Crime News: ಸುಪ್ರೀಂ ಕೋರ್ಟ್ ಎದುರೇ ಬೆಂಕಿ ಹಚ್ಚಿಕೊಂಡ ದಂಪತಿ; ಪ್ರಾಣಾಪಾಯದಿಂದ ಪಾರು
ಯಾವ ಕಾರಣಕ್ಕಾಗಿ ಆ ಇಬ್ಬರು ಬೆಂಕಿ ಹಚ್ಚಿಕೊಂಡರು ಎಂಬ ವಿಚಾರ ಇನ್ನೂ ತಿಳಿದುಬಂದಿಲ್ಲ. ಆ ಇಬ್ಬರ ಹಿನ್ನೆಲೆಯ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಸುಪ್ರೀಂ ಕೋರ್ಟ್ ಮುಂಭಾಗದಲ್ಲಿ ಗಂಡ-ಹೆಂಡತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಆಘಾತಕಾರಿ ಘಟನೆ ಇಂದು ಬೆಳಗ್ಗೆ ನಡೆದಿದೆ. ಭಗವಾನ್ ದಾಸ್ ರಸ್ತೆಯಲ್ಲಿರುವ ಸುಪ್ರೀಂ ಕೋರ್ಟ್ ಕಾಂಪ್ಲೆಕ್ಸ್ ಎದುರಲ್ಲೇ ಗಂಡ-ಹೆಂಡತಿ ಬೆಂಕಿ ಹಚ್ಚಿಕೊಂಡಿದ್ದಾರೆ. ಹೀಗೆ ಬೆಂಕಿ ಹಚ್ಚಿಕೊಳ್ಳಲು ಕಾರಣವೇನೆಂಬ ಬಗ್ಗೆ ಇನ್ನೂ ತನಿಖೆ ನಡೆಯಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಬ್ಬರು ಕೋರ್ಟ್ನ ಗೇಟ್ ಬಳಿ ಬೆಂಕಿ ಹಚ್ಚಿಕೊಂಡಿದ್ದು ಕಂಡಕೂಡಲೆ ಸೆಕ್ಯುರಿಟಿ ಸಿಬ್ಬಂದಿ ಬ್ಲಾಂಕೆಟ್ ಅನ್ನು ತೆಗೆದುಕೊಂಡು ಓಡಿ ಹೋಗಿ ಬೆಂಕಿ ಆರಿಸಿದ್ದಾರೆ. ಗಾಯಗೊಂಡಿದ್ದ ಅವರಿಬ್ಬರನ್ನೂ ಪೊಲೀಸ್ ವ್ಯಾನ್ನಲ್ಲಿ ರಾಮ್ ಮನೋಹರ್ ಲೂಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಬ್ಬರ ಮೈಮೇಲೆ ಸಾಕಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
When judges n legal system takes decades to decide cases this is what happens, Couple set themselves on fire outside Supreme Court In New Delhi pic.twitter.com/Ijfe6S8pvM
— Anil Mattoo ?? (@AnilMatt00) August 16, 2021
ಯಾವ ಕಾರಣಕ್ಕಾಗಿ ಆ ಇಬ್ಬರು ಬೆಂಕಿ ಹಚ್ಚಿಕೊಂಡರು ಎಂಬ ವಿಚಾರ ಇನ್ನೂ ತಿಳಿದುಬಂದಿಲ್ಲ. ಆ ಇಬ್ಬರ ಹಿನ್ನೆಲೆಯ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಅವರ ಬಳಿಯಿದ್ದ ಐಡಿ ಕಾರ್ಡ್ನಿಂದ ಅವರಿಬ್ಬರೂ ಗಂಡ-ಹೆಂಡತಿ ಎಂಬುದು ಗೊತ್ತಾಗಿದೆ. ಸುಪ್ರೀಂ ಕೋರ್ಟ್ ಆವರಣದ ಒಳಗೆ ಹೋಗಲು ಐಡಿ ಕಾರ್ಡ್ ತೋರಿಸಿದ್ದ ಅವರಿಬ್ಬರಿಗೂ ಸೆಕ್ಯುರಿಟಿ ಸಿಬ್ಬಂದಿ ಒಳಗೆ ಹೋಗಲು ಬಿಟ್ಟಿರಲಿಲ್ಲ. ಅದಾದ ಬಳಿ ಅವರು ಬೆಂಕಿ ಹಚ್ಚಿಕೊಂಡಿದ್ದರು.
ಇದನ್ನೂ ಓದಿ: Crime News: ಪ್ರೀತಿಗಾಗಿ ಗೆಳೆಯನ ತಲೆಯನ್ನೇ ಕತ್ತರಿಸಿದ 17 ವರ್ಷದ ಯುವಕ; ತ್ರಿಕೋನ ಪ್ರೇಮಕತೆಯ ದುರಂತ ಅಂತ್ಯ
(Crime News: Man and woman set themselves on fire outside Supreme Court premises)