ಶಾಸಕ ಎಸ್​ಆರ್ ವಿಶ್ವನಾಥ್ ಹತ್ಯೆಗೆ ಸಂಚು ಆರೋಪ; ಪೊಲೀಸರ ವಿಚಾರಣೆ ಬಳಿಕ ವಿಶ್ವನಾಥ್ ಹೇಳಿದ್ದು ಹೀಗೆ

ಕುಳ್ಳ ದೇವರಾಜ್ ಕೊಟ್ಟ ಕ್ಷಮಾಪಣೆ, ಪೆನ್ ಡ್ರೈವ್ ಸಹ ನೀಡಿದ್ದೇನೆ. ಪೆನ್ ಡ್ರೈವ್ ನೋಡಿದಾಗ ಏನೇನೋ ವ್ಯವಹಾರ ಇತ್ತು. ಹೀಗಾಗಿ ರಾತ್ರಿಯೆಲ್ಲಾ ಕುಳಿತುಕೊಂಡು ಸುಪಾರಿ ವಿಚಾರದ ಮಾತುಕತೆಯನ್ನ ಮಾತ್ರ ತೆಗೆದುಕೊಂಡಿದ್ದೀವಿ.

ಶಾಸಕ ಎಸ್​ಆರ್ ವಿಶ್ವನಾಥ್ ಹತ್ಯೆಗೆ ಸಂಚು ಆರೋಪ; ಪೊಲೀಸರ ವಿಚಾರಣೆ ಬಳಿಕ ವಿಶ್ವನಾಥ್ ಹೇಳಿದ್ದು ಹೀಗೆ
ಎಸ್ಆರ್ ವಿಶ್ವನಾಥ್

ಬೆಂಗಳೂರು: ಶಾಸಕ ಎಸ್​ಆರ್ ವಿಶ್ವನಾಥ್ ಹತ್ಯೆಗೆ ಸಂಚು ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಿಚಾರಣೆ ಬಳಿಕ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ನನ್ನ ಬಳಿ ಇದ್ದ ಎಲ್ಲ ದಾಖಲೆ ಪೊಲೀಸರಿಗೆ ನೀಡಿದ್ದೇನೆ. ಪೊಲೀಸರು ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗುತ್ತೇನೆ. ನಮಗೆ ವಿಡಿಯೋ, ದಾಖಲೆ ಸಿಕ್ಕಿದ್ದು ಮೊನ್ನೆ ರಾತ್ರಿ7.30ಕ್ಕೆ. ಏನೂ ಮಾಹಿತಿ ಇಲ್ಲದೆ ದೂರು ಕೊಡಲು ಆಗುವುದಿಲ್ಲ. ಹೆಚ್ಚಿನ ತನಿಖೆ ಬೇಕಾದರೆ ಮಾಡೋಣ ಎಂದು ಸಿಎಂ ಹೇಳಿದ್ದಾರೆ ಅಂತ ತಿಳಿಸಿದ್ದಾರೆ.

ಕುಳ್ಳ ದೇವರಾಜ್ ಕೊಟ್ಟ ಕ್ಷಮಾಪಣೆ, ಪೆನ್ ಡ್ರೈವ್ ಸಹ ನೀಡಿದ್ದೇನೆ. ಪೆನ್ ಡ್ರೈವ್ ನೋಡಿದಾಗ ಏನೇನೋ ವ್ಯವಹಾರ ಇತ್ತು. ಹೀಗಾಗಿ ರಾತ್ರಿಯೆಲ್ಲಾ ಕುಳಿತುಕೊಂಡು ಸುಪಾರಿ ವಿಚಾರದ ಮಾತುಕತೆಯನ್ನ ಮಾತ್ರ ತೆಗೆದುಕೊಂಡಿದ್ದೀವಿ. ಈಗ ಎಲ್ಲಾ ದಾಖಲೆ ಕೊಟ್ಟಿದ್ದೇನೆ. ಶ್ರೇಯಸ್ ಹೋಟೆಲ್ನಲ್ಲಿ ಮೂರು ಜನ ಇದ್ದರೆಂದು ಗೊತ್ತಾಯ್ತು. ಹೊರಗಡೆ ನಾಲ್ಕೈದು ಜನ ಇದ್ದರು ಅಂತ ಗೊತ್ತಾಗುತ್ತಿದೆ ಅಂತ ಶಾಸಕ ವಿಶ್ವನಾಥ್ ಹೇಳಿದರು.

ಎಫ್ಐಆರ್ ಆದ ತಕ್ಷಣ ಬಂಧನ ಅಷ್ಟೇ ಅಲ್ಲಾ, ತನಿಖೆ ಆಗಬೇಕಿದೆ. ಬಹಳ ದಿನದಿಂದ ಇದೆಲ್ಲಾ ನಡೆಯುತ್ತಿದೆ. ನಾನು ಕೂಡಾ ಅಸಡ್ಡೆ ಮಾಡಿದೆ ಅನಿಸುತ್ತೆ. ವಿಡಿಯೋ, ಆಡಿಯೋ ಸಿಕ್ಕ ಮೇಲೆಯೇ ಗೊತ್ತಾಗಿದ್ದು ಎಂದರು. ನನ್ನ ದೂರಲ್ಲಿ ಕುಳ್ಳ ದೇವರಾಜ್ ಹೆಸರನ್ನು ಸೇರಿಸಿದ್ದೇನೆ. ಮುಂದಿನ ದಿನದಲ್ಲಿ ಹೆಸರು ಸೇರ್ಪಡೆಗೊಳ್ಳಲಿದೆ. ಪ್ರಕರಣದಲ್ಲಿ ಎಷ್ಟು ಜನ ಇದ್ದಾರೆ ಅನ್ನೋದು ಗೊತ್ತಿಲ್ಲ. ಆಂಧ್ರದಿಂದ ಸುಪಾರಿ ಕಿಲ್ಲರ್ಸ್ ಬಂದಿರೋದರ ಬಗ್ಗೆಯೂ ಕುಳ್ಳ ದೇವರಾಜ್ ಮಾತಾಡಿದ್ದಾರೆ. ಎಫ್ಐಆರ್ ಆದ ತಕ್ಷಣ ಗೋಪಾಲಕೃಷ್ಣ ಬಂಧಿಸಬೇಕಂತ ಅಲ್ಲ. ತನಿಖೆ ಆಗಲಿ, ತಪ್ಪಿಸಿಕೊಂಡು ಹೋದರೆ ಅಪರಾಧಿ ಆಗ್ತಾನೆ ಅಂತ ವಿಶ್ವನಾಥ್ ಅಭಿಪ್ರಾಯಪಟ್ಟರು.

ಸಿಎಂ ಜೊತೆ ಚರ್ಚೆ ಮುಖ್ಯಮಂತ್ರಿಗಳ ಜೊತೆ ತನಿಖೆಯ ವಿಚಾರವಾಗಿ ಚರ್ಚೆ ನಡೆಸಿದ್ದೇವೆ. ಸಿಎಂ ಯಾವುದೇ ತನಿಖೆಗೆ ನೀಡಿದರು ನಾನು ಬದ್ಧನಾಗಿರುತ್ತೇನೆ. ಹೀಗಾಗಿ ಯಾವುದೇ ಉನ್ನತ ತನಿಖೆಗೆ ನೀಡಿದರು ಪರವಾಗಿಲ್ಲ. ಕುಳ್ಳ ದೇವರಾಜ್ ನನ್ನ ಬಂಟ ನಲ್ಲ. ನನಗೆ ಬಂಟರು ಬೇರೆ ಇದ್ದಾರೆ. 2 ವರ್ಷಗಳ ಹಿಂದೆ ಪರಿಚಯ ಅಷ್ಟೇ. ಆತನ ಹೆಸರನ್ನು ಕೂಡ ದೂರಿನಲ್ಲಿ ನೀಡಿದ್ದೇನೆ. ಪ್ರಕರಣದ ದಿಕ್ಕು ತಪ್ಪಿಸಲು ಗೋಪಾಲಕೃಷ್ಣ ಈ ರೀತಿಯಾಗಿ ಹೇಳಿಕೆಯನ್ನು ನೀಡುತ್ತಿದ್ದಾನೆ ಎಂದರು.

ಕಟೀಲು ಆಗ್ರಹ ಉನ್ನತ ಮಟ್ಟದ ತನಿಖೆಯಾಗಬೇಕು ಅಂತ ಕಟೀಲು ಆಗ್ರಹಿಸಿದ್ದಾರೆ. ಈ ಪ್ರಕರಣ ಕಾಂಗ್ರೆಸ್‌ನ ಗೂಂಡಾ ಸಂಸ್ಕೃತಿ ತೋರಿಸುತ್ತದೆ. ದ್ವೇಷ ರಾಜಕಾರಣ ಮಾಡುವುದು ಸರಿಯಲ್ಲ. ವಿಶ್ವನಾಥ್‌ಗೆ ರಕ್ಷಣೆ ಕೊಡಬೇಕು.ಕಾಂಗ್ರೆಸ್ ಪಕ್ಷ ಗೋಪಾಲಕೃಷ್ಣ ಮೇಲೆ ಕ್ರಮಕೈಗೊಳ್ಳಬೇಕು ಎಂದರು.

ವಿಶ್ವನಾಥ್ ಆಗಿರೋದಕ್ಕೆ ಇವನನ್ನು ಇಷ್ಟು ಮಾತ್ರಕ್ಕೆ ಬಿಟ್ಟಿದ್ದಾರೆ. ಬೇರೆ ಯಾರಾದರೂ ಆಗಿರುತ್ತಿದ್ದರೆ ಏನು ಮಾಡಬೇಕಿತ್ತೋ ಮಾಡುತ್ತಿದ್ದರು. ನಾನೂ ಇವನಿಂದ ಸಾಕಷ್ಟು ಅನುಭವಿಸಿದ್ದೇನೆ. ನಾನು ಕಾರ್ಪೋರೇಟರ್ ಆಗಿದ್ದಾಗ ನನ್ನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬಹಳಷ್ಟು ಅವಮಾನ ಮಾಡಿದ್ದ ಅಂತ ಟಿವಿ9 ಗೆ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ನೇತ್ರ ಪಲ್ಲವಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ

ಬಿಜೆಪಿ ಶಾಸಕ ಎಸ್​ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ ಪ್ರಕರಣ: ಗೋಪಾಲಕೃಷ್ಣ, ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲು

ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ ಪ್ರಕರಣ: ಆರೋಪಿಗಳ ವಿರುದ್ಧ ನೋಟಿಸ್ ಜಾರಿ, ರಾಜಾನುಕುಂಟೆಯಲ್ಲಿಂದು ಪ್ರತಿಭಟನೆ

Published On - 1:10 pm, Thu, 2 December 21

Click on your DTH Provider to Add TV9 Kannada