Crime News: ಯುವಕನ ಮರ್ಮಾಂಗಕ್ಕೆ ಪೆಟ್ರೋಲ್ ಸುರಿದು, ನಗ್ನ ವಿಡಿಯೋ ರೆಕಾರ್ಡ್​ ಮಾಡಿದ ಮಾಲೀಕ

ನಜೀಮ್ ಖಾನ್ ಮತ್ತು ಇತರ ಮೂವರು ಆರೋಪಿಗಳು ಸಣ್ಣ ಬಾಟಲಿಯಿಂದ ಆತನ ಖಾಸಗಿ ಅಂಗಗಳಿಗೆ ಪೆಟ್ರೋಲ್ ಸುರಿದು, ನಗ್ನವಾಗಿ ವೀಡಿಯೊ ಚಿತ್ರೀಕರಿಸಿ ಅದನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

Crime News: ಯುವಕನ ಮರ್ಮಾಂಗಕ್ಕೆ ಪೆಟ್ರೋಲ್ ಸುರಿದು, ನಗ್ನ ವಿಡಿಯೋ ರೆಕಾರ್ಡ್​ ಮಾಡಿದ ಮಾಲೀಕ
ಸಾಂದರ್ಭಿಕ ಚಿತ್ರImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 12, 2022 | 2:02 PM

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ 21 ವರ್ಷದ ಬುಡಕಟ್ಟು ಜನಾಂಗದ (Tribal Man) ಯುವಕನ ಮೇಲೆ ಕೆಲವು ಜನರು ಸೇರಿಕೊಂಡು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಯುವಕನಿಗೆ ಮನಬಂದಂತೆ ಥಳಿಸಿ, ಆತನ ಮರ್ಮಾಂಗಕ್ಕೆ (Private Parts) ಪೆಟ್ರೋಲ್ ಸುರಿದಿರುವ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಕೊಲೆ ಯತ್ನ ಮತ್ತು ಇತರ ಅಪರಾಧಗಳ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲ್ಲೆಗೊಳಗಾದ ಯುವಕನ ದೂರಿನ ಪ್ರಕಾರ ಆತನ ಮಾಲೀಕ ಮತ್ತು ಇತರ ಮೂವರು ಸೇರಿ ಆತನನ್ನು ಮನೆಗೆ ಕರೆಸಿಕೊಂಡು, ಮನೆಯೊಳಗೆ ಕೂಡಿಹಾಕಿ, ಥಳಿಸಿ ಹಿಂಸೆ ನೀಡಿದ್ದಾರೆ. ನಂತರ ಆತನ ಖಾಸಗಿ ಅಂಗಗಳಿಗೆ ಪೆಟ್ರೋಲ್ ಹಾಕಿ, ಆತನ ನಗ್ನ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ.

ಇದನ್ನೂ ಓದಿ: Shocking News: ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಗಂಡನ ಮರ್ಮಾಂಗ ಕತ್ತರಿಸಿದ ಹೆಂಡತಿ!

ಇದನ್ನೂ ಓದಿ
Image
Shocking News: ಪುರುಷನಿಗೂ ಪಿರಿಯಡ್ಸ್​!; ಹೊಟ್ಟೆ ನೋವೆಂದು ಡಾಕ್ಟರ್ ಬಳಿ ಹೋದವನಿಗೆ ಶಾಕ್
Image
Shocking News: ಮಿಸ್ ಆಗಿ 43 ಸಾವಿರದ ಬದಲು 1.43 ಕೋಟಿ ರೂ. ಸಂಬಳ ನೀಡಿದ ಕಂಪನಿ; ಶಾಕ್ ಆದ ಉದ್ಯೋಗಿ ಮಾಡಿದ್ದೇನು?
Image
Shocking Video: ನದಿಯಲ್ಲಿ ಸ್ನಾನ ಮಾಡುವಾಗ ಹೆಂಡತಿಗೆ ಮುತ್ತು ಕೊಟ್ಟ ಗಂಡನಿಗೆ ಹಿಗ್ಗಾಮುಗ್ಗ ಥಳಿಸಿದ ಜನ!
Image
Shocking News: ರೆಸ್ಟೋರೆಂಟ್​​ನಲ್ಲಿ ಮೋಮೋಸ್ ತಿನ್ನುವಾಗ​ ಗಂಟಲಲ್ಲಿ ಸಿಕ್ಕಿ ವ್ಯಕ್ತಿ ಸಾವು!

ಈ ಬಗ್ಗೆ ತೇಜಾಜಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಆರ್‌ಡಿ ಕಣ್ವ ಮಾಹಿತಿ ನೀಡಿದ್ದು, ಅಲಿರಾಜಪುರ ಮೂಲದ 21 ವರ್ಷದ ವಿದ್ಯಾರ್ಥಿ ದೂರು ನೀಡಿದಾತ. ಆತ ತನ್ನ ಇಬ್ಬರು ಸಹೋದರಿಯರೊಂದಿಗೆ ಆರೋಪಿ ನಜೀಮ್ ಖಾನ್ ಎಂಬಾತನ ಮನೆಯಲ್ಲಿ ಬಾಡಿಗೆಗಿದ್ದ. ಬುಡಕಟ್ಟು ಜನಾಂಗದ ಆ ಯುವಕ ಆ ಮನೆ ಮಾಲೀಕನ ಮಗನಿಂದ 50,000 ರೂ. ಸುಲಿಗೆ ಮಾಡಿ, ಲ್ಯಾಪ್‌ಟಾಪ್ ಖರೀದಿಸಿದ್ದ. ಅದೇ ಕಾರಣಕ್ಕೆ ಆತನಿಗೆ ಥಳಿಸಿ, ಚಿತ್ರಹಿಂಸೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Shocking News: ಅಕ್ಕನ ಬಾಯ್​ಫ್ರೆಂಡ್​ನಿಂದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ಕೋಲು ತುರುಕಿ ಚಿತ್ರಹಿಂಸೆ!

ಜುಲೈ 9ರಂದು ನಜೀಮ್ ಖಾನ್ ಮೇಕೆ ಖರೀದಿಸುವ ನೆಪದಲ್ಲಿ ಆ ಯುವಕನನ್ನು ಕರೆದೊಯ್ದು ಮನೆಯಲ್ಲಿ ಕೂಡಿಹಾಕಿ, ಹಲ್ಲೆ ನಡೆಸಿದರು. ನಜೀಮ್ ಖಾನ್ ಮತ್ತು ಇತರ ಮೂವರು ಆರೋಪಿಗಳು ಸಣ್ಣ ಬಾಟಲಿಯಿಂದ ಆತನ ಖಾಸಗಿ ಅಂಗಗಳಿಗೆ ಪೆಟ್ರೋಲ್ ಸುರಿದು, ನಗ್ನವಾಗಿ ವೀಡಿಯೊ ಚಿತ್ರೀಕರಿಸಿ ಅದನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಿಂದೂ ಜಾಗರಣ ಮಂಚ್‌ನ ಹಲವಾರು ಕಾರ್ಯಕರ್ತರು ಪೊಲೀಸ್ ಠಾಣೆಗೆ ತೆರಳಿ ನಾಲ್ವರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Published On - 1:58 pm, Tue, 12 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ