AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಆಸ್ತಿ ವಿಚಾರಕ್ಕೆ ತಾಯಿ ಮೇಲೆ ಇಟ್ಟಿಗೆಯಿಂದ ಹಲ್ಲೆ; ಬಂಧನದ ಭೀತಿಯಿಂದ ವಿಷ ಸೇವಿಸಿದ ಮಗ

ಶುಕ್ರವಾರ ತಂದೆಯ ಮನೆಗೆ ಹೋಗಿದ್ದ ಆರೋಪಿ ತಂಗಿಯ ಮದುವೆ ವಿಚಾರವಾಗಿ ಅಪ್ಪ-ಅಮ್ಮನೊಂದಿಗೆ ವಾಗ್ವಾದ ನಡೆಸಿದ್ದ. ಈ ಜಗಳದ ನಡುವೆ ಆತ ತನ್ನ ತಾಯಿಯ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದ.

Crime News: ಆಸ್ತಿ ವಿಚಾರಕ್ಕೆ ತಾಯಿ ಮೇಲೆ ಇಟ್ಟಿಗೆಯಿಂದ ಹಲ್ಲೆ; ಬಂಧನದ ಭೀತಿಯಿಂದ ವಿಷ ಸೇವಿಸಿದ ಮಗ
ಸಾಂಕೇತಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 31, 2022 | 5:04 PM

ಗುರುಗ್ರಾಮ: ಆಸ್ತಿಗಾಗಿ ಮಕ್ಕಳೇ ಅಪ್ಪ-ಅಮ್ಮಂದಿರ ಮೇಲೆ ಹಲ್ಲೆ (Attack) ನಡೆಸಿದ, ಕೊಲೆ ನಡೆಸಿದ ಘಟನೆಗಳು ಬೇಕಾದಷ್ಟಿವೆ. ಅದೇ ರೀತಿ ಗುರುಗ್ರಾಮದಲ್ಲಿ (Gurugram) ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ತನ್ನ ವೃದ್ಧ ತಾಯಿಯ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ಬಳಿಕ ಈ ವಿಷಯ ಗೊತ್ತಾದರೆ ಪೊಲೀಸರು ಬಂಧಿಸುತ್ತಾರೆಂಬ ಭಯದಿಂದ ಆತ ವಿಷ ಸೇವಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದ್ದು, ಆರೋಪಿಯು ತನ್ನ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಆತನ ತಾಯಿ, ತಂದೆ ಮತ್ತು ಮೂವರು ಸೋದರಿಯರು ಗುರುಗ್ರಾಮ್ ಸೆಕ್ಟರ್ 11ರ ಗಾಂಧಿ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ತಂದೆಯ ಮನೆಗೆ ಹೋಗಿದ್ದ ಆರೋಪಿ ತಂಗಿಯ ಮದುವೆ ವಿಚಾರವಾಗಿ ಅಪ್ಪ-ಅಮ್ಮನೊಂದಿಗೆ ವಾಗ್ವಾದ ನಡೆಸಿದ್ದ. ತನ್ನ ತಂಗಿಗೆ ತಕ್ಕ ಹುಡುಗನನ್ನು ನೋಡಿ ಮದುವೆ ಮಾಡುತ್ತಿಲ್ಲ ಎಂದು ಅತನಿಗೆ ಅನಿಸಿತ್ತು. ಇದೇ ವಿಷಯಕ್ಕೆ ಅಪ್ಪನೊಂದಿಗೆ ಆತ ಜಗಳವಾಡಿದ್ದ.

ಈ ಜಗಳದ ನಡುವೆ ಆತ ತನ್ನ ತಾಯಿಯ ಮೇಲೆ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಆಸ್ಪತ್ರೆಗೆ ಹೋಗಿ ಅಮ್ಮನನ್ನು ಭೇಟಿ ಮಾಡಿದ್ದ ಆತ ಬಂಧನದ ಭೀತಿಯಿಂದ ವಿಷ ಸೇವಿಸಿದ್ದ.

ಮಗನಿಂದ ಹಲ್ಲೆಗೊಳಗಾದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲೇ ಆ ವೃದ್ಧೆಯ ಮಗನ ವಿರುದ್ಧ ದೂರು ದಾಖಲಾಗಿತ್ತು. ವಿಷ ಸೇವಿಸಿದ ವ್ಯಕ್ತಿ ಈಗ ಚೇತರಿಸಿಕೊಂಡಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Murder: ಗೆಳೆಯನನ್ನು ಕೊಂದು, ರೈಲಿನ ಕೆಳಗೆ ಹಾಕಿ ಅಪಘಾತವೆಂದು ಕತೆ ಕಟ್ಟಿದ ಯುವಕ!

Murder: ಮರುಮದುವೆಯಾಗಲು ಮುಂದಾದ 80 ವರ್ಷದ ತಂದೆಯನ್ನು ಕೊಚ್ಚಿ ಕೊಂದ ಮಗ!