ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು
ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸತ್ಯ, ರಾಘವೇಂದ್ರ, ಜಯಂತ್, ರಾಜೇಶ್ ಬಂಧಿತ ಆರೋಪಿಗಳು.
ಬೆಂಗಳೂರು: ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸತ್ಯ, ರಾಘವೇಂದ್ರ, ಜಯಂತ್, ರಾಜೇಶ್ ಬಂಧಿತ ಆರೋಪಿಗಳು. ಆರೋಪಿಗಳು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರಕಾಸ್ತ್ರಗಳ ಸಮೇತ ದರೋಡೆಗೆ ಸಂಚು ರೂಪಿಸಿದ್ದರು. ಎ.ಪಿ ನಗರ, ಕಾಮಾಕ್ಷಿ ಪಾಳ್ಯ, ಪುಟ್ಟೇನಹಳ್ಳಿ ರೌಡಿಶೀಟರ್ಗಳು ಮತ್ತು ಸಹಚರರಿಂದ ದರೋಡೆಗೆ ಸಂಚು ರೂಪಿಸಲಾಗಿತ್ತು.
ಪಕ್ಕಾ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ರೌಡಿಶೀಟರ್ಗಳನ್ನು ಮತ್ತು ಅವರ ಸಹಚರರನ್ನು ಬಂಧಸಿದ್ದಾರೆ. ದಾಳಿ ವೇಳೆ ಓರ್ವ ರೌಡಿಶೀಟರ್ ಶ್ರೀಧರ್ ಅಲಿಯಾಸ್ ಕರಿಯ ಪರಾರಿಯಾಗಿದ್ದಾನೆ. ಸದ್ಯ ಅರೆಸ್ಟ್ ಮಾಡಿರೋ ಆರೋಪಿಗಳಿಂದ ಪೊಲೀಸರು ಮಾರಕಾಸ್ತ್ರಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ತಪ್ಪಿಸಿಕೊಂಡಿರೋ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮರಳು ದಂಧೆಕೋರರಿಂದ ಸಿಸಿಟಿವಿ ಧ್ವಂಸ ಪ್ರಕರಣ; ನಾಲ್ವರ ಬಂಧನ
ದಕ್ಷಿಣಕನ್ನಡ: ಅಕ್ರಮ ಮರಳು ದಂಧೆಕೋರರಿಂದ ಸಿಸಿಟಿವಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇಕ್ಬಾಲ್, ಅಖಿಲ್, ಪ್ರಜ್ವಲ್, ಸೂರಜ್ ಬಂಧಿತ ಆರೋಪಿಗಳು. ಸಿಸಿಟಿವಿ ಧ್ವಂಸಕ್ಕೆ ಆರೋಪಿಗಳು ಬಳಸಿದ್ದ ಟಿಪ್ಪರ್ ವಾಹನ ಜಪ್ತಿ ಮಾಡಲಾಗಿದೆ.
ಉಳ್ಳಾಲದ ಸೋಮೇಶ್ವರ ಅರಬ್ಬಿ ಸಮುದ್ರದ ಬಳಿ ಅಕ್ರಮ ಮರಳುಗಾರಿಕೆಯನ್ನು ತಡೆಯಲು ದಕ್ಷಿಣಕನ್ನಡ ಜಿಲ್ಲಾಡಳಿತ ಸಮುದ್ರದ ಬಳಿ ಸಿಸಿಟಿವಿ ಅಳವಡಿಸಿತ್ತು. ಆದರೆ ಮರಳು ದಂಧೆಕೋರರು ಮುಸುಕು ಹಾಕಿಕೊಂಡು ಸಿಸಿಟಿವಿಯನ್ನು ಕಿತ್ತುಹಾಕಲು ಯತ್ನಿಸಿದ್ದರು. ಸಾಧ್ಯವಾಗದಿದ್ದಕ್ಕೆ ಟಿಪ್ಪರ್ ವಾಹನದಿಂದ ಸಿಸಿಟಿವಿ ಜಖಂಗೊಳಿಸಿದ್ದರು. ಅಧಿಕಾರಿಗಳು ನೀಡಿದ್ದ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.
ಉದ್ಯೋಗ ಕೊಡಿಸುವುದಾಗಿ ಯುವಕರಿಗೆ ವಂಚಸಿದ ಆರೋಪ; ಖಾಸಗಿ ಸಂಸ್ಥೆಗಳ ಮೇಲೆ ಪೊಲೀಸರ ದಾಳಿ
ಕೋಲಾರ: ಉದ್ಯೋಗ ಕೊಡಿಸುವುದಾಗಿ ಯುವಕರಿಗೆ ವಂಚಸಿದ ಆರೋಪದಡಿ ಕೋಲಾರದಲ್ಲಿ ಖಾಸಗಿ ಸಂಸ್ಥೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಖುಷಿ ಸಂಪದ, ಮಾರ್ಡನ್ ಸೋಲ್ ಪ್ರೈ.ಲಿ. ಕಚೇರಿ ಮೇಲೆ ಡಿವೈಎಸ್ಪಿ ಮುರಳೀಧರನ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
3 ತಂಡಗಳಾಗಿ ಪೊಲೀಸರು ನಗರದ ಮಹಾಲಕ್ಷ್ಮೀ ಬಡಾವಣೆ, ಚೌಡೇಶ್ವರಿ ನಗರ, ಇಟಿಸಿಎಂ ಸರ್ಕಲ್ ಬಳಿ ಇರುವ ಖುಷಿ ಸಂಪದ, ಮಾಡ್ರನ್ ಸೋಲ್ ಪ್ರೈವೇಟ್ ಲಿಮಿಟೆಡ್ ಕಛೇರಿಗಳ ಮೇಲೆ ದಾಳಿ ಮಾಡಿದ್ದಾರೆ.
ಮತ್ತಷ್ಟು ಅಪಾರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:59 pm, Mon, 12 September 22