Crime News: ಪ್ರೇಯಸಿಯ ಗಂಡನನ್ನು ಕೊಂದು, ಶವವನ್ನು ಕತ್ತರಿಸಿ ಬಿಸಾಡಿದ ವ್ಯಕ್ತಿ

TV9 Digital Desk

| Edited By: Sushma Chakre

Updated on: Dec 01, 2021 | 4:57 PM

ತನ್ನ ಹೆಂಡತಿ ಆಕೆಯ ಸಹೋದ್ಯೋಗಿಯಾಗಿದ್ದ ರಾಜು ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಷಯ ತಿಳಿದು ಶಂಕರ್ ಕೆಂಡಾಮಂಡಲರಾಗಿದ್ದರು. ಇದೇ ವಿಷಯಕ್ಕೆ ಅವರಿಬ್ಬರ ನಡುವೆ ಜಗಳವೂ ಆಗುತ್ತಿತ್ತು.

Crime News: ಪ್ರೇಯಸಿಯ ಗಂಡನನ್ನು ಕೊಂದು, ಶವವನ್ನು ಕತ್ತರಿಸಿ ಬಿಸಾಡಿದ ವ್ಯಕ್ತಿ
ಪ್ರಾತಿನಿಧಿಕ ಚಿತ್ರ

ಹೈದರಾಬಾದ್: ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಗಂಡನನ್ನು ಕೊಲೆ ಮಾಡಿ, ಆತನ ಶವವನ್ನು ತುಂಡರಿಸಿದ ಘಟನೆ ನಡೆದಿದೆ. ಛಿದ್ರಗೊಂಡ ಮೃತದೇಹ ರಾಮಗುಂಡಂನಲ್ಲಿ ಪತ್ತೆಯಾಗಿದ್ದು, ಅದಾದ ಎರಡು ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಯನ್ನು ತಾನೇ ಮಾಡಿದ್ದೆಂದು ಸಾಕ್ಷಿ ಸಿಗಬಾರದು ಎಂಬ ಕಾರಣಕ್ಕೆ ಆರೋಪಿ ಕೊಲೆ ಮಾಡಿದ ನಂತರ ಶವವನ್ನು ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ಹಲವು ಪ್ರದೇಶಗಳಲ್ಲಿ ಎಸೆದಿದ್ದ.

ಕೊಲೆ ಮಾಡಿದ ಆರೋಪಿಯನ್ನು ಪಿ. ರಾಜು ಎಂದು ಗುರುತಿಸಲಾಗಿದೆ. ರಾಮಗುಂಡಂನ ಎನ್‌ಟಿಪಿಸಿ ಆಸ್ಪತ್ರೆಯೊಂದರಲ್ಲಿ ಸ್ವೀಪರ್ ಆಗಿದ್ದ ರಾಜು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 31 ವರ್ಷದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆ ಮಹಿಳೆಯ ಗಂಡ ಶಂಕರ್​ಗೆ ಈ ವಿಷಯ ಗೊತ್ತಾಗಿದ್ದರಿಂದ ತನ್ನ ಹೆಂಡತಿ ತನಗೆ ಮೋಸ ಮಾಡುತ್ತಿದ್ದಾಳೆಂಬ ಕೋಪದಿಂದ ಆಕೆಗೆ ಕಿರುಕುಳ ನೀಡುತ್ತಿದ್ದರು.

ಶಂಕರ್ ಅವರ ತುಂಡರಿಸಿದ ತಲೆ, ಕೈಗಳನ್ನು ಪೊಲೀಸರು ವಶಪಡಿಸಿಕೊಂಡು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನವೆಂಬರ್ 26ರಂದು ಶಂಕರ್ ಅವರ ತಾಯಿ ತಮ್ಮ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ನ. 25ರ ರಾತ್ರಿ ಮನೆಯಿಂದ ಹೋದ ಮಗ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು. ನವೆಂಬರ್ 27ರಂದು, ಎನ್‌ಟಿಪಿಸಿ ಕೂಲಿಂಗ್ ಟವರ್‌ಗಳ ಬಳಿ ಮಲ್ಲಯಾಲಪಲ್ಲಿ ಕ್ರಾಸ್‌ರೋಡ್ಸ್ ಬಳಿ ಶಂಕರ್ ಅವರ ತಲೆ ಮತ್ತು ಕೈಗಳು ಪತ್ತೆಯಾಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ತನ್ನ ಹೆಂಡತಿ ಆಕೆಯ ಸಹೋದ್ಯೋಗಿಯಾಗಿದ್ದ ರಾಜು ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಷಯ ತಿಳಿದು ಶಂಕರ್ ಕೆಂಡಾಮಂಡಲರಾಗಿದ್ದರು. ಇದೇ ವಿಷಯಕ್ಕೆ ಅವರಿಬ್ಬರ ನಡುವೆ ಜಗಳವೂ ಆಗುತ್ತಿತ್ತು. ತನ್ನ ಮಗ ನಾಪತ್ತೆಯಾಗಿರುವುದರ ಹಿಂದೆ ಸೊಸೆ ಮತ್ತು ಪ್ರಿಯಕರನ ಕೈವಾಡವಿದೆ ಎಂದು ಶಂಕರ್ ಅವರ ತಾಯಿ ಆರೋಪಿಸಿದ್ದರು.

ತನ್ನ ವಿರುದ್ಧ ಕೇಸ್ ದಾಖಲಾದ ನಂತರ ರಾಜು ಬೈಕ್‌ನಲ್ಲಿ ಕರೀಂನಗರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಆತನನ್ನು ಹಿಡಿದಿದ್ದಾರೆ. ವಿಚಾರಣೆ ವೇಳೆ ಶಂಕರ್​ನನ್ನು ಕೊಂದಿರುವುದಾಗಿ ರಾಜು ಒಪ್ಪಿಕೊಂಡಿದ್ದಾನೆ. ಶಂಕರ್ ತನ್ನ ಪತ್ನಿಯ ಶೀಲವನ್ನು ಶಂಕಿಸಿ ಕಿರುಕುಳ ನೀಡುತ್ತಿದ್ದ. ಹೀಗಾಗಿ, ಈ ಕಿರುಕುಳದ ಕುರಿತು ರಾಜು ಜತೆ ಚರ್ಚಿಸಿ ಶಂಕರ್‌ನನ್ನು ಹತ್ಯೆ ಮಾಡಲು ನಿರ್ಧರಿಸಲಾಗಿತ್ತು.

ನವೆಂಬರ್ 25ರಂದು ರಾಜು ತಮ್ಮ ಭಿನ್ನಾಭಿಪ್ರಾಯವನ್ನು ಚರ್ಚಿಸುವ ನೆಪದಲ್ಲಿ ಶಂಕರ್​ನನ್ನು ಮನೆಗೆ ಕರೆದಿದ್ದ ಎನ್ನಲಾಗಿದೆ. ಆಗ ಶಂಕರ್‌ಗೆ ಮದ್ಯ ಸೇವಿಸುವಂತೆ ಮಾಡಿ ಬಿಯರ್‌ ಬಾಟಲಿಯಿಂದ ತಲೆಯ ಮೇಲೆ ಹಲ್ಲೆ ನಡೆಸಿದ್ದರು. ನಂತರ ದೇಹವನ್ನು ಏಳು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದ. ಆರೋಪಿಗಳು ತೆಲುಗು ಸಿನಿಮಾಗಳಿಂದ ಸ್ಫೂರ್ತಿ ಪಡೆದು ಬೇರೆ ಬೇರೆ ಸ್ಥಳಗಳಲ್ಲಿ ಶವಗಳನ್ನು ಎಸೆದಿದ್ದ ಎಂದು ವರದಿಯಾಗಿದೆ. ಘಟನೆಯ ನಂತರ ರಾಜು ಮತ್ತು ಆತನ ಗೆಳತಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Crime News: 2.5 ಲಕ್ಷಕ್ಕೆ ಗಂಡು ಮಗುವನ್ನು ಮಾರಿದ ತಾಯಿ ಮರುಕ್ಷಣವೇ ಹಣ ಕಳೆದುಕೊಂಡ ಕತೆಯಿದು!

Murder: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada