Crime News: ಅಪ್ಪ-ಅಮ್ಮ ಬೈದರೆಂದು ಮನೆಯಿಂದ ಓಡಿಹೋಗಿದ್ದ ಅಪ್ರಾಪ್ತೆ ಮೇಲೆ ರೈಲಿನಲ್ಲೇ ಅತ್ಯಾಚಾರ

ತನ್ನ ಹೆತ್ತವರು ಬೈದಿದ್ದರಿಂದ ಆ ಹುಡುಗಿ ಮಹೋಬಾ ಪ್ರದೇಶದಲ್ಲಿರುವ ತನ್ನ ಅಜ್ಜನ ಮನೆಗೆ ಹೊರಟಿದ್ದಳು. ಆಗ ಆಕೆಯ ಮೇಲೆ ರೈಲ್ವೆ ನಿಲ್ದಾಣದ ಸಿಬ್ಬಂದಿ ಅತ್ಯಾಚಾರ ನಡೆಸಿದ್ದಾರೆ.

Crime News: ಅಪ್ಪ-ಅಮ್ಮ ಬೈದರೆಂದು ಮನೆಯಿಂದ ಓಡಿಹೋಗಿದ್ದ ಅಪ್ರಾಪ್ತೆ ಮೇಲೆ ರೈಲಿನಲ್ಲೇ ಅತ್ಯಾಚಾರ
ಸಾಂದರ್ಭಿಕ ಚಿತ್ರ
Edited By:

Updated on: Jan 19, 2023 | 9:32 AM

ನವದೆಹಲಿ: ಅಪ್ಪ-ಅಮ್ಮ ಬೈದಿದ್ದಕ್ಕೆ ಕೋಪ ಮಾಡಿಕೊಂಡು ಮನೆ ಬಿಟ್ಟು ಓಡಿಹೋಗಿದ್ದ ಅಪ್ರಾಪ್ತ ಬಾಲಕಿ ಮೇಲೆ ರೈಲಿನಲ್ಲಿ ಅತ್ಯಾಚಾರ (Rape) ನಡೆಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಇಟಾವಾ (Etawah) ಜಿಲ್ಲೆಯಲ್ಲಿ ನಡೆದಿದೆ. ಇಟಾವಾ ರೈಲು ನಿಲ್ದಾಣದಲ್ಲಿ ರೈಲಿನೊಳಗೆ ರೈಲ್ವೆ ಸಿಬ್ಬಂದಿಯೇ ಆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೆ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಜನವರಿ 15ರಂದು ತನ್ನ ಮನೆಯಿಂದ ಓಡಿಹೋಗಿದ್ದ ಹುಡುಗಿ ಎಲ್ಲಿ ಹೋಗಬೇಕೆಂದು ಗೊತ್ತಾಗದೆ ಇಟಾವಾಗೆ ಹೋಗುವ ರೈಲಿಗೆ ಹತ್ತಿದಾಗ ಈ ಘಟನೆ ಸಂಭವಿಸಿದೆ. ತನ್ನ ಹೆತ್ತವರು ಬೈದಿದ್ದರಿಂದ ಆ ಹುಡುಗಿ ಮಹೋಬಾ ಪ್ರದೇಶದಲ್ಲಿರುವ ತನ್ನ ಅಜ್ಜನ ಮನೆಗೆ ಹೊರಟಿದ್ದಳು. ಆಗ ಆಕೆಯ ಮೇಲೆ ರೈಲ್ವೆ ನಿಲ್ದಾಣದ ಸಿಬ್ಬಂದಿ ಅತ್ಯಾಚಾರ ನಡೆಸಿದ್ದಾರೆ.

ಇದನ್ನೂ ಓದಿ: Crime News: ಕಾಂಚೀಪುರಂನಲ್ಲಿ ಬಾಯ್​ಫ್ರೆಂಡ್ ಎದುರೇ ಕಾಲೇಜು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಈ ಘಟನೆ ಜನವರಿ 15ರಂದು ನಡೆದಿದ್ದು, ಬಾಲಕಿಯ ಪೋಷಕರು ದೂರು ನೀಡಿದಾಗ ಬೆಳಕಿಗೆ ಬಂದಿದೆ. ಇಟಾವಾ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ರೈಲಿನಲ್ಲಿ ನಿಂತಿದ್ದ ಬಾಲಕಿಯ ಮೇಲೆ ರೈಲ್ವೆ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ. ಎಲ್ಲಾ ಪ್ರಯಾಣಿಕರು ಇಟಾವಾದಲ್ಲಿ ರೈಲಿನಿಂದ ಇಳಿದರು. ಆದರೆ, ಆ ಹುಡುಗಿ ಅಲ್ಲಿಯೇ ಕುಳಿತಿದ್ದಳು. ನಂತರ ರೈಲನ್ನು ಸ್ವಚ್ಛಗೊಳಿಸಲು ಬಂದ ರೈಲ್ವೆ ನಿಲ್ದಾಣದ ಸಿಬ್ಬಂದಿ ರೈಲಿನಲ್ಲಿಯೇ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ಮರುದಿನ ಬೆಳಿಗ್ಗೆ ಆ ಅಪ್ರಾಪ್ತ ಬಾಲಕಿ ಇಟಾವಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬಳಿ ತನ್ನ ಅಪ್ಪನಿಗೆ ಕರೆ ಮಾಡಲು ಫೋನ್ ನಂಬರ್ ನೀಡಿದಳು. ಆಗ ಅಪ್ಪನೊಂದಿಗೆ ಮಾತನಾಡಿದ ಆಕೆ ತನ್ನನ್ನು ರೈಲ್ವೆ ನಿಲ್ದಾಣದಿಂದ ಕರೆದುಕೊಂಡು ಹೋಗಲು ಹೇಳಿದಳು. ತನ್ನ ಪೋಷಕರೊಂದಿಗೆ ಝಾನ್ಸಿಯ ತನ್ನ ಮನೆಗೆ ತಲುಪಿದ ನಂತರ ಅತ್ಯಾಚಾರದ ಘಟನೆಯ ಬಗ್ಗೆ ಅವರಿಗೆ ತಿಳಿಸಿದಳು.

ಇದನ್ನೂ ಓದಿ: ಉತ್ತರ ಪ್ರದೇಶ: 15 ವರ್ಷದ ಬಾಲಕಿಯನ್ನು ಅಪಹರಿಸಿ ಒಂದು ತಿಂಗಳ ಕಾಲ ಅತ್ಯಾಚಾರವೆಸಗಿದ 17ರ ಬಾಲಕ

ಇದರಿಂದ ಆಘಾತಕ್ಕೊಳಗಾದ ಬಾಲಕಿಯ ಕುಟುಂಬದ ಸದಸ್ಯರು ಇಟಾವಾ ರೈಲ್ವೆ ನಿಲ್ದಾಣದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಆ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಸರ್ಕಾರಿ ರೈಲ್ವೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ರಾಜ್ ಕಪೂರ್ ಯಾದವ್ ಎಂದು ಗುರುತಿಸಲಾಗಿದೆ. ಅವರು ಇಟಾವಾ ರೈಲ್ವೆಯ ಕ್ಯಾರೇಜ್ ಮತ್ತು ವ್ಯಾಗನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಯು ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us