AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಸಾಲದ ವಿಚಾರಕ್ಕೆ ಕೊಲೆ; ಸುತ್ತಿಗೆಯಿಂದ ಹೊಡೆದು ಪಕ್ಕದ ಮನೆಯಾಕೆಯನ್ನು ಕೊಂದ ಮಹಿಳೆ

ಸಾಲದ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಜಗಳವಾಗಿ ಅದು ಕೊಲೆಯಲ್ಲಿ ಅಂತ್ಯವಾಗಿದೆ. ಜಗಳ ವಿಪರೀತಕ್ಕೆ ಹೋಗಿ ಮಹಿಳೆಯೊಬ್ಬರು ನೆರೆಮನೆಯವರನ್ನು ಸುತ್ತಿಗೆಯಿಂದ ಹೊಡೆದು ಕೊಂದಿರುವ ಘಟನೆ ತೆಲಂಗಾಣದ ರಂಗಾರೆಡ್ಡಿಯಲ್ಲಿ ನಡೆದಿದೆ. ಮೃತ ಮಹಿಳೆ ಆರೋಪಿಗೆ ಹಣವನ್ನು ಸಾಲವಾಗಿ ನೀಡಿದ್ದಳು. ಆದರೆ ಆಕೆ ತನ್ನ ಹಣವನ್ನು ಮರಳಿ ಕೇಳಿದಾಗ ಆರೋಪಿ ಮಹಿಳೆ ಜಗಳವಾಡಿ ಸುತ್ತಿಗೆಯಿಂದ ಆಕೆಯ ಮುಖವನ್ನು ಒಡೆದು ಕೊಲೆ ಮಾಡಿದ್ದಾಳೆ.

Crime News: ಸಾಲದ ವಿಚಾರಕ್ಕೆ ಕೊಲೆ; ಸುತ್ತಿಗೆಯಿಂದ ಹೊಡೆದು ಪಕ್ಕದ ಮನೆಯಾಕೆಯನ್ನು ಕೊಂದ ಮಹಿಳೆ
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Aug 03, 2024 | 7:34 PM

Share

ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಎಲ್‌ಬಿ ನಗರ ಪೊಲೀಸ್ ವ್ಯಾಪ್ತಿಯ ಶಿವಗಂಗಾ ಕಾಲೋನಿಯಲ್ಲಿ ಹಣದ ಕುರಿತಾದ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ನೆರೆಮನೆಯಲ್ಲಿ ವಾಸಿಸುತ್ತಿದ್ದ ಇನ್ನೊಬ್ಬ ಮಹಿಳೆಯನ್ನು ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ಮೃತ ನರಸಮ್ಮ ತನ್ನ ನೆರೆಮನೆಯ ಸರೋಜಿನಿ ಎಂಬುವರಿಗೆ 20 ಸಾವಿರ ರೂ. ನೀಡಿದ್ದರು. ನೀಡಿದ ಸಾಲವನ್ನು ನರಸಮ್ಮ ವಾಪಸ್ ಕೇಳಿದಾಗ ಇಬ್ಬರು ಮಹಿಳೆಯರ ನಡುವೆ ತೀವ್ರ ವಾಗ್ವಾದ ನಡೆದಿದೆ.

ಅದೇ ಕೋಪದಲ್ಲಿ ಸರೋಜಿನಿ ನರಸಮ್ಮನ ಮುಖಕ್ಕೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾಳೆ. ಇದರ ಪರಿಣಾಮವಾಗಿ ನರಸಮ್ಮ ದಾರುಣವಾಗಿ ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ 9.30ಕ್ಕೆ ಈ ಬಗ್ಗೆ ಪೊಲೀಸರಿಗೆ ಕರೆ ಬಂದಿದ್ದು, ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಮದುವೆಯಾಗಲು ಒಪ್ಪದ ಯುವತಿಯ ಕತ್ತು ಸೀಳಿ, ಕೊಚ್ಚಿ ಕೊಂದ ಯುವಕ; ಮಹಾರಾಷ್ಟ್ರದಲ್ಲಿ ಭೀಕರ ಕೊಲೆ

ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಸರೋಜಿನಿ ಅವರು ನರಸಮ್ಮ ಅವರ ಮುಖಕ್ಕೆ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸರೋಜಿನಿಯನ್ನು ವಶಕ್ಕೆ ಪಡೆದಿದ್ದೇವೆ ಎಂದು ಎಲ್‌ಬಿ ನಗರ ಠಾಣೆಯ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ