Crime News: ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ಶವ ತುಂಬಿ ರೈಲಿನಲ್ಲಿ ಸಾಗಿಸಿದ ಹಂತಕರು

|

Updated on: Aug 06, 2024 | 10:28 PM

ಮುಂಬೈನ ದಾದರ್ ರೈಲು ನಿಲ್ದಾಣದಲ್ಲಿ ಸೂಟ್​ಕೇಸ್​ನಲ್ಲಿ ಶವ ಪತ್ತೆಯಾದ ನಂತರ ಮುಂಬೈ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಸೋಮವಾರ ಬೆಳಗ್ಗೆ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಲಗೇಜ್ ತಪಾಸಣೆ ನಡೆಸುತ್ತಿದ್ದಾಗ ಸೂಟ್‌ಕೇಸ್‌ನಲ್ಲಿ ಶವ ಪತ್ತೆಯಾಗಿದೆ.

Crime News: ಕೊಲೆ ಮಾಡಿ ಸೂಟ್​ಕೇಸ್​ನಲ್ಲಿ ಶವ ತುಂಬಿ ರೈಲಿನಲ್ಲಿ ಸಾಗಿಸಿದ ಹಂತಕರು
ಸಾಂದರ್ಭಿಕ ಚಿತ್ರ
Image Credit source: istock
Follow us on

ಮುಂಬೈ: ದಾದರ್ ರೈಲು ನಿಲ್ದಾಣದಲ್ಲಿ ಬ್ಯಾಗ್‌ನಲ್ಲಿ ಮೃತದೇಹ ಪತ್ತೆಯಾದ ನಂತರ ಮುಂಬೈ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ವ್ಯಕ್ತಿಯನ್ನು ಹತ್ಯೆಗೈದ ನಂತರ ರೈಲಿನಲ್ಲಿ ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸುವಾಗ ಶಂಕಿತರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಜೈ ಪ್ರವೀಣ್ ಚಾವ್ಡಾ ಮತ್ತು ಶಿವಜೀತ್ ಸುರೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಹತ್ಯೆಗೀಡಾದವರನ್ನು ಸಾಂತಾಕ್ರೂಜ್ ನಿವಾಸಿ ಅರ್ಷದ್ ಅಲಿ ಶೇಖ್ ಎಂದು ಗುರುತಿಸಲಾಗಿದೆ. ಹಂತಕರು ಮತ್ತು ಕೊಲೆಯಾದ ವ್ಯಕ್ತಿಯ ನಡುವೆ ಮಹಿಳೆಯ ವಿಷಯಕ್ಕೆ ಜಗಳವಾಗಿತ್ತು. ಆ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.

ದಾದರ್ ರೈಲು ನಿಲ್ದಾಣದಲ್ಲಿ ಬ್ಯಾಗ್‌ನೊಳಗೆ ಮೃತದೇಹ ಪತ್ತೆಯಾದ ನಂತರ ಮುಂಬೈ ಪೊಲೀಸರು ಕೊಲೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಆರೋಪಿಗಳು ಕೊಲೆಯ ನಂತರ ರೈಲಿನಲ್ಲಿ ಸಂತ್ರಸ್ತೆಯ ಅವಶೇಷಗಳನ್ನು ಸೂಟ್‌ಕೇಸ್‌ನಲ್ಲಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಸೋಮವಾರ ಮುಂಜಾನೆ ರೈಲ್ವೇ ಸಂರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೇ ಪೊಲೀಸ್ ಸಿಬ್ಬಂದಿಯ ವಾಡಿಕೆಯ ಲಗೇಜ್ ತಪಾಸಣೆಯ ವೇಳೆ ಈ ಭಯಾನಕ ಘಟನೆ ಪತ್ತೆಯಾಗಿದೆ.

ಇದನ್ನೂ ಓದಿ: Crime News: ಮದುವೆಯಾಗಲು ಒಪ್ಪದ ಯುವತಿಯ ಕತ್ತು ಸೀಳಿ, ಕೊಚ್ಚಿ ಕೊಂದ ಯುವಕ; ಮಹಾರಾಷ್ಟ್ರದಲ್ಲಿ ಭೀಕರ ಕೊಲೆ

ವಿಚಾರಣೆ ನಂತರ ಪಿಧುಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ತನಿಖೆಯ ಪ್ರಕಾರ ಸಾಂತಾಕ್ರೂಜ್ ನಿವಾಸಿ ಅರ್ಷದ್ ಅಲಿ ಶೇಖ್ ಕೊಲೆಗೆ ಮಹಿಳೆಯ ಬಗೆಗಿನ ಜಗಳ ಕಾರಣವಾಯಿತು. ಜೈ ಪ್ರವೀಣ್ ಚಾವ್ಡಾ ಮತ್ತು ಶಿವಜೀತ್ ಸುರೇಂದ್ರ ಸಿಂಗ್ ಎಂಬ ಇಬ್ಬರು ಶಂಕಿತ ಆರೋಪಿಗಳು ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ.

ಜಗಳದ ನಡುವೆ ಕೊಲೆ ಮಾಡಿದ ನಂತರ ಆತಂಕಕ್ಕೀಡಾದ ಹಂತಕರು ಶವವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್‌ನಲ್ಲಿ ಸುತ್ತಿ ಸೂಟ್‌ಕೇಸ್‌ನಲ್ಲಿ ತುಂಬಿಕೊಂಡಿದ್ದರು. ನಂತರ ಏನೂ ಗೊತ್ತಿಲ್ಲದಂತೆ ರೈಲಿನಲ್ಲಿ ಪ್ರಯಾಣಿಸಿದ್ದರು.

ಇದನ್ನೂ ಓದಿ: Crime News: ಸಾಲದ ವಿಚಾರಕ್ಕೆ ಕೊಲೆ; ಸುತ್ತಿಗೆಯಿಂದ ಹೊಡೆದು ಪಕ್ಕದ ಮನೆಯಾಕೆಯನ್ನು ಕೊಂದ ಮಹಿಳೆ

ಭಾನುವಾರ ರಾತ್ರಿ ನಡೆದ ಘಟನೆಯ ನಂತರ, ಶಂಕಿತರು ಶವವನ್ನು ವಿಲೇವಾರಿ ಮಾಡಲು ಟುಟಾರಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ಸಾಗಿಸಲು ಪ್ರಯತ್ನಿಸಿದ್ದರು ಎಂದು ಪೊಲೀಸ್ ವರದಿಗಳು ತಿಳಿಸಿವೆ. ಆದರೆ, ಸೂಟ್​ಕೇಸ್​ನ ತೂಕದಿಂದಾಗಿ ಅನುಮಾನಗೊಂಡು ರೈಲ್ವೆ ಪೊಲೀಸರು ತಪಾಸಣೆ ನಡೆಸಿದಾಗ ಶವ ಇರುವುದು ಪತ್ತೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ