ಛತ್ತೀಸ್‌ಗಢ: ಬಿಜೆಪಿ (BJP) ಮುಖಂಡನನ್ನು ಮಾವೋವಾದಿಗಳು ಕುಟುಂಬಸ್ಥರ ಎದುರೇ ಶಿರಚ್ಛೇದನ ಮಾಡುವ ಮೂಲಕ ರಕ್ಕಸ ಕೃತ್ಯವೆಸಗಿರುವಂತಹ ಘಟನೆ ಇಂದು (ಫೆ. 05) ಛತ್ತೀಸ್‌ಗಢನ (Chhattisgarh) ಬಿಜಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಬಿಜಾಪುರ ಜಿಲ್ಲೆಯ ಉಸುರ್ ಮಂಡಲದ ಅಧ್ಯಕ್ಷರಾಗಿ ಕಳೆದ 15 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ನೀಲಕಂಠ ಕಕ್ಕೆಮ್ ಮೃತ ಬಿಜೆಪಿ ಮುಖಂಡ. ಅತ್ತಿಗೆ ಮದುವೆಯ ಸಿದ್ಧತೆಗಾಗಿ ತನ್ನ ಸ್ವಗ್ರಾಮಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದ್ದು, ಕುಟುಂಬದವರ ಎದುರೇ ಮಾವೋವಾದಿಗಳು ಈ ಕೃತ್ಯ ಎಸಗಿದ್ದಾರೆ. ಈ ಘಟನೆ ಬಳಿಕ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ನೀಲಕಂಠ ಕಕ್ಕೆಮ್ ಅವರ ಸಾವು ಬಿಜೆಪಿಗೆ ಆಘಾತ ಉಂಟು ಮಾಡಿದೆ. ಕಳೆದ 30 ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಬಿಜಾಪುರ ಪ್ರದೇಶದಲ್ಲಿ ಇವರಿಗೆ ಹೆಚ್ಚಿನ ಪ್ರಾಬಲ್ಯವಿತ್ತು. ಅವರು ಮಾವೋವಾದಿಗಳಿಂದ ಅತಿ ಹೆಚ್ಚು ಬಾಧಿತ ಗ್ರಾಮವಾದ ಪೆಂಕ್ರಾಮ್‌ಗೆ ಹೋಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಅಧಿಕಾರಿಗಳು ಯಾವುದೇ ಪ್ರತ್ರಿಯೆ ನೀಡಿಲ್ಲ. ಅದೇ ರೀತಿಯಾಗಿ ಈ ಹತ್ಯೆಯ ಹೊಣೆಯನ್ನು ಮಾವೋವಾದಿಗಳು ಕೂಡ ತೆಗೆದುಕೊಳ್ಳುತ್ತಿಲ್ಲ.
ಇದನ್ನೂ ಓದಿ: ಗಾಜಿಯಾಬಾದ್‌ನ ಎಲಿವೇಟೆಡ್ ರಸ್ತೆಯಲ್ಲಿ ಮದ್ಯ ಸೇವಿಸಿ ಯುವಕರ ಡ್ಯಾನ್ಸ್; ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೊ ವೈರಲ್
Chhattisgarh | BJP’s Usur mandal president in Bijapur Neelkanth Kakekam killed by Naxals under Awapalli PS, Bijapur district. He was stabbed by Naxals outside his residence, confirmed ASP Bijapur
— ANI MP/CG/Rajasthan (@ANI_MP_CG_RJ) February 5, 2023
ಛತ್ತೀಸ್‌ಗಢದಲ್ಲಿ ಕಂಬಿಂಗ್‌ನಲ್ಲಿ 7 ಮಾವೋವಾದಿಗಳನ್ನು ಬಂಧಿಸಲಾಗಿದೆ. ಸಿಆರ್‌ಪಿಎಫ್ ಮತ್ತು ಪೊಲೀಸರು ಮಾವೋವಾದಿಗಳ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಲ್ಲಿ ಫಾರ್ವರ್ಡ್ ಆಪರೇಟಿಂಗ್ ಬೇಸ್ ಸ್ಥಾಪನೆಯಾದ ನಂತರ ಮಾವೋವಾದಿಗಳ ಚಟುವಟಿಕೆಗಳು ಕಡಿಯಾಗಿದ್ದವು. ಮಾವೋವಾದಿಗಳಿರುವ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಹೆಚ್ಚಿನ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿವೆ. ಮಾವೋವಾದಿಗಳು ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಮರುಪಡೆಯುವ ಉದ್ದೇಶದಿಂದ ಶೋಧನಾ ವಿನಾಶ ಕಾರ್ಯಾಚರಣೆಗಳ ಜೊತೆಗೆ ಪ್ರದೇಶ ಪ್ರಾಬಲ್ಯ ಕಾರ್ಯಾಚರಣೆಗಳನ್ನು ಹೆಚ್ಚಾಗಿ ಇಲ್ಲಿ ನಡೆಸಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.