ಬೆಂಗಳೂರಿನ ರೌಡಿಗಳಿಗೆ ಪಿಸ್ತೂಲ್ ಪೂರೈಸುತ್ತಿದ್ದ ಮಹಾರಾಷ್ಟ್ರದ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರಿನ ರೌಡಿಗಳಿಗೆ ಪಿಸ್ತೂಲ್ ಪೂರೈಸುತ್ತಿದ್ದ ಮಹಾರಾಷ್ಟ್ರದ ಇಬ್ಬರನ್ನು ನಗರದ ಉಲ್ಲಾಳ ಬಳಿ ಬಂಧಿಸಲಾಗಿದೆ. ಸಿಸಿಬಿ ಪೊಲೀಸರಿಂದ ರಾಹುಲ್ ಸತೀಶ್​​ ಮಾನೆ, ಮಲ್ಲಿಕ್​ನನ್ನು ಅರೆಸ್ಟ್​ ಮಾಡಲಾಗಿದೆ. ಬೆಂಗಳೂರು ರೌಡಿಸಂಗೆ ವೆಪನ್ಸ್​ಗಳು ಬೇಕು ಎಂಬ ಬೇಡಿಕೆ ಹಿನ್ನೆಲೆ ರೌಡಿಗಳಿಗೆ ಗನ್ ಸಪ್ಲೈ ಮಾಡಲಿಕ್ಕೆ ಪಿಸ್ತೂಲ್ ತರಿಸಲಾಗಿತ್ತು. ಗುಂಡುಗಳು ಮತ್ತು ಪಿಸ್ತೂಲ್​ಗಳನ್ನು ಯಾರಿಗೆ ತಲುಪಿಸಲು ಮುಂದಾಗಿದ್ದರು ಎಂದು ಸಿಸಿಬಿಯಿಂದ ತನಿಖೆ ಮಾಡಲಾಗುತ್ತಿದೆ. 

ಬೆಂಗಳೂರಿನ ರೌಡಿಗಳಿಗೆ ಪಿಸ್ತೂಲ್ ಪೂರೈಸುತ್ತಿದ್ದ ಮಹಾರಾಷ್ಟ್ರದ ಇಬ್ಬರು ಆರೋಪಿಗಳ ಬಂಧನ
ಬಂಧಿತರು, ವಶಕ್ಕೆ ಪಡೆದ ಗನ್​, 9 ಜೀವಂತ ಗುಂಡುಗಳು
Updated By: ಗಂಗಾಧರ​ ಬ. ಸಾಬೋಜಿ

Updated on: Jan 18, 2024 | 2:33 PM

ಬೆಂಗಳೂರು, ಜನವರಿ 18: ನಗರದ ರೌಡಿಗಳಿಗೆ ಪಿಸ್ತೂಲ್ (pistols) ಪೂರೈಸುತ್ತಿದ್ದ ಮಹಾರಾಷ್ಟ್ರದ ಇಬ್ಬರನ್ನು ನಗರದ ಉಲ್ಲಾಳ ಬಳಿ ಬಂಧಿಸಲಾಗಿದೆ. ಸಿಸಿಬಿ ಪೊಲೀಸರಿಂದ ರಾಹುಲ್ ಸತೀಶ್​​ ಮಾನೆ, ಮಲ್ಲಿಕ್​ನನ್ನು ಅರೆಸ್ಟ್​ ಮಾಡಲಾಗಿದೆ. ಬಂಧಿತರಿಂದ ಎರಡು ಪಿಸ್ತೂಲ್​​​, 9 ಜೀವಂತ ಗುಂಡುಗಳು ಜಪ್ತಿ ಮಾಡಲಾಗಿದೆ. ಆರೋಪಿಗಳು ಮಹಾರಾಷ್ಟ್ರ ಮೂಲದವರು. ಈ ಹಿಂದೆ ಆರೋಪಿಗಳು ಕೇಸ್ ಒಂದರಲ್ಲಿ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಈ ವೇಳೆ ನಗರದ ಹಲವಾರು ರೌಡಿಗಳಿಗೆ ವೆಪನ್ಸ್ ಡೀಲರ್ಸ್ ಪರಿಚಯವಾಗಿದ್ದರು. ಹೀಗಾಗಿ ಜೈಲಿನಿಂದ ಹೊರಬಂದ ಬಳಿಕ ರೌಡಿಗಳ ಸಂಪರ್ಕದಲ್ಲಿದ್ದರು.

ಬೆಂಗಳೂರು ರೌಡಿಸಂಗೆ ವೆಪನ್ಸ್​ಗಳು ಬೇಕು ಎಂಬ ಬೇಡಿಕೆ ಹಿನ್ನೆಲೆ ರೌಡಿಗಳಿಗೆ ಗನ್ ಸಪ್ಲೈ ಮಾಡಲಿಕ್ಕೆ ಪಿಸ್ತೂಲ್ ತರಿಸಲಾಗಿತ್ತು. ಗುಂಡುಗಳು ಮತ್ತು ಪಿಸ್ತೂಲ್​ಗಳನ್ನು ಯಾರಿಗೆ ತಲುಪಿಸಲು ಮುಂದಾಗಿದ್ದರು ಎಂದು ಸಿಸಿಬಿಯಿಂದ ತನಿಖೆ ಮಾಡಲಾಗುತ್ತಿದೆ.

ಕೆರೆಯಲ್ಲಿ ತಾಯಿ, ಇಬ್ಬರು ಮಕ್ಕಳ ಶವ ಪತ್ತೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಕೆರೆಯಲ್ಲಿ ತಾಯಿ, ಇಬ್ಬರು ಮಕ್ಕಳ ಶವ ಪತ್ತೆ ಆಗಿದೆ. ಮಕ್ಕಳ ಸಮೇತ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತಾಯಿ ರಾಧಾ, ಪುತ್ರಿ ಪೂರ್ವಿಕಾ(4), ಮತ್ತೋರ್ವ ಮಗಳು ಮೃತರು. ಚಿತಾಮಣಿ ತಾಲೂಕಿನ ಯಗವಕೋಟೆ ನಿವಾಸಿಯಾಗಿದ್ದಾರೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಒಂದೇ ದಿನ ಮೂರು ತಾಲೂಕುಗಳನ್ನ ಟಾರ್ಗೆಟ್ ಮಾಡಿ ಸರಣಿ ಕಳ್ಳತನ 

ವಿಜಯನಗರ: ಜಿಲ್ಲೆಯಲ್ಲಿ ಒಂದೇ ದಿನ ಮೂರು ತಾಲೂಕುಗಳನ್ನ ಟಾರ್ಗೆಟ್ ಮಾಡಿ ಸರಣಿ ಕಳ್ಳತನ ಮಾಡಲಾಗಿದೆ. ಕೂಡ್ಲಿಗಿ, ಕೊಟ್ಟೂರು, ಹೂವಿನ ಹಡಗಲಿ ತಾಲೂಕುಗಳಲ್ಲಿ ಒಂದೇ ದಿನ ಸರಣಿ ಕಳ್ಳತನವಾಗಿದೆ. ಹೂವಿನ ಹಡಗಲಿಯಲ್ಲಿ 4 ಮನೆಗಳ‌ ಮೇಲೆ ಕಳ್ಳತನಕ್ಕೆ ವಿಫಲ ಯತ್ನ ಮಾಡಲಾಗಿದೆ. ಕೂಡ್ಲಿಗಿಯಲ್ಲಿ ಒಂದು ಮನೆ ಕಳ್ಳತನ ಮತ್ತೊಂದು ಮನೆ ವಿಫಲ ಯತ್ನ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಣ್ಮಕ್ಕಳಿಗಿಲ್ಲ ಸೇಫ್ಟಿ: ಹೋಟೆಲ್​ಗೆ ಬಂದ ಯುವತಿ ಜೊತೆ ಅಸಭ್ಯ ವರ್ತನೆ; ಸಿಸಿಟಿವಿಯಲ್ಲಿ ಸೆರೆ

ಕೂಡ್ಲಿಗಿಯ ತಿಪ್ಪೇರುದ್ರ ಎನ್ನುವವರ ಮನೆಯಲ್ಲಿ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಒಂದು ಲಕ್ಷ ರೂ. ಹಣ ದೋಚಿ ಖದೀಮರು ಪರಾರಿಯಾಗಿದ್ದಾರೆ. ಕೊಟ್ಟೂರಿನಲ್ಲಿ ಒಂದು ಮನೆ ಕಳ್ಳತನವಾಗಿದ್ದು, ಇನ್ನೊಂದು ಮನೆ ಮೇಲೆ ಕಳ್ಳತನ ವಿಫಲ ಯತ್ನಿಸಲಾಗಿದೆ. ಹೂವಿನ ಹಡಗಲಿ, ಕೂಡ್ಲಿಗಿ, ಕೊಟ್ಟೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಕಳ್ಳರ ಕೈಚಳಕದ ವಿಡಿಯೋ ಸಿಸಿಟಿವಿಯಲ್ಲಿ ಸೆರೆ ಆಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.