Interesting Crime News! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ! ಪಂಡಿತ್ ನೆಹರೂರನ್ನು ಮದುವೆಯಾಗ್ತೀಯಾ ಅಂತಾ ಒಬ್ಬಳು ಕೇಳಿದ್ದಳು!

India's Five Most Dangerous Lady Dons: ಭಾರತದ ಪಾತಕ ಲೋಕದಲ್ಲಿ ಅತ್ಯಂತ ಅಪಾಯಕಾರಿ ಲೇಡಿ ಡಾನ್‌ಗಳ ಪರಿಚಯ ಇಲ್ಲಿದೆ! ಒಬ್ಬಳು ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಮದುವೆಗೆ ಒತ್ತಾಯಿಸಿದ್ದಳು. ಮತ್ತೊಬ್ಬಳು 21 ಪ್ರಭಾವಿ ಠಾಕೂರ್‌ಗಳನ್ನು ಕೊಂದುಬಿಸಾಕಿದಳು!

Interesting Crime News! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ! ಪಂಡಿತ್ ನೆಹರೂರನ್ನು ಮದುವೆಯಾಗ್ತೀಯಾ ಅಂತಾ ಒಬ್ಬಳು ಕೇಳಿದ್ದಳು!
ಇಂಟರೆಸ್ಟಿಂಗ್ ಕ್ರೈಂ! ಭಾರತದ ಖತರನಾಕ್​ ಮಹಿಳಾ ಡಾನ್​​​​​​ಗಳು ಇವರೇ!
ಸಾಧು ಶ್ರೀನಾಥ್​

Updated on: Jun 29, 2024 | 3:31 PM

ಇವರು ಗಾಡ್​ಫಾದರ್​​ಗಳಲ್ಲ; ಬದಲಿಗೆ ಗಾಡ್​ಮದರ್​​ಗಳು:​​ ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ, ಡಾನ್ ಅಥವಾ ದರೋಡೆಕೋರರನ್ನು ಸಾಮಾನ್ಯವಾಗಿ ಪುರುಷರಿಗಿಂತ ಒಂದು ಕೆಳಹಂತದಲ್ಲಿಯೇ ಬಿಂಬಿಸಲಾಗುತ್ತದೆ. ಆದರೆ ವಾಸ್ತವದಲ್ಲಿ, ನಿಜ ಜೀವನದಲ್ಲಿ ಡಾನ್‌ಗಳು ಪುರುಷರಷ್ಟೇ ಅಲ್ಲದೆ ಅನೇಕ ಮಹಿಳೆಯರೂ ಇದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಇವರು ಜನ್ಮತಃ ಪಾತಕಿಗಳಲ್ಲ; ಅವರಲ್ಲಿ ಕೆಲ ಮಹಿಳೆಯರು ತಮಗಾದ ಅನ್ಯಾಯ/ನಿಂದನೆಗೆ ಸೇಡು ತೀರಿಸಿಕೊಳ್ಳಲು ಗ್ಯಾಂಗ್ ಕಟ್ಟಿಕೊಂಡವರು ಅಥವಾ ಮಾಫಿಯಾಗಳನ್ನು ಕಟ್ಟಿಕೊಂಡರು. ಅಂತಹ ಅನೇಕ ಭಾರತೀಯ ಮಹಿಳೆಯರ ರಂಗೀನ್​​ ಲೋಕ, ಕರಾಳ ದಾಖಲೆಗಳು ಇತಿಹಾಸದಲ್ಲಿ ಕಪ್ಪು ಮಸಿಯಲ್ಲಿ ದಾಖಲಾಗಿದೆ. ಹಾಗಂತ ಪಾತಕ ಲೋಕ ಪ್ರವೇಶಿಸಿದ ಮೇಲೆ ಅವರು ಮುಗ್ಧರಾಗಿಯೇ ಉಳಿಯಲಿಲ್ಲ; ಬದಲಿಗೆ ಬದಲಾ ತೀರಿಸಿಕೊಳ್ಳಲು ಭಯಾನಕ ಮತ್ತು ಅತ್ಯಂತ ಅಪಾಯಕಾರಿ ಎನಿಸಿದರು. ಪುರುಷ ಸಾಮ್ರಾಜ್ಯವನ್ನು ಥರಗುಟ್ಟುವಂತೆ ಮಾಡಿದ್ದು ಸುಳ್ಳಲ್ಲ. ಅವರಲ್ಲಿ ಕೆಲವರು ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ಬಂಡೆದ್ದರು. ಅದಕ್ಕಾಗಿಯೇ ಅವರು ಈ ಅಪರಾಧ ಕ್ಷೇತ್ರಕ್ಕೆ ಕಾಲಿಟ್ಟರು. ಅದನ್ನು ನಾಗರಿಕ ಸಮಾಜ ಎಂದಿಗೂ ಬೆಂಬಲಿಸುವುದಿಲ್ಲ. ಆದರೆ, ಅವರು ಅಪರಾಧ ಲೋಕವನ್ನು ಏಕೆ ಪ್ರವೇಶಿಸಲು ಬಯಸಿದರು? ಅದರ ಹಿಂದಿನ ಕಥೆ ಏನು? ಭಾರತದ ಆ ಲೇಡಿ ಡಾನ್‌ಗಳು ಮತ್ತು ಲೇಡಿ ಗ್ಯಾಂಗ್‌ಸ್ಟರ್‌ಗಳು ಯಾರು? ಸೇಡಿನ ಜನರನ್ನು ಮಾತ್ರವಲ್ಲದೆ ಪೊಲೀಸ್ ಪಡೆಯ ಅನೇಕ ಹಿರಿಯ ಅಧಿಕಾರಿಗಳನ್ನೂ ಹೆದರಿಸಿಟ್ಟಿದ್ದ ಆ ಲೇಡಿಗಳು ಯಾರು? ಆ ಸ್ತ್ರೀಯರ ‘ಕೀರ್ತಿ’ ಎಷ್ಟಿತ್ತೆಂದರೆ ಅವರಲ್ಲಿ ಕೆಲವರು ಪಾತಕ...

Published On - 3:05 pm, Sat, 29 June 24

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ