ಬೆಂಗಳೂರಿನಲ್ಲಿ ಮತ್ತೆ ಖಾಕಿ ಗನ್ ಸೌಂಡ್: ಸ್ಲಂ ಭರತ್ ಸಹಚರನ ಕಾಲಿಗೆ ಗುಂಡೇಟು

ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್​ನಲ್ಲಿ ಸ್ಲಂ ಭರತನ ಸಹಚರನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. 15ಕ್ಕೂ ಹೆಚ್ಚು ಕೇಸ್‌ಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಸಿದ್ದರಾಜು ಅಲಿಯಾಸ್ ಸಿದ್ದ ಮೇಲೆ ಬ್ಯಾಡರಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ರಾಜೀವ್‌ ಫೈರಿಂಗ್ ನಡೆಸಿದ್ದಾರೆ. ಆರೋಪಿ ಬಿಇಎಲ್ ಲೇಔಟ್‌ನಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆರೋಪಿಯನ್ನು ಬಂಧಿಸಲು ಬ್ಯಾಡರಹಳ್ಳಿ ಪೊಲೀಸರು ತೆರಳಿದ್ದರು. ಶರಣಾಗುವಂತೆ ಆರೋಪಿ ಸಿದ್ದರಾಜುಗೆ ಪೊಲೀಸರ ಸೂಚಿಸಿದ್ದಾರೆ. ಆದ್ರೆ ಆರೋಪಿ ಸಿದ್ದರಾಜು ಮುಖ್ಯಪೇದೆ ಗುರುದೇವ್ ಮೇಲೆ ಮಚ್ಚಿನಿಂದ […]

ಬೆಂಗಳೂರಿನಲ್ಲಿ ಮತ್ತೆ ಖಾಕಿ ಗನ್ ಸೌಂಡ್: ಸ್ಲಂ ಭರತ್ ಸಹಚರನ ಕಾಲಿಗೆ ಗುಂಡೇಟು
ಸಾಧು ಶ್ರೀನಾಥ್​

Updated on: Mar 11, 2020 | 8:05 AM

ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್​ನಲ್ಲಿ ಸ್ಲಂ ಭರತನ ಸಹಚರನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. 15ಕ್ಕೂ ಹೆಚ್ಚು ಕೇಸ್‌ಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಸಿದ್ದರಾಜು ಅಲಿಯಾಸ್ ಸಿದ್ದ ಮೇಲೆ ಬ್ಯಾಡರಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ರಾಜೀವ್‌ ಫೈರಿಂಗ್ ನಡೆಸಿದ್ದಾರೆ.

ಆರೋಪಿ ಬಿಇಎಲ್ ಲೇಔಟ್‌ನಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆರೋಪಿಯನ್ನು ಬಂಧಿಸಲು ಬ್ಯಾಡರಹಳ್ಳಿ ಪೊಲೀಸರು ತೆರಳಿದ್ದರು. ಶರಣಾಗುವಂತೆ ಆರೋಪಿ ಸಿದ್ದರಾಜುಗೆ ಪೊಲೀಸರ ಸೂಚಿಸಿದ್ದಾರೆ. ಆದ್ರೆ ಆರೋಪಿ ಸಿದ್ದರಾಜು ಮುಖ್ಯಪೇದೆ ಗುರುದೇವ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.

ಈ ವೇಳೆ ಶರಣಾಗುವಂತೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪೊಲೀಸರ ಮಾತೂ ಲೆಕ್ಕಿಸದೆ ಪರಾರಿಯಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಆರೋಪಿ ಬಲಗಾಲಿಗೆ ಇನ್ಸ್‌ಪೆಕ್ಟರ್ ರಾಜೀವ್‌ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಾಳು ಮುಖ್ಯಪೇದೆ ಗುರುದೇವ್ ಹಾಗೂ ರೌಡಿಶೀಟರ್ ಸಿದ್ದರಾಜುಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us