Crime News: ಬಾಲಕನ ಕತ್ತು ಕೊಯ್ದು, ಕೈ-ಕಾಲು ಕತ್ತರಿಸಿ, ಕಾಡಿನಲ್ಲಿ ಬಿಸಾಡಿದ ಗೆಳೆಯರು

Murder: ಮೂವರು ಗೆಳೆಯರ ನಡುವೆ ನಡೆದ ಸಣ್ಣ ಜಗಳದಿಂದ 14 ವರ್ಷದ ಬಾಲಕನ ಪ್ರಾಣವೇ ಹೋಗಿದೆ. ತಮ್ಮ ಸ್ನೇಹಿತನನ್ನು ಕೊಂದ ಬಾಲಕರು ಆತನ ಕೈ, ಕಾಲುಗಳನ್ನು ಕತ್ತರಿಸಿ, ಹೆಣವನ್ನು ಗೋಣಿಚೀಲದಲ್ಲಿ ತುಂಬಿ ಕಾಡಿನಲ್ಲಿ ಬಿಸಾಡಿದ್ದಾರೆ.

Crime News: ಬಾಲಕನ ಕತ್ತು ಕೊಯ್ದು, ಕೈ-ಕಾಲು ಕತ್ತರಿಸಿ, ಕಾಡಿನಲ್ಲಿ ಬಿಸಾಡಿದ ಗೆಳೆಯರು
ಕೊಲೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 23, 2021 | 7:03 PM

ದಿಯೋಘರ್: ಗೆಳೆಯರೊಂದಿಗೆ ಜಗಳವಾಡಿಕೊಂಡ ಪರಿಣಾಮ 14 ವರ್ಷದ ಬಾಲಕನೊಬ್ಬನನ್ನು ಆತನ ಸ್ನೇಹಿತರು ಕತ್ತು ಕೊಯ್ದು, ಕೈಕಾಲುಗಳನ್ನು ಕತ್ತರಿಸಿ ಕೊಂದಿದ್ದಾರೆ. ನಂತರ ಆತನ ಶವವನ್ನು ಗೋಣಿಚೀಲಗಳಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದಾರೆ. ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೃತ ಬಾಲಕನ ಕುಟುಂಬದವರು ಬುಧವಾರ ಈ ಬಗ್ಗೆ ದೂರು ದಾಖಲಿಸಿದ್ದು, ತಮ್ಮ ಮಗ ಹಿಂದಿನ ರಾತ್ರಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ 14 ವರ್ಷದ ಬಾಲಕನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ 8.30ರ ಸುಮಾರಿಗೆ ಜಸಿದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ರೋಹಿಣಿ ಗ್ರಾಮದ ತನ್ನ ಮನೆಯ ಹೊರಗೆ ಆತನ ಸ್ನೇಹಿತರು ಬಾಲಕನನ್ನು ಭೇಟಿಯಾಗಿದ್ದರು. ಅಲ್ಲಿಂದ ಆತನನ್ನು ಕರೆದುಕೊಂಡು ಕುಮ್ರಾಬಾದ್ ಸ್ಟೇಷನ್ ರಸ್ತೆಗೆ ಹೋದರು. ಅಲ್ಲಿ 19 ವರ್ಷದ ಇನ್ನೊಬ್ಬ ಸ್ನೇಹಿತ ಅವಿನಾಶ್​ನನ್ನೂ ಜೊತೆ ಸೇರಿಸಿಕೊಂಡರು.

ಆ ಮೂವರೂ ಪಳಂಗ ಪಹಾಡ್ ಜಂಗಲ್ ಕಡೆಗೆ ಹೋಗುತ್ತಿದ್ದಾಗ ಅವಿನಾಶ್ ಮತ್ತು ಆ ಬಾಲಕನ ನಡುವೆ ವಾಗ್ವಾದ ನಡೆದಿದೆ. ಇಬ್ಬರ ಜಗಳ ವಿಕೋಪಕ್ಕೆ ತಿರುಗಿದಾಗ ಕೋಪದಿಂದ ಅವಿನಾಶ್ ಚಾಕು ತೆಗೆದು ಆ 14 ವರ್ಷದ ಬಾಲಕನನ್ನು ಇರಿದು ಕತ್ತು ಕೊಯ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆತನನ್ನು ಕೊಂದ ನಂತರ, ಅವಿನಾಶ್ ಆತನ ಕೈ ಮತ್ತು ಕಾಲುಗಳನ್ನು ಕತ್ತರಿಸಿ, ದೇಹದ ಭಾಗಗಳನ್ನು ಮೂರು ಗೋಣಿಚೀಲಗಳಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದಾನೆ. ಪೊಲೀಸರು ಶವವನ್ನು ವಶಪಡಿಸಿಕೊಂಡು ಅವಿನಾಶ್‌ನನ್ನು ಬಂಧಿಸಿದ್ದಾರೆ. ಅವಿನಾಶ್ ಕೂಡ ತಾನು ಮಾಡಿದ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಅವಿನಾಶ್​ನಿಂದ ರಕ್ತಸಿಕ್ತ ಚಾಕು ಮತ್ತು ಮೃತನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಎಸ್​ಡಿಪಿಐ ನಾಯಕನ ಕೊಲೆ ಬೆನ್ನಲ್ಲೇ ಕೇರಳದ ಬಿಜೆಪಿ ನಾಯಕನ ಕತ್ತು ಕೊಯ್ದು ಬರ್ಬರ ಹತ್ಯೆ

ನೆಲಮಂಗಲದಲ್ಲಿ ಚಾಕುವಿನಿಂದ ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ

Published On - 7:03 pm, Thu, 23 December 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ