AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯ ಸಮುದ್ರದಲ್ಲಿ ಮುಳುಗಿಸಿ ಕೊಂದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಗೋವಾ ಹೋಟೆಲ್ ಮ್ಯಾನೇಜರ್​ ಬಂಧನ

ಪತ್ನಿಯನ್ನು ಸಮುದ್ರದಲ್ಲಿ ಮುಳುಗಿಸಿ ಕೊಂದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಗೋವಾ ಹೋಟೆಲ್​ ಮ್ಯಾನೇಜರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್ ಕಟಿಯಾರ್ ಎಂಬ ಆರೋಪಿ ತನ್ನ ಪತ್ನಿ ದೀಕ್ಷಾ ಗಂಗ್ವಾರ್ (27) ಅವರ ಸಾವನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದರು.

ಪತ್ನಿಯ ಸಮುದ್ರದಲ್ಲಿ ಮುಳುಗಿಸಿ ಕೊಂದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಗೋವಾ ಹೋಟೆಲ್ ಮ್ಯಾನೇಜರ್​ ಬಂಧನ
ಗೌರವ್Image Credit source: NDTV
ನಯನಾ ರಾಜೀವ್
|

Updated on: Jan 21, 2024 | 9:49 AM

Share

ಪತ್ನಿಯನ್ನು ಸಮುದ್ರದಲ್ಲಿ ಮುಳುಗಿಸಿ ಕೊಂದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಗೋವಾ ಹೋಟೆಲ್​ ಮ್ಯಾನೇಜರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಗೌರವ್ ಕಟಿಯಾರ್ ಎಂಬ ಆರೋಪಿ ತನ್ನ ಪತ್ನಿ ದೀಕ್ಷಾ ಗಂಗ್ವಾರ್ (27) ಅವರ ಸಾವನ್ನು ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದರು.

ಶುಕ್ರವಾರ ಮಧ್ಯಾಹ್ನ ಪೊಲೀಸರು ಗಂಗ್ವಾರ್ ಮಹಿಳೆಯ ಶವವನ್ನು ಫೇಮಸ್​ ಆಗಿರುವ ಬೀಚ್ ಬಳಿ ಪತ್ತೆ ಮಾಡಿದ್ದಾರೆ. ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದರು, ಅವರು ಬೇರೊಬ್ಬ ಮಹಿಳೆ ಜತೆ ಅನೈತಿಕ ಸಂಬಂಧಹೊಂದಿದ್ದರು, ಅವರಿಬ್ಬರ ನಡುವೆ ಈಕೆ ಅಡ್ಡಬರುತ್ತಿದ್ದಾಳೆಂದು ಭಾವಿಸಿ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಗೌರವ್ ಕಟಿಯಾರ್ ಅವರು ದಕ್ಷಿಣ ಗೋವಾದ ಕೊಲ್ವಾದಲ್ಲಿ ಮ್ಯಾರಿಯಟ್ ಇಂಟರ್ನ್ಯಾಷನಲ್ ನಿರ್ವಹಿಸುತ್ತಿರುವ ಐಷಾರಾಮಿ ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾನೆ. ಲಕ್ನೋ ಮೂಲದ ಗೌರವ್ ಕಟಿಯಾರ್ ಸುಮಾರು ಒಂದು ವರ್ಷದ ಹಿಂದೆ ದೀಕ್ಷಾ ಗಂಗ್ವಾರ್ ಅವರನ್ನು ವಿವಾಹವಾದರು, ಆದರೆ ಅವರ ಸಂಬಂಧವು ಹಳಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: Death Sentence For Killing Wife: ಹೆಂಡತಿಯ ಕೊಂದ ಗಂಡನಿಗೆ ಗಲ್ಲು ಶಿಕ್ಷೆ! ನಾಂಪಲ್ಲಿ ಕ್ರಿಮಿನಲ್ ಕೋರ್ಟ್​​​ನಿಂದ ಸಂಚಲನಾತ್ಮಕ ತೀರ್ಪು

ತನ್ನ ವಿವಾಹೇತರ ಸಂಬಂಧದ ಬಗ್ಗೆ ತಿಳಿದಿದ್ದರಿಂದ ಕಟಿಯಾರ್ ತನ್ನ ಹೆಂಡತಿಯನ್ನು ಕೊಲ್ಲಲು ನಿರ್ಧರಿಸಿದ್ದ. ಗೌರವ್ ತನ್ನ ಪತ್ನಿಯನ್ನು ದಕ್ಷಿಣ ಗೋವಾದ ಕಡಲತೀರಕ್ಕೆ ವಿಹಾರಕ್ಕೆ ಕರೆದೊಯ್ದನು, ಅಲ್ಲಿ ಆಕೆಯನ್ನು ಹತ್ಯೆ ಮಾಡಿದ್ದ. ಈ ಘಟನೆ ಶುಕ್ರವಾರ ಮಧ್ಯಾಹ್ನ 3.45 ರ ಸುಮಾರಿಗೆ ಕಾಬೋ ಡಿ ರಾಮಾ ಬೀಚ್‌ನಲ್ಲಿ ಸಂಭವಿಸಿದೆ.

ಆತ ಏಕಾಂಗಿಯಾಗಿ ಬೀಚ್​ನಿಂದ ಬರುತ್ತಿರುವುದನ್ನು ಕಂಡ ಕೆಲ ಪ್ರವಾಸಿಗರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೌರವ್ ಮತ್ತು ದೀಕ್ಷಾ ನೀರಿಗೆ ಹೋಗುತ್ತಿರುವುದನ್ನು ತಾವು ನೋಡಿದ್ದೇವೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ, ಆದರೆ ವ್ಯಕ್ತಿ ಹಿಂತಿರುಗಿದಾಗ ಮಹಿಳೆ ಎಲ್ಲಿಯೂ ಕಾಣಿಸಲಿಲ್ಲ ಎಂದು ಹೇಳಿದ್ದರು.

ಮಹಿಳೆಯ ದೇಹದಲ್ಲಿ ಗಾಯದ ಗುರುತುಗಳಿವೆ. ವ್ಯಕ್ತಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ