Crime News: ಬಸ್ ಸ್ಟಾಂಡ್​ನಲ್ಲಿ ಕುಳಿತಿದ್ದ ವ್ಯಕ್ತಿಗೆ ಕರೆಂಟ್ ಶಾಕ್:​ ಸ್ಥಳದಲ್ಲೇ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: May 15, 2022 | 7:28 AM

ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂನ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಮೃತದೇಹ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮೃತರ ಕುಟುಂಬಸ್ಥರ ಪತ್ತೆಗಾಗಿ ಹೆಬ್ಬಾಳ ಪೊಲೀಸರು ಮುಂದಾಗಿದ್ದಾರೆ.‌

Crime News: ಬಸ್ ಸ್ಟಾಂಡ್​ನಲ್ಲಿ ಕುಳಿತಿದ್ದ ವ್ಯಕ್ತಿಗೆ ಕರೆಂಟ್ ಶಾಕ್:​ ಸ್ಥಳದಲ್ಲೇ ಸಾವು
ಪ್ರಾತಿನಿಧಿಕ ಚಿತ್ರ
Image Credit source: suddikanaja.com
Follow us on

ಬೆಂಗಳೂರು: ಬಸ್ ಸ್ಟಾಂಡ್​ನಲ್ಲಿ ಕುಳಿತಿದ್ದ ವ್ಯಕ್ತಿ ಕರೆಂಟ್ ಶಾಕ್​ನಿಂದ ಸಾವನಪ್ಪಿರುವಂತಹ ಘಟನೆ ಬೆಂಗಳೂರಿನ ಹೆಬ್ಬಾಳ ಬಸ್ ನಿಲ್ದಾಣದಲ್ಲಿ ನೆನ್ನೆ ರಾತ್ರಿ ೧೦ ಗಂಟೆ ಸುಮಾರಿಗೆ ನಡೆದಿದೆ. ಮೃತ ವ್ಯಕ್ತಿಯ ಗುರುತು ಇನ್ನು ತಿಳಿದು ಬಂದಿಲ್ಲ. ರಾತ್ರಿ ನಗರದಲ್ಲಿ ಸುರಿಯುತಿದ್ದ ಭಾರಿ ಮಳೆ ನಡುವೆ ಅವಘಡವೊಂದು ಸಂಭವಿಸಿದೆ. ವ್ಯಕ್ತಿ ಬಸ್ ಸ್ಟಾಪ್​ನಲ್ಲಿ ಕುಳಿತಿದ್ದನಂತೆ. ಈ ವೇಳೆ ಕುಳಿತ ಸ್ಥಳದಿಂದ ಕುಸಿದು ಬಿದ್ದು ಆತ ಮೃತಪಟ್ಟಿದ್ದಾನೆ. ಆದ್ರೆ ಸಾವಿಗೆ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ. ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂನ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಮೃತದೇಹ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮೃತರ ಕುಟುಂಬಸ್ಥರ ಪತ್ತೆಗಾಗಿ ಹೆಬ್ಬಾಳ ಪೊಲೀಸರು ಮುಂದಾಗಿದ್ದಾರೆ.‌

ಶಾಸಕ ಜಿ.ಟಿ. ದೇವೇಗೌಡ ಮೊಮ್ಮಗಳು ಸಾವು

ಮೈಸೂರು: ಶಾಸಕ ಜಿ.ಟಿ. ದೇವೇಗೌಡ ಮೂರು ವರ್ಷದ ಮೊಮ್ಮಗಳು ಗೌರಿ, ಧೀರ್ಘ ಕಾಲದ ಅನಾರೋಗ್ಯ ಹಿನ್ನೆಲೆ ನಿಧನ ಹೊಂದಿದ್ದಾಳೆ. ಗೌರಿ ಜಿಟಿ ದೇವೇಗೌಡರ ಪುತ್ರ ಜಿ.ಡಿ. ಹರೀಶ್ ಗೌಡ ಮಗಳು. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೌರಿ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯರಾತ್ರಿ ನಿಧನ ಹೊಂದಿದ್ದಾಳೆ.

ಗಾಂಜಾ ಮತ್ತಿನಲ್ಲಿ ವ್ಯಕ್ತಿ ಓರ್ವ ಪುಂಡಾಟಿಕೆ

ನೆಲಮಂಗಲ: ರಾತ್ರಿ ಅಪಾರ್ಟ್ಮೆಂಟ್ ಮುಂದೆ ಗಾಂಜಾ ಮತ್ತಿನಲ್ಲಿ ವ್ಯಕ್ತಿ ಓರ್ವ ಪುಂಡಾಟಿಕೆ ಮಾಡಿದ್ದಾನೆ. ಹೆಸರಘಟ್ಟ ರಸ್ತೆ ಬಾಗಲಗುಂಟೆ ಬಳಿಯ ಸಿಲ್ವರ್ ಸ್ಪ್ರಿಂಗ್ ಅಪಾರ್ಟ್ಮೆಂಟ್​ನಲ್ಲಿ ಘಟನೆ ನಡೆದಿದ್ದು, ಒಳಬರುವ ಓರ್ವ ನಿವಾಸಿಗೆ ಥಳಿಸಿದ್ದಾನೆ. ಅತಿಯಾದ ಮತ್ತಿನಲ್ಲಿ ಮಳೆಯನ್ನ ಲೆಕ್ಕಿಸದೆ ಪುಂಡಾಟಿಕೆ ಹಿನ್ನೆಲೆ ಕೆಲಕಾಲ ನಿವಾಸಿಗಳಿಗೆ ವ್ಯಕ್ತಿ ಭಯದ ಅತಃಕ ಮೂಡಿಸಿದ್ದ. 35ವರ್ಷದ ಅಪರಿಚಿತ ವ್ಯಕ್ತಿಯನ್ನ ಬಾಗಲಗುಂಟೆ ಪೊಲೀಸರು ಠಾಣೆಗೆ ಕರೆದೊಯ್ಯದಿದ್ದು, ಅಪಾರ್ಟ್ಮೆಂಟ್ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಅಬಕಾರಿ ಇಲಾಖೆ ಡಿಸಿ ಸೆಲೀನಾ ಎಸಿಬಿ ಬಲೆಗೆ

ಕೊಪ್ಪಳ: ಲಂಚಕ್ಕೆ ಕೈಯೊಡ್ಡುತ್ತಿದ್ದಾಗ ಅಬಕಾರಿ ಡಿಸಿಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳ(ACB)ದ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಹೊಸ ಬಾರ್​​​​ಗೆ ಲೈಸೆನ್ಸ್ ನೀಡಲು 3 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅದಿಕಾರಿಗಳು ದಾಳಿ ನಡೆಸಿ ಕೊಪ್ಪಳ ಅಬಕಾರಿ ಇಲಾಖೆ ಡಿಸಿ ಸೆಲೀನಾ ಅವರನ್ನು ಬಂಧಿಸಿದ್ದಾರೆ. ಹೊಸ ಬಾರ್​​​​ಗೆ ಲೈಸೆನ್ಸ್ ನೀಡಲು ಶೈಲಜಾ ಪ್ರಭಾಕರಗೌಡ ಎಂಬುವರಿಗೆ ಸೆಲೀನಾ ಅವರು 3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಕುಷ್ಟಗಿ ಪಟ್ಟಣದಲ್ಲಿ ಶೈಲಜಾ ಅವರಿಂದ 3 ಲಕ್ಷ ಹಣದ ಪೈಕಿ 1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಸೆಲೀನಾ, ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:16 am, Sun, 15 May 22