ಬೀದರ್​ನಲ್ಲಿ ಹೆಂಡತಿಯನ್ನು ಕೊಂದ ಗಂಡನಿಗೆ ಜೀವಾವಧಿ ಶಿಕ್ಷೆ; ಕುಡಿದ ಮತ್ತಿನಲ್ಲಿ ಮಾಜಿ ಸಂಸದನ ಮಗನ ಮೇಲೆ ಹಲ್ಲೆ

ಬೀದರ್​ನಲ್ಲಿ ಹೆಂಡತಿಯನ್ನು ಕೊಂದ ಗಂಡನಿಗೆ ಜೀವಾವಧಿ ಶಿಕ್ಷೆ; ಕುಡಿದ ಮತ್ತಿನಲ್ಲಿ ಮಾಜಿ ಸಂಸದನ ಮಗನ ಮೇಲೆ ಹಲ್ಲೆ
ಸಾಂದರ್ಭಿಕ ಚಿತ್ರ

ಬೀದರ್​ನಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಹೆಂಡತಿಗೆ ಮಕ್ಕಳಾಗದಿದ್ದಕ್ಕೆ 2016ರಲ್ಲಿ ಆಕೆಯ ಗಂಡ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ.

TV9kannada Web Team

| Edited By: Sushma Chakre

Jan 27, 2022 | 5:15 PM

ಬೆಂಗಳೂರು: ಕುಡಿದ ಮತ್ತಿನಲ್ಲಿ ಮಾಜಿ ಸಂಸದನ ಪುತ್ರನ ಮೇಲೆ ಹಲ್ಲೆ ನಡೆಸಲಾಗಿದೆ. ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾರವಾಡದ ಮಾಜಿ ಸಂಸದನ ಮಗ ಚಂದ್ರಶೇಖರ್ ಕುನ್ನೂರ್ ಮೇಲೆ ಸ್ನೇಹಿತರಿಂದ ಹಲ್ಲೆ ನಡೆದಿದೆ. ಚೇತನ್ ಹೆಗ್ಡೆ, ಪ್ರಶಾಂತ್ ರೆಡ್ಡಿ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಬೆಂಗಳೂರಿನ ಸೂಜಿ ಕ್ಯೂ ಕ್ಲಬ್​​ನಲ್ಲಿ ಜ. 23ರ ರಾತ್ರಿ ಈ ಘಟನೆ ನಡೆದಿದೆ. ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಚಂದ್ರಶೇಖರ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಕಗ್ಗಲಿಪುರದಲ್ಲಿ ಈಶ್ವರ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಗಿರಿನಗರ ಠಾಣೆ ಮೆಟ್ಟಿಲೇರಿದ್ದ ಮೃತನ ಪತ್ನಿ ರಶ್ಮಿ ಗಂಡನಿಂದ ನೊಂದಿರುವುದಾಗಿ ದೂರು ನೀಡಿದ್ದರು. ಬಳಿಕ ಇದೇ ವಿಚಾರವಾಗಿ ಎಸಿಪಿ ಭೇಟಿಗೆ ತೆರಳಿದ್ದ ಎರಡು ಕುಟುಂಬಗಳು ವಿವಿಪುರಂ ಎಸಿಪಿ ಬದಲಾಗಿ ಜಯನಗರ ಎಸಿಪಿಯನ್ನು ಭೇಟಿ ಮಾಡಿದ್ದರು. ವಿವಿಪುರಂ ಎಸಿಪಿ ಕೊವಿಡ್ ಹಿನ್ನಲೆಯಲ್ಲಿ ರಜೆಯಲ್ಲಿದ್ದರು. ಈ ವೇಳೆ ಜಯನಗರ ಎಸಿಪಿ ಪ್ರಭಾರ ಎಸಿಪಿಯಾಗಿದ್ದರಿಂದ ಎಸಿಪಿ ಕಚೇರಿಗೆ ಎರಡು ಕಡೆಯವರು ಬಂದಿದ್ದರು. ಮೊದಲಿಗೆ ಇಬ್ಬರನ್ನು ಒಂದು ಮಾಡಿ ಕಳುಹಿಸುವಂತಹ ಪ್ರಯತ್ನ ನಡೆದಿತ್ತು. ಆ ಪ್ರಯತ್ನದ ವೇಳೆ ಗಂಡನ ವಿರುದ್ಧ ಇದ್ದ ಕೆಲವು ಆರೋಪಗಳನ್ನು ಮಾಡಿದ ಮಹಿಳೆ ಎಸಿಪಿ ಎದುರು ಕೆಲವು ದಾಖಲೆಗಳನ್ನು ಕೂಡ ಮುಂದಿಟ್ಟಿದ್ದರು. ಇದೇ ವಿಚಾರವಾಗಿ ಈಶ್ವರ್​ಗೆ ಪ್ರಶ್ನೆ ಮಾಡಿದ್ದ ಎಸಿಪಿ ಶ್ರೀನಿವಾಸ್ ಜೊತೆಗೆ ಮಾತನಾಡಿ, ತನ್ನ ಪತ್ನಿ ಮೇಲೆ ಸಹ ಪ್ರತ್ಯಾರೋಪ ಮಾಡಿದ್ದ. ಒಂದು ಮಾಡುವ ಪ್ರಯತ್ನದ ವೇಳೆ ಗಂಡ ನನಗೆ ಬೇಡ ಎಂದು ಮಹಿಳೆ ಹೇಳಿದ್ದಳು. ಆಗ ಬಸವನಗುಡಿ ಮಹಿಳಾ ಠಾಣೆಗೆ ತೆರಳಿ ದೂರು ನೀಡುವಂತೆ ಎಸಿಪಿ ಸೂಚನೆ ನೀಡಿದ್ದರು. ಬಳಿಕ ಗಂಡನಿಂದ ತನಗೆ ಡಿವೋರ್ಸ್ ಬೇಕೆಂದು ರಶ್ಮಿ ಹೊರ ನಡೆದಿದ್ದಳು.

ಹೆಂಡತಿಯನ್ನು ಕೊಂದ ಗಂಡನಿಗೆ ಜೀವಾವಧಿ ಶಿಕ್ಷೆ:

ಬೀದರ್​ನಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ಅವರಿಂದ ತೀರ್ಪು ಪ್ರಕಟವಾಗಿದೆ. 2016ರ ಮಾರ್ಚ್ 25ರಂದು ಶೇಖಬಾಬಾ ಅವರ ಪತ್ನಿ ನಸೀಬಾಬಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ಆಕೆಗೆ ಮಕ್ಕಳಾಗದಿದ್ದಕ್ಕೆ ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ಭಾಲ್ಕಿ ತಾಲೂಕಿನ ಡೊಣಗಾರಪುರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಭಾಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜನ ಶರಣಗೌಡ ವಾದ ಮಂಡಿಸಿದ್ದರು.

ಧಾರವಾಡದಲ್ಲಿ 40 ಗ್ರಾಂ ಚಿನ್ನ ಕಳ್ಳತನ: ಧಾರವಾಡದ ಚಾಲುಕ್ಯ ನಗರದ ಮನೆಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು, 40 ಗ್ರಾಂ ಬಂಗಾರ, 15 ಲಕ್ಷ ರೂಪಾಯಿ ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಶಾಂತ್ ಮಹೇಂದ್ರಕರ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಧಾರವಾಡ ನಗದಲ್ಲಿ ಹಾಡು ಹಗಲೇ ಕಳ್ಳರು ಕೈಚಳಕ ತೋರಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಮಯ ನೋಡಿ ಕಳ್ಳತನ ಮಾಡಲಾಗಿತ್ತು. ಧಾರವಾಡದ ಚಾಲುಕ್ಯ ನಗರ ಬಡಾವಣೆಯಲ್ಲಿ ಕಳ್ಳತನ ನಡೆದಿತ್ತು. ಈ ವೇಳೆ 40 ಗ್ರಾಂ ಬಂಗಾರ, 1.5 ಲಕ್ಷ ರೂ. ಹಣ ದೋಚಿದ ಕಳ್ಳರು ಪರಾರಿಯಾಗಿದ್ದರು. ಈ ವೇಳೆ ಸ್ಥಳಕ್ಕೆ ವಿದ್ಯಾಗಿರಿ ಪೋಲಿಸರು ಆಗಮಿಸಿದ್ದರು.

ರಾಮನಗರದಲ್ಲಿ ಎಸಿಪಿ ಕಿರುಕುಳದಿಂದ ಆತ್ಮಹತ್ಯೆ: ಎಸಿಪಿ ಕಿರುಕುಳದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ವ್ಯಕ್ತಿ ಡೆತ್‌ನೋಟ್‌ನಲ್ಲಿ 12 ಜನರ ವಿರುದ್ಧ ಆರೋಪಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಡೆತ್ ನೋಟ್ ಆಧಾರದ ಮೇಲೆ ತನಿಖೆ ನಡೆಯುತ್ತಿದೆ ಎಂದು ರಾಮನಗರ ಎಸ್‌ಪಿ ಸಂತೋಷ್ ಬಾಬು ಹೇಳಿಕೆ ನೀಡಿದ್ದಾರೆ. ಜಯನಗರ ಎಸಿಪಿ ಶ್ರೀನಿವಾಸ್ ಮೇಲೂ ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರಿಂದಲೂ ಮಾಹಿತಿ ಪಡೆದಿದ್ದೇವೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸೂಸೈಡ್ ನೋಟ್ ಆಧಾರದ ಮೇಲೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ನಂಜನಗೂಡಿನಲ್ಲಿ ಕಳ್ಳತನ: ಸಾಲ ಕೊಡಿಸುವ ನೆಪದಲ್ಲಿ ಚಿನ್ನಾಭರಣ ಕದ್ದಿದ್ದ ದಂಪತಿ ಸೆರೆಯಾಗಿದ್ದಾರೆ. ಹಂಗಳ ಗ್ರಾಮದ ಪ್ರಸಾದ್, ಭಾಗ್ಯ ಬಂಧಿತ ಆರೋಪಿಗಳಾಗಿದ್ದಾರೆ. ಹುಲ್ಲಹಳ್ಳಿ ಪೊಲೀಸರಿಂದ ಆರೋಪಿಗಳು ದಂಪತಿಯನ್ನು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮೊತ್ತ ಗ್ರಾಮದ ಬಸವಣ್ಣ, ಶಿವಮಣಿ ದಂಪತಿ ಚಿನ್ನ ಕಳವು ಮಾಡಿದ್ದರು. ಸ್ತ್ರೀ ಶಕ್ತಿ ಸಂಘದವರು ಎಂದು ನಂಬಿಸಿ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದರು. ಮೈಸೂರು, ಮಂಡ್ಯ ಜಿಲ್ಲೆಯಲ್ಲೂ ವಂಚಿಸಿರುವ ದಂಪತಿಯ ವಿರುದ್ಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗಿನಲ್ಲಿ ವೃದ್ಧ ಆತ್ಮಹತ್ಯೆ: ಗುಂಡು ಹಾರಿಸಿಕೊಂಡು ವೃದ್ಧ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ನಡೆದಿದೆ. ಅಚ್ಚಪಂಡ ತಮ್ಮಯ್ಯ ಎಂಬ 94 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಚ್ಚಪಂಡ ತಮ್ಮಯ್ಯ ಸಾವನ್ನಪ್ಪಿರುವ ಕುರಿತು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ: ತುಮಕೂರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ, ಬೆದರಿಕೆ, ಜಾತಿ ನಿಂದನೆ ಆರೋಪ ಕೇಳಿಬಂದಿದೆ. ಆರೋಪಿ ವಿರುದ್ಧ ಕ್ರಮ ಜರುಗಿಸುವಂತೆ ತುಮಕೂರು ಗ್ರಾಮಾಂತರ ಠಾಣೆಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾಳೆ. ತುಮಕೂರು ಗ್ರಾಮಾಂತರ ಮೂಲದ ವ್ಯಕ್ತಿಯ ವಿರುದ್ಧ ದೂರು ನೀಡಲಾಗಿದೆ. ತುಮಕೂರು ತಾಲೂಕಿನ ಬಳ್ಳಗೆರೆ ಕಾವಲ್​ನ ಮಹಿಳೆಗೆ ಲೈಂಗಿಕ ದೌರ್ಜನ್ಯ ಯತ್ನ ಹಾಗೂ ಜಾತಿನಿಂದನೆ ಆರೋಪ ಕೇಳಿಬಂದಿದೆ. ಫೋನ್ ಮೂಲಕ ಪರಿಚಯವಾಗಿರುವ ವ್ಯಕ್ತಿ ಪರಿಚಯದ ಬಳಿಕ ಅಸಭ್ಯ ವರ್ತನೆ, ಅಶ್ಲೀಲವಾಗಿ ಮಾತನಾಡುತ್ತಿದ್ದ ಆರೋಪ ಕೇಳಿಬಂದಿತ್ತು. ಫೋನ್ ಮಾಡಿ ಆಕೆಯನ್ನು ಕರೆದು ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ವ್ಯಕ್ತವಾಗಿದೆ. ಆತ ಹೇಳಿದಂತೆ ಅಮಾನಿಕೆರೆಗೆ ಬಂದಿದ್ದ ಮಹಿಳೆಯನ್ನು ಕಾರಿನಲ್ಲಿ ಕುರಿಸಿಕೊಂಡು ಮೈ ಕೈ ಮುಟ್ಟಿದ ಆರೋಪ ಕೇಳಿಬಂದಿತ್ತು. ಬಳಿಕ ನೀನು ಯಾವ ಜಾತಿ ಅಂತ ಕೇಳಿದ ವ್ಯಕ್ತಿಗೆ ಆಕೆ ತಾನು ಎಸ್​ಸಿ ಎಂದು ಹೇಳಿದ್ದಳು. ಆಗ ಜಾತಿ ನಿಂದನೆ ಮಾಡಿ, ಬೈದು ಕಾರಿನಿಂದ ಇಳಿಸಿ ಹೋಗಿದ್ದ. ಬಳಿಕ ಮಹಿಳೆಗೆ ಕರೆ ಮಾಡಿ ನಿನ್ನ ಮದುವೆಯಾಗಲ್ಲ, ಒಂದು ರಾತ್ರಿ ನನ್ನ ಜೊತೆ ಇರು. ಇಲ್ಲವೆಂದರೆ ನಿನ್ನ ಪೋಟೊಸ್ ಹಾಗೂ ಮೆಸೇಜ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದ. ಸದ್ಯ ಈ ಬಗ್ಗೆ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಮಹಿಳೆ ಆ ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವಂತೆ ಮಹಿಳೆ ದೂರು‌ ನೀಡಿದ್ದಾಳೆ.

ಅಕ್ರಮ ಮದ್ಯ ಮಾರಾಟದ ವಿರುದ್ಧ ಮಹಿಳೆಯ ಆಕ್ರೋಶ:

ಗದಗದ ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ಯ ಮಾರಾಟದ ವಿರುದ್ಧ ಸಿಡಿದೆದ್ದ ಮಹಿಳೆಯರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಕಿರಾಣಿ ಅಂಗಡಿ ಹಾಗೂ ಹೋಟೆಲ್​ಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಆಗ್ರಹಿಸಿ ಗ್ರಾ.ಪಂ ಕಚೇರಿಗೆ ಮುತ್ತಿಗೆ ಹಾಕಿ ಮಹಿಳೆಯರು ಒತ್ತಾಯ ಮಾಡಿದ್ದಾರೆ. ಅಕ್ರಮ ಮದ್ಯ ಮಾರಾಟದ ವಿರುದ್ಧ ಸಿಡಿದೆದ್ದ ಮಹಿಳೆಯರು ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಕಿರಾಣಿ ಅಂಗಡಿ ಹಾಗೂ ಹೋಟೆಲ್ ಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ಅಂತ ಕಿಡಿ ಕಾರಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ, ಸದಸ್ಯರು ಏನು ಮಾಡುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರ ಹಾಗೂ ಪಿಡಿಓಗೆ ಮಹಿಳೆಯರು ಮಂಗಳಾರತಿ ಮಾಡಿದ್ದಾರೆ. ಅಕ್ರಮ ಮದ್ಯ ಮಾರಾಟ ಮಾಡೋರಿಗೆ ಸದಸ್ಯರು ಬೆಂಬಲ ನೀಡುತ್ತಿದ್ದಾರಎ ಅಂತ ಕಿಡಿ ಕಾರಿದ್ದಾರೆ. ಕೇಸ್ ಮಾಡಿದ್ರೆ ಅಕ್ರಮ ಮದ್ಯ ಮಾರಾಟ ಮಾಡೋರನ್ನ ಸದಸ್ಯರೇ ಬಿಡಿಸಿಕೊಂಡು ಬರ್ತಾರೆ, ಇದು ನಿಲ್ಲಬೇಕು ಅಂತ ಮಹಿಳೆಯರ ತಾಕೀತು ಮಾಡಿದ್ದಾರೆ.

ಇದನ್ನೂ ಓದಿ: Crime News: ಅಮ್ಮನಿಗೆ ಔಷಧ ತರಲು ಹೋದ ಬಾಲಕಿ ಮೇಲೆ ಪಕ್ಕದ ಮನೆಯವನಿಂದ ಅತ್ಯಾಚಾರ

Crime News: ಸುಪ್ರೀಂ ಕೋರ್ಟ್​ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

Follow us on

Related Stories

Most Read Stories

Click on your DTH Provider to Add TV9 Kannada