ಮಹಿಳೆಯನ್ನು ಸಾರ್ವಜನಿಕವಾಗಿ ಚಾಕುವಿನಿಂದ ಇರಿದು ಕೊಂದ ಯುವಕ!

25 ವರ್ಷದ ಯುವಕನೊಬ್ಬ ಮಹಿಳೆಯನ್ನು ಸಾರ್ವಜನಿಕವಾಗಿ ಚಾಕುವಿನಿಂದ  ಇರಿದು ಕೊಂದಿರುವ ಘಟನೆ ಮಂಗಳವಾರ ನಡೆದಿದೆ.  ವಿಚ್ಛೇದಿತ ಮಹಿಳೆಯೊಬ್ಬರು ಫೇಸ್‌ಬುಕ್ ಮೂಲಕ ರಾಹುಲ್ ಧರ್ ಎಂಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದರು, ನಂತರ ಇಬ್ಬರಲ್ಲಿ ಸ್ನೇಹ ಬೆಳೆದು, ಕೊನೆಗೆ ಆ ವ್ಯಕ್ತಿ ಈ ಮಹಿಳೆಗೆ "ಮಾನಸಿಕ ತೊಂದರೆ ಮಾಡುತ್ತಿದ್ದರು.

ಮಹಿಳೆಯನ್ನು ಸಾರ್ವಜನಿಕವಾಗಿ ಚಾಕುವಿನಿಂದ ಇರಿದು ಕೊಂದ ಯುವಕ!
ಸಾಂದರ್ಭಿಕ ಚಿತ್ರ
TV9kannada Web Team

| Edited By: ಅಕ್ಷಯ್​ ಕುಮಾರ್​​

Jul 12, 2022 | 3:56 PM

ಅಗರ್ತಲಾ: ತ್ರಿಪುರಾದ ಧಲೈ ಜಿಲ್ಲೆಯಲ್ಲಿ 25 ವರ್ಷದ ಯುವಕನೊಬ್ಬ ಮಹಿಳೆಯನ್ನು ಸಾರ್ವಜನಿಕವಾಗಿ ಚಾಕುವಿನಿಂದ  ಇರಿದು ಕೊಂದಿರುವ ಘಟನೆ ಮಂಗಳವಾರ ನಡೆದಿದೆ.  ವಿಚ್ಛೇದಿತ ಮಹಿಳೆಯೊಬ್ಬರು ಫೇಸ್‌ಬುಕ್ ಮೂಲಕ ರಾಹುಲ್ ಧರ್ ಎಂಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದರು, ನಂತರ ಇಬ್ಬರಲ್ಲಿ ಸ್ನೇಹ ಬೆಳೆದು, ಕೊನೆಗೆ ಆ ವ್ಯಕ್ತಿ ಈ ಮಹಿಳೆಗೆ “ಮಾನಸಿಕ ತೊಂದರೆ ಮಾಡುತ್ತಿದ್ದರು. ಮಹಿಳೆ ಭಾನುವಾರ ಸಂಜೆ ರಾಹುಲ್ ಧಾರ್ ಅವರ ಮನೆಗೆ ಹೋಗಿದ್ದರು ಮತ್ತು ತನಗೆ ತೊಂದರೆಯಾಗತ್ತಿದೆ ಈ ಬಗ್ಗೆ ನಿಮ್ಮ ಮಗನಲ್ಲಿ ಒಂದು ಬಾರಿ ಮಾತನಾಡಿ ಎಂದು  ರಾಹುಲ್ ಧರ್  ತಾಯಿಗೆ ಹೇಳಿದರು.  ನಂತರ ಆ ಮಹಿಳೆ  ಮನೆಗೆ ಮರಳಲು ಆಟೋರಿಕ್ಷಾವನ್ನು ಹತ್ತಿದ್ದಾರೆ.  ಕಮಲಾಪುರ  ಭುವನ್ಚೆರಾ ಗ್ರಾಮದಲ್ಲಿ ರಾಹುಲ್ ಧಾರ್ ಆಕೆಯನ್ನು ಹಿಂಬಾಲಿಸಿ ಬಲವಂತವಾಗಿ ವಾಹನದಿಂದ ಕೆಳಗೆ ಎಳೆದುಕೊಂಡು ಹೋಗಿ ಚಾಕುವಿನಿಂದ ಇರಿದಿದ್ದಾನೆ.  ಅವಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಹುಲ್ ಧರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ, ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಇನ್‌ಸ್ಪೆಕ್ಟರ್ ಜನರಲ್ (ಕಾನೂನು ಮತ್ತು ಸುವ್ಯವಸ್ಥೆ) ಅರಿಂದಮ್ ನಾಥ್ ಪಿಟಿಐಗೆ ತಿಳಿಸಿದ್ದಾರೆ.

ಇದನ್ನು ಓದಿ: ಸಣ್ಣ ವಿಚಾರಕ್ಕೆ ಜಗಳ ವಿದ್ಯಾರ್ಥಿ ಸಾವು, ನಾಲ್ವರು ಅಪ್ರಾಪ್ತ ಬಾಲಕರ ಬಂಧನ

ನಾಲ್ಕು ವರ್ಷದ ಹೆಣ್ಣು ಮಗುವನ್ನು ಹೊಂದಿರುವ ಮಹಿಳೆಗೆ ರಾಹುಲ್ ಧರ್ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದರು ಎಂದು ಸ್ಥಳೀಯ ಪಂಚಾಯತ್ ಸದಸ್ಯ ನಿತ್ಯಾ ಸುಕ್ಲಾ ಬೈದ್ಯ ಹೇಳಿದ್ದಾರೆ. ಧರ್ ಅವಳನ್ನು ಮಾನಸಿಕವಾಗಿ ತೊಂದರೆ ನೀಡುತ್ತಿದ್ದ  ಅವಳು ಇದಕ್ಕೆ  ಬಾಮಂಚೆರಾ ಪಂಚಾಯತ್ ಅನ್ನು ಸಂಪರ್ಕಿಸಿದ್ದಳು ಎಂದು ಹೇಳಿದರು.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada