ಚೀನಾದ ಯಾಂಗ್ ಶಿನ್ಹಾಯ್​ನನ್ನು ಬಂಧಿಸಿದ್ದು 5 ಕೊಲೆ, 2 ಅತ್ಯಾಚಾರದ ಪ್ರಕರಣಗಳಲ್ಲಿ; ಅವನು ತಪ್ಪೊಪ್ಪಿಕೊಂಡಿದ್ದು 67 ಕೊಲೆ ಮತ್ತು 23 ಅತ್ಯಾಚಾರದ ಅಪರಾಧಗಳು!

ಕೆಲವರು ಹೇಳುವ ಪ್ರಕಾರ ಅವನು ಪ್ರೀತಿಸುತ್ತಿದ್ದ ಹುಡುಗಿ ತನ್ನ ವೃತ್ತಿಬದುಕಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಶಿನ್ಹಾಯ್ ನನ್ನು ಬಿಟ್ಟುಹೋದ ಕಾರಣ ಅವನು ಖಿನ್ನನಾಗಿದ್ದ. ತನ್ನ ಅಪರಾಧಿ ಬದುಕಿನಲ್ಲಿ ಅವನು ಮಹಿಳೆಯರಂತೆ ಪುರಷರನ್ನು ಟಾರ್ಗೆಟ್ ಮಾಡುತ್ತಿದ್ದ.

ಚೀನಾದ ಯಾಂಗ್ ಶಿನ್ಹಾಯ್​ನನ್ನು ಬಂಧಿಸಿದ್ದು 5 ಕೊಲೆ, 2 ಅತ್ಯಾಚಾರದ ಪ್ರಕರಣಗಳಲ್ಲಿ; ಅವನು ತಪ್ಪೊಪ್ಪಿಕೊಂಡಿದ್ದು 67 ಕೊಲೆ ಮತ್ತು 23 ಅತ್ಯಾಚಾರದ ಅಪರಾಧಗಳು!
ಯಾಂಗ್ ಶಿನ್ಹಾಯ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 06, 2023 | 8:09 AM

ಯಾಂಗ್ ಶಿನ್ಹಾಯ್ (Yang Xinhai ) ಹೆಸರನ್ನು ನೀವು ಕೇಳಿಸಿಕೊಂಡಿರಬಹುದು. ಚೀನಾದ ಕುಖ್ಯಾತ ಅಪರಾಧಿಗಳನ್ನು ಪಟ್ಟಿ ಮಾಡಿದರೆ ಅವನ ಹೆಸರು ಉಳಿದವರಿಗಿಂತ ಮೇಲಿರುತ್ತದೆ. 67 ಕೊಲೆ ಮತ್ತು 23 ಅತ್ಯಾಚಾರಗಳನ್ನೆಸಗಿದ ಅಪರಾಧಗಳಲ್ಲಿ ಅವನಿಗೆ ಮರಣದಂಡನೆ (death sentence) ಶಿಕ್ಷೆಯಾಯಿತು. 1999-2003 ನಡುವಿನ ಕೇವಲ 4 ವರ್ಷಗಳ ಅವಧಿಯಲ್ಲಿ ಅವನು ಅಷ್ಟೆಲ್ಲ ಪಾತಕಗಳನ್ನು ಮಾಡಿದ್ದ. ಒಂದು ಬಡ ಕುಟುಂಬದವನಾಗಿದ್ದ ಶಿನ್ಹಾಯ್ ತನ್ನ ತಂದೆ ತಾಯಿಗಳ 4 ಮಕ್ಕಳಲ್ಲಿ ಎಲ್ಲರಿಗಿಂತ ಕಿರಿಯವನಾಗಿದ್ದ. ಸದಾ ಅಂತರ್ಮುಖಿಯಾಗಿರುತ್ತಿದ್ದ (introvert) ಅವನು ಸ್ನೇಹಿತರನ್ನು ಮಾಡಿಕೊಂಡಿರದ ಕಾರಣ ಅವನ ಬಾಲ್ಯದ ಬಗ್ಗೆ ವಿವರಗಳನ್ನು ಕಲೆಹಾಕುವುದು ಪೊಲೀಸರಿಗೆ ಸಾಧ್ಯವಾಗದೆ ಹೋಗಿತ್ತು. ಕುಟುಂಬದ ಸದಸ್ಯರಿಂದ ಒಂದಷ್ಟು ಮಾಹಿತಿ ಅವರಿಗೆ ಸಿಕ್ಕಿತ್ತು. ಓದಿನಲ್ಲಿ ಆಪಾರ ಬುದ್ಧಿವಂತನಾಗಿದ್ದ ಶಿನ್ಹಾಯ್ ತನ್ನ 17 ನೇ ವಯಸ್ಸಿನಲ್ಲಿ ಓದಿಗೆ ತಿಲಾಂಜಲಿ ನೀಡಿ ಮನೆಯಿಂದಲೂ ಹೊರಬಿದ್ದು ಕೂಲಿ ಕೆಲಸ ಮಾಡುತ್ತಾ ಊರೂರು ಅಲೆಯತೊಡಗಿದ್ದ.

ಹಾಗೆ ನೋಡಿದರೆ, 1999ರಲ್ಲಿ ಅವನು ಹತ್ಯೆಗಳನ್ನು ಮಾಡಲಾರಂಭಿಸುವ ಮೊದಲೇ ಬಂಧನಕ್ಕೊಳಗಾಗಿದ್ದ. ಲೇಬರ್ ಕ್ಯಾಂಪ್ ಗಳಲ್ಲಿ ನಡೆಸುತ್ತಿದ್ದ ಸಣ್ಣಪುಟ್ಟ ಕಳ್ಳತನಗಳಿಗೆ ಅವನು ಆಗಾಗ ಜೈಲಿಗೆ ಹೋಗಿಬರುತ್ತಿದ್ದ. ಹಾಗಂತ ಕ್ಯಾಂಪ್ ಗಳಲ್ಲಿರುತ್ತಿದ್ದ ಬೇರೆ ಕೂಲಿ ಕಾರ್ಮಿಕರು ಅವನ ಬಗ್ಗೆ ದ್ವೇಷವೇನೂ ಇಟ್ಟುಕೊಂಡಿರಲಿಲ್ಲ. ಕಳ್ಳತನ ಮಾಡುತ್ತಾನೆ ಅನ್ನೋದು ಬಿಟ್ಟರೆ ಶಿನ್ಹಾಯ್ ಒಳ್ಳೆಯ ವ್ಯಕ್ತಿಯಾಗಿದ್ದ ಎಂದು ಅವರು ಹೇಳಿದ್ದರು. ಆದರೆ ಮುಂದೊಂದು ದಿನ ಅವನು ‘ರಾಕ್ಷಸ ಸರಣಿ ಹಂತಕ’ ಮತ್ತು ಅತ್ಯಾಚಾರಿ ಆಗುತ್ತಾನೆ ಅಂತ ಯಾರೂ ಅಂದುಕೊಂಡಿರಲಿಲ್ಲ.

ಆ ಭಯಾನಕ ರಾತ್ರಿ!

ಸೆಪ್ಟೆಂಬರ್ 19, 2003 ರಂದು ನೈಟ್ ಪೆಟ್ರೋಲ್ ನಲ್ಲಿದ್ದ ಪೊಲೀಸರಿಗೆ ಇಬ್ಬರು ಯುವತಿಯರ ಶವಗಳು ಸಿಕ್ಕವು. ಅವರಿಬ್ಬರನ್ನು ದೊಣ್ಣೆಗಳಿಂದ ಹೊಡೆದು ಸಾಯಿಸುವ ಮೊದಲು ಅವರ ಮೇಲೆ ಭೀಕರವಾಗಿ ಲೈಂಗಿಕ ಅತ್ಯಾಚಾರ ನಡೆಸಲಾಗಿತ್ತು ಎಂಬ ಅಂಶ ಮರಣೋತ್ತರ ಪರೀಕ್ಷೆಯ ಬಳಿಕ ಗೊತ್ತಾಯಿತು. ನಂತರದ ವಾರಗಳಲ್ಲಿ 2-3 ಕೊಲೆಗಳು ನಡೆದವು ಮತ್ತು ಪೊಲೀಸರಿಗೆ ಲಭ್ಯವಾದ ಏಕೈಕ ಸುಳಿವು ಅಂದರೆ ಹಂತಕ ಬಿಟ್ಟುಹೋಗಿದ್ದ ಫಿಂಗರ್ ಪ್ರಿಂಟ್. ಪೊಲೀಸರ ಅದೃಷ್ಟಕ್ಕೆ ಬೆರಳಚ್ಚು ಸ್ಪಷ್ಟ ಮತ್ತು ನಿಚ್ಚಳವಾಗಿತ್ತು. ಅದೇ ಅವರಿಗೆ ಶಂಕಿತ ಹಂತಕ ಶಿನ್ಹಾಯ್ ಎಂಬ ನಿರ್ಣಯಕ್ಕೆ ಬರಲು ನೆರವಾಯಿತು.

ಐದು ಕೊಲೆ ಮತ್ತು 2 ಅತ್ಯಾಚಾರಗಳ ಪ್ರಕರಣಗಳಲ್ಲಿ ಶಿನ್ಹಾಯ್ ನನ್ನು ಬಂಧಿಸಿ ಕೋರ್ಟ್ ಎದುರು ಹಾಜರುಪಡಿಸಲಾಯಿತು. ವಿಚಾರಣೆಯಲ್ಲಿ ಅವನು ತನ್ನ ಅಪರಾಧಗಳನ್ನು ಅಂಗೀಕರಿಸಿದ. ಅವನ ತಪ್ಪೊಪ್ಪಿಗೆ ಕೇವಲ ಚೀನಾ ಮಾತ್ರವಲ್ಲ, ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತು. 67 ಕೊಲೆ ಮತ್ತು 23 ಅತ್ಯಾಚಾರ ನಡೆಸಿದ್ದನ್ನು ಶಿನ್ಹಾಯ್ ಅಂಗೀಕರಿಸಿದ್ದ.

ಯಾಂಗ್ ಶಿನ್ಹಾಯ್ ಮೊಡಸ್ ಒಪೆರಾಂಡಿ!

ಅಪ್ಪಟ ಅಂತರ್ಮುಖಿಯಾಗಿದ್ದ ಶಿನ್ಹಾಯ್ ವೈದ್ಯರು, ವಕೀಲರು ಅಷ್ಟ್ಯಾಕೆ ಅವನ ಕುಟುಂಬ ಸದಸ್ಯರೊಂದಿಗೂ ಮಾತಾಡುತ್ತಿರಲಿಲ್ಲ. ಆ ಹಿನ್ನೆಲೆಯಲ್ಲೇ ಅವನನ್ನು ಮಾನಸಿಕ ರೋಗ ತಜ್ಞರಲ್ಲಿಗೆ ಕರೆದೊಯ್ಯಲಾಗಿ ತಪಾಸಣೆ ನಡೆಸಿದ ವೈದ್ಯರು ಅವನ ಮಾನಸಿಕ ಆರೋಗ್ಯ ಸ್ಥಿರವಾಗಿದೆ, ಯಾವುದೇ ಸಮಸ್ಯೆಯಿಲ್ಲ ಅಂತ ಹೇಳಿದಾಗ ವಕೀಲರು ಮತ್ತು ನ್ಯಾಯಾಧೀಶರಿಗೆ ಅಚ್ಚರಿಯಾಗಿತ್ತು.

ಇದನ್ನೂ ಓದಿ:  ಕೋಪಗೊಂಡ ಹಿಪ್ಪೋಪೊಟೋಮಸ್ ಪ್ರವಾಸಿಗರ ಸ್ಪೀಡ್​ಬೋಟ್​ ಬೆನ್ನಟ್ಟಿದ ವಿಡಿಯೋ ವೈರಲ್

ಬೇರೆ ಕೆಲವರು ಹೇಳುವ ಪ್ರಕಾರ ಅವನು ಪ್ರೀತಿಸುತ್ತಿದ್ದ ಹುಡುಗಿ ತನ್ನ ವೃತ್ತಿಬದುಕಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಶಿನ್ಹಾಯ್ ನನ್ನು ಬಿಟ್ಟುಹೋದ ಕಾರಣ ಅವನು ಖಿನ್ನನಾಗಿದ್ದ. ತನ್ನ ಅಪರಾಧಿ ಬದುಕಿನಲ್ಲಿ ಅವನು ಮಹಿಳೆಯರಂತೆ ಪುರಷರನ್ನು ಟಾರ್ಗೆಟ್ ಮಾಡುತ್ತಿದ್ದ. ಅವನು ನಡೆಸಿದ ಎಲ್ಲ ಭೀಕರ ಹತ್ಯೆಗಳಲ್ಲಿ ಮೊಡಸ್ ಒಪೆರಾಂಡಿ ಒಂದೇ ತೆರನಾಗಿರುತಿತ್ತು. ತನಗೆ ಬಲಿಯಾಗಬೇಕಿದ್ದ ಟಾರ್ಗೆಟ್ ಗಳ ಮನೆ ಹೊಕ್ಕು ಅಲ್ಲಿದ್ದವರನ್ನೆಲ್ಲ ಕೊಡಲಿ, ಸುತ್ತಿಗೆ ಮತ್ತು ಹರಿತವಾದ ಆಯುಧಗಳಿಂದ ಆಕ್ರಮಣ ನಡೆಸಿ ಕೊಲ್ಲುತ್ತಿದ್ದ.

ಹೊಸ ಬಟ್ಟೆ ಧರಿಸುತ್ತಿದ್ದ!

ಪ್ರತಿಸಲ ಕೊಲೆ ಮಾಡಿದ ಬಳಿಕ ಅವನು ಹೊಸ ಬಟ್ಟೆ ಧರಿಸಿ ಓಡಾಡುತ್ತಿದ್ದ ಮತ್ತು ಕೆಲವು ಸಲ ತನ್ನ ಶೂ ಅಳತೆಗಿಂತ ದೊಡ್ಡ ಸೈಜಿನ ಬೂಟುಗಳನ್ನು ಧರಿಸುತ್ತಿದ್ದ. ಅಕ್ಟೋಬರ್ 2002 ರಲ್ಲಿ ಶಿನ್ಹಾಯ್ ಒಬ್ಬ ವ್ಯಕ್ತಿ ಮತ್ತು ಅವನ 6-ವರ್ಷದ ಮಗಳನ್ನು ಸಲಿಕೆಯಿಂದ ಕೊಂದ ಬಳಿಕ ಅವನ ಗರ್ಭಿಣಿ ಹೆಂಡತಿಯ ಮೇಲೆ ಅತ್ಯಾಚಾರ ನಡೆಸಿದ್ದ. ಅವನ ಪೈಶಾಚಿಕ ಆಕ್ರಮಣದ ಹೊರತಾಗಿಯೂ ಆ ಗರ್ಭಿಣಿ ಸ್ತ್ರೀ ಬದುಕುಳಿದಳು. ಆದರೆ ಆಕೆಯ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು.

ಡಿಸೆಂಬರ್ 6, 2002 ರಂದು ಅವನು ಹೆನನಲ್ಲಿನ ಲೈಜುವಾಂಗ್ ಎಂಬ ಗ್ರಾಮದಲ್ಲಿ ಅಜ್ಜಿ, ತಂದೆತಾಯಿ ಮತ್ತು ಇಬ್ಬರು ಮಕ್ಕಳನ್ನೊಳಗೊಂಡ ಒಂದಿಡೀ ಕುಟುಂಬವನ್ನು ಹೊಸಕಿ ಹಾಕಿದ್ದ. ಆ ಕುಟುಂಬದ ಹಿರಿಯ (ತಾತ) ಲಿ ಜೊಂಗುವಾನ್ ವಿವರಗಳನ್ನು ಪೊಲೀಸರಿಗೆ ನೀಡಿದ್ದರು. ಅವರು ನೀಡಿದ ಹೇಳಿಕೆಯ ಪ್ರಕಾರ ಕೇವಲ ಮೂರು ದಿನಗಳ ಬಳಿಕ ಅವರೆಲ್ಲ ತಮ್ಮ ಹೊಸ ಮನೆಗೆ ಶಿಫ್ಟ್ ಆಗುವವರಿದ್ದರು.

ಮಗುವಿನ ಹಣೆಯಲ್ಲಿ ರಂಧ್ರ!

ಅವರು ತಮ್ಮ ಮೊಮ್ಮಕ್ಕಳನ್ನು ನೋಡಲೆಂದು ಹಳೆ ಮನೆಗೆ ಬಂದಾಗ ಅಲ್ಲಿ ಭೀಕರ ಹತ್ಯೆಗಳು ನಡೆದಿದ್ದು ಗೊತ್ತಾಯಿತು. ಅವರ ಮೊಮ್ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದಳು ಮತ್ತು ಅವಳ ಹಣೆಯ ದೊಡ್ಡ ರಂಧ್ರ ಬಿದ್ದಿತ್ತು. ಮನೆಯೆಲ್ಲ ರತ್ತಸಿಕ್ತವಾಗಿತ್ತು. ಲಿ ಜೊಂಗುವಾನ್ ಪತ್ನಿ (ಅಜ್ಜಿ) ಇನ್ನೂ ಬದುಕಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ 10 ದಿನಗಳ ಕಾಲ ಸಾವು ಬದುಕಿನೊಂದಿಗೆ ಹೋರಾಟ ನಡೆಸಿ ಪ್ರಾಣಬಿಟ್ಟರು.

ಇದನ್ನೂ ಓದಿ:  ಓಲಾ, ಊಬರ್ ಆಟೋ ಸೇವೆಗೆ ಶೇ.5ರಷ್ಟು ಸೇವಾಶುಲ್ಕ ನಿಗದಿ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ಈ ಪ್ರಕರಣದ ಬಗ್ಗೆ ಶಿನ್ಹಾಯ್ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳಿದ್ದ. ಸುತ್ತಿಗೆಯಿಂದ ಅವನು ಕುಟುಂಬದ ಸದಸ್ಯರನ್ನು ಕೊಂದು ಅದೇ ರಾತ್ರಿ ಅದನ್ನು ಹೂತಿಟ್ಟು ರಕ್ತಸಿಕ್ತವಾಗಿದ್ದ ತನ್ನ ಬಟ್ಟೆಗಳನ್ನು ನದಿಯೊಂದಲ್ಲಿ ಬಿಸಾಡಿದ್ದನಂತೆ. ಅಲ್ಲಿಂದ ಸುಮಾರು ಎರಡು ಗಂಟೆ ಪ್ರಯಾಣದಷ್ಟು ದೂರವಿರುವ ಲುಹೆ ಎಂಬ ಪಟ್ಟಣಕ್ಕೆ ನಡೆದುಹೋದನಂತೆ.

‘ಚೀನಾದ ರಾಕ್ಷಸ’

ಅವನ ತಪ್ಪೊಪ್ಪಿಗೆ ಚೀನಾದ ಜನರಲ್ಲಿ ತಲ್ಲಣ ಮೂಡಿಸಿತ್ತು. ಜನ ಅವನನ್ನು ‘ಚೀನಾದ ರಾಕ್ಷಸ’ ಎಂದು ಕರೆಯಲಾರಂಭಿಸಿದರು. ಪೊಲೀಸರು ಅವನನ್ನು ಜೈಲಿಗೆ ಕರೆದೊಯ್ಯುವಾಗ ಜನ ಅವನ ಮೇಲೆ ಕಲ್ಲೆಸದರು ಮತ್ತು ಅವನಿಗೆ ಸೇರಿದ ನಾವೆಗಳಿಗೆ ಕೊಳ್ಳಿಯಿಟ್ಟರು.

ಅಂತಿಮವಾಗಿ 2004ರಲ್ಲಿ ಅವನಿಗೆ ಮರಣದಂಡನೆ ವಿಧಿಸಲಾಯಿತು. ಗುಂಡು ಹೊಡೆದು ಸಾಯಿಸುವ ಸ್ಕ್ಯಾಡ್ (ಫೈರಿಂಗ್ ಸ್ಕ್ಯಾಡ್) ಅವನ ಮೇಲೆ ಗುಂಡು ಹಾರಿಸಿ ಕೊಂದಿತು. ಒಬ್ಬ ನರರೂಪಿ ರಾಕ್ಷಸನ ಬದುಕು ಹಾಗೆ ಕೊನೆಗೊಂಡಿತ್ತು.

ಮತ್ತಷ್ಟು ಕ್ರೈಮ್ ಕತೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ