೆ 80.47 ಆಗಿದೆ. ಇಡೀ ಕ್ರಿಕೆಟ್ ಜಗತ್ತಿನಲ್ಲೇ ಅತ್ಯುತ್ತಮ ಪ್ರಥಮ ದರ್ಜೆ ಸರಾಸರಿಯಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಬ್ರಾಡ್ಮನ್ 95.14 ರ ಸರಾಸರಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಸರ್ಫರಾಜ್ 36 ಪ್ರಥಮ ದರ್ಜೆ ಪಂದ್ಯಗಳಲ್ಲಿ 3380 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್‌ನಿಂದ 12 ಶತಕ ಮತ್ತು ಒಂಬತ್ತು ಅರ್ಧಶತಕಗಳು ಹೊರಹೊಮ್ಮಿವೆ. ಆದರೆ ಆಯ್ಕೆಗಾರರು ಅವರ ಪ್ರದರ್ಶನವನ್ನು ಕಡೆಗಣಿಸುತ್ತಿದ್ದಾರೆ ಎಂಬ ಕೂಗು ಕಳೆದ ವರ್ಷದಿಂದಲೂ ಕೇಳಿಬರುತ್ತಿದೆ. ಹೀಗಾಗಿ ಅದ್ಭುತ ಪ್ರತಿಭೆಗೆ ಟೀಂ ಇಂಡಿಯಾದ ಕದ ಯಾವಾಗ ತೆರೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:42 pm, Sat, 14 January 23

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ